AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhuj: ‘ದೇಶದ ಮಣ್ಣಿನ ಕಣಕ್ಕಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ’; ಮನಸೂರೆಗೊಳ್ಳುತ್ತಿದೆ ಭುಜ್ ಚಿತ್ರದ ದೇಶಭಕ್ತಿ ಗೀತೆ

Desh Mere: ಭಾರತ ಮತ್ತು ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ ಯುದ್ಧವನ್ನು ಆಧರಿಸಿದ ‘ಭುಜ್’ ಚಿತ್ರದ ಹೊಸ ಗೀತೆ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳ ಮನಸೆಳೆಯುತ್ತಿದೆ.

Bhuj: ‘ದೇಶದ ಮಣ್ಣಿನ ಕಣಕ್ಕಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ’; ಮನಸೂರೆಗೊಳ್ಳುತ್ತಿದೆ ಭುಜ್ ಚಿತ್ರದ ದೇಶಭಕ್ತಿ ಗೀತೆ
ಭುಜ್ ಚಿತ್ರದ ಪೋಸ್ಟರ್
TV9 Web
| Updated By: shivaprasad.hs|

Updated on:Aug 08, 2021 | 5:21 PM

Share

1971ರ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಭುಜ್ ಪ್ರದೇಶದಲ್ಲಿ ನಡೆದ ಘಟನೆಯನ್ನು ಆಧರಿಸಿ ನಿರ್ಮಾಣವಾಗಿರುವ ‘ಭುಜ್’- ದಿ ಪ್ರೈಡ್ ಆಫ್ ಇಂಡಿಯಾ(Bhuj- The Pride Of India) ಚಿತ್ರದ ದೇಶಭಕ್ತಿ ಗೀತೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅರಿಜಿತ್ ಸಿಂಗ್ ಕಂಠದಲ್ಲಿ ಮೂಡಿಬಂದಿರುವ ‘ದೇಶ್ ಮೇರೆ’ ಗೀತೆ ದೇಶ ಪ್ರೇಮದ ಕುರಿತಾಗಿದ್ದು, ‘ದೇಶಕ್ಕಾಗಿ ಏನನ್ನು ಮಾಡಬೇಕಾದರೂ ಸಿದ್ಧ, ಇಲ್ಲಿನ ಮಣ್ಣಿನ ಕಣ್ಕ್ಕಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ’ ಎಂಬ ಸಾಹಿತ್ಯವನ್ನು ಹೊಂದಿದೆ. ಈ ಗೀತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮನೋಜ್ ಮುಂತಶೀರ್ ಬರೆದಿರುವ ಸಾಹಿತ್ಯಕ್ಕೆ, ಆರ್ಕೊ(Arko) ಸಂಗೀತ ನಿರ್ದೇಶನ ಮಾಡಿದ್ದಾರೆ.

ಭುಜ್ ಚಿತ್ರದ ‘ದೇಶ್ ಮೇರೆ’ ಹಾಡು ಇಲ್ಲಿದೆ:

‘ಭುಜ್’ ಚಿತ್ರವು ಸ್ವಾತಂತ್ರ್ಯ ದಿನಾಚರಣೆಯ ದಿನದಂದು (ಆಗಸ್ಟ್ 15) ಹಾಟ್​ಸ್ಟಾರ್​ನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಈ ಯುದ್ಧದಲ್ಲಿನ(1971) ಭಾರತದ ವಿಜಯಕ್ಕೆ ಈಗ 50 ವರ್ಷಗಳು ತುಂಬುತ್ತಿವೆ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, ಭಾರತೀಯ ಸ್ಕ್ವಾರ್ಡನ್ ವಾಯು ಸೇನೆಯ ಮುಖ್ಯಸ್ಥರಾಗಿದ್ದ ವಿಜಯ್ ಕಾರ್ಣಿಕ್ ಅವರ ಜೀವನಗಾಥೆಯನ್ನು ಪ್ರಸ್ತುತಪಡಿಸಲಿದೆ. 1971ರಲ್ಲಿ ವಿಜಯ್ ಕಾರ್ಣಿಕ್ ಅವರು ಭುಜ್ ಏರ್​ಪೋರ್ಟ್​ನ ಉಸ್ತುವಾರಿ ವಹಿಸಿಕೊಂಡಿದ್ದರು. ದೇಶದ ರಕ್ಷಣೆಗಾಗಿ ಭುಜ್​ನ ಹಳ್ಳಿಯೊಂದರ 300 ಜನ ಮಹಿಳೆಯರನ್ನು ಬಳಸಿಕೊಂಡು ಆ ವಿಮಾನ ನಿಲ್ದಾಣವನ್ನು ಹೇಗೆ ಮರು ನಿರ್ಮಿಸಿದರು ಎಂಬುದನ್ನು ಕತೆಯು ಕಟ್ಟಿಕೊಡಲಿದೆ.

ಅಜಯ್ ದೇವಗನ್ ಹಂಚಿಕೊಂಡಿರುವ ಟ್ವೀಟ್:

ಭುಜ್ ಚಿತ್ರದಲ್ಲಿ ಬೃಹತ್ ತಾರಾಗಣವಿದ್ದು, ಅಜಯ್ ದೇವಗನ್ ಅವರೊಂದಿಗೆ ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ, ಶರದ ಕೇಲ್ಕರ್ ಮೊದಲಾದ ದೊಡ್ಡ ತಾರಾಗಣವೇ ಇದೆ. ಕನ್ನಡದ ಬೆಡಗಿ ಪ್ರಣೀತಾ ಸುಭಾಷ್ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅಭಿಷೇಕ್ ದುಧೈಯಾ ನಿರ್ದೇಶಿಸುತ್ತಿದ್ದು, ಭೂಷಣ್ ಕುಮಾರ್, ಗಿನ್ನಿ ಖನುಜಾ ಸೇರಿದಂತೆ ಏಳು ಜನ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.  ಅಮರ್ ಮೋಹಿಲೆ ಅವರ ಹಿನ್ನೆಲೆ ಸಂಗೀತ ಹಾಗೂ ಅಸೀಮ್ ಬಜಾಜ್ ಅವರ ಛಾಯಾಗ್ರಹಣ ‘ಭುಜ್’ ಚಿತ್ರಕ್ಕಿದೆ.

ಇದನ್ನೂ ಓದಿ:

Bhuj: ನಾನು ಬದುಕಿರುವುದು ಪ್ರಾಣ ತ್ಯಾಗಕ್ಕಾಗಿ; ನನ್ನ ಹೆಸರೇ ಸಿಪಾಯಿ- ಎನ್ನುತ್ತಿದ್ದಾರೆ ಅಜಯ್ ದೇವ್​ಗನ್

(Desh Mere song from the movie Bhuj released and creates sensation in Social Media)

Published On - 5:19 pm, Sun, 8 August 21