ರಣವೀರ್​ ಸಿಂಗ್​ಗೆ ಸರಿಸಾಟಿಯಾಗಿ ಸಂಭಾವನೆ ಕೇಳಿದ ದೀಪಿಕಾ; ಸಿನಿಮಾದಿಂದಲೇ ಪಡುಕೋಣೆ ಔಟ್​

‘ಬೈಜು ಬವ್ರಾ’ ಸಿನಿಮಾದಲ್ಲಿ ರಣವೀರ್​ ಸಿಂಗ್​ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ನಾಯಕಿಯಾಬೇಕಿತ್ತು. ಆದರೆ, ಅವರು ಈ ಚಿತ್ರಕ್ಕೆ ನಾಯಕಿಯಾಗೋಕೆ ನೋ ಎಂದಿದ್ದಾರಂತೆ.

ರಣವೀರ್​ ಸಿಂಗ್​ಗೆ ಸರಿಸಾಟಿಯಾಗಿ ಸಂಭಾವನೆ ಕೇಳಿದ ದೀಪಿಕಾ; ಸಿನಿಮಾದಿಂದಲೇ ಪಡುಕೋಣೆ ಔಟ್​
ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 07, 2021 | 6:34 PM

‘ರಾಮ್​ ಲೀಲಾ’, ‘ಬಾಜಿರಾವ್​ ಮಸ್ತಾನಿ’ ಮತ್ತು ‘ಪದ್ಮಾವತ್’​ ಬಾಲಿವುಡ್​ ಪಾಲಿಗೆ ಸೂಪರ್​ ಹಿಟ್​ ಸಿನಿಮಾಗಳು. ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆ ಈ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ದೀಪಿಕಾ ವೃತ್ತಿ ಜೀವನದ ತೂಕವನ್ನು ಈ ಸಿನಿಮಾ ಹೆಚ್ಚಿಸಿತ್ತು. ಇವರು ಮುಂದಿನ ದಿನಗಳಲ್ಲಿ ಮತ್ತೆ ಕೆಲಸ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ರಣವೀರ್​ ಸಿಂಗ್​ಗೆ ಕೊಟ್ಟಷ್ಟೇ ಸಂಭಾವನೆಯನ್ನು ತಮಗೂ ಕೊಡಬೇಕು ಎಂದು ದೀಪಿಕಾ ಹಠ ಹಿಡಿದಿದ್ದರು. ಈ ಕಾರಣಕ್ಕೆ ಅವರು ಸಿನಿಮಾದಿಂದ ಹೊರ ನಡೆದಿದ್ದಾರಂತೆ.

‘ಬೈಜು ಬವ್ರಾ’ ಸಿನಿಮಾದಲ್ಲಿ ರಣವೀರ್​ ಸಿಂಗ್​ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ನಾಯಕಿಯಾಬೇಕಿತ್ತು. ಆದರೆ, ಅವರು ಈ ಚಿತ್ರಕ್ಕೆ ನಾಯಕಿಯಾಗೋಕೆ ನೋ ಎಂದಿದ್ದಾರಂತೆ. ಇದಕ್ಕೆ ಕಾರಣ ಸಂಭಾವನೆ.

ರಣವೀರ್​ ಸಿಂಗ್​ಗೆ ಸರಿಸಾಟಿಯಾಗಿ ದೀಪಿಕಾ ಸಂಭಾವನೆ ಕೇಳಿದ್ದಾರೆ. ಆದರೆ, ಇದಕ್ಕೆ ಸಂಜಯ್​ ಲೀಲಾ ಬನ್ಸಾಲಿ ಒಪ್ಪಿಗೆ ಸೂಚಿಸಿಲ್ಲ. ಈ ಕಾರಣಕ್ಕೆ ದೀಪಿಕಾ ಅವರು ಸಂಯ್​ ಲೀಲಾ ಬನ್ಸಾಲಿ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕರೀನಾ ಕಪೂರ್​ ಸೀತೆ ಪಾತ್ರ ಮಾಡೋಕೆ 12 ಕೋಟಿ ಬೇಡಿಕೆ ಇಟ್ಟಿದ್ದ ವಿಚಾರ ಸಾಕಷ್ಟು ಸುದ್ದಿಯಾಗಿತ್ತು.

ಇನ್ನು, ಸಂಜಯ್​ ಲೀಲಾ ಬನ್ಸಾಲಿ ಮತ್ತು ದೀಪಿಕಾ ನಡುವೆ ಯಾವುದೂ ಸರಿ ಇಲ್ಲ ಎನ್ನುವ ಬಗ್ಗೆ ಬಾಲಿವುಡ್​ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ. ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವನ್ನು ಸಂಜಯ್​ ಲೀಲ್​ ಬನ್ಸಾಲಿ ನಿರ್ದೇಶವಿದೆ. ಈ ಚಿತ್ರದಲ್ಲಿ ವಿಶೇಷ ಸಾಂಗ್​ ಒಂದರಲ್ಲಿ ನಟಿಸೋಕೆ ದೀಪಿಕಾಗೆ ಬನ್ಸಾಲಿ ಆಫರ್​ ನೀಡಿದ್ದರಂತೆ. ಆದರೆ, ಈ ಆಫರ್​ಅನ್ನು ದೀಪಿಕಾ ಕಡ್ಡಿಮುರಿದಂತೆ ತಿರಸ್ಕರಿಸಿದ್ದಾರೆ. ನಂತರ ‘ಹೀರಾ ಮಂಡಿ’ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಆಫರ್​ ಕೂಡ ನೀಡಲಾಯಿತಂತೆ. ಆಗಲೂ ದೀಪಿಕಾ ಈ ಆಫರ್​ ತಿರಸ್ಕರಿಸಿದ್ದರು.

ಇದನ್ನೂ ಓದಿ: ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗೆ ಗುಡ್​ ಬೈ ಹೇಳಿದ ರಣಬೀರ್​; ಕಾರಣವೇನು?