ಕೇವಲ 11ರೂ ಪಡೆದು ‘ಭಾಗ್ ಮಿಲ್ಖಾ ಭಾಗ್’​ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಈ ನಟಿ; ಕಾರಣವೇನು?

Sonam Kapoor: ಬಾಲಿವುಡ್​ನ ಯಶಸ್ವೀ ಚಿತ್ರಗಳಲ್ಲೊಂದು ಎಂದು ಕರೆಯಲ್ಪಡುವ ‘ಭಾಗ್ ಮಿಲ್ಖಾ ಭಾಗ್​’ ಚಿತ್ರದಲ್ಲಿ ಬಾಲಿವುಡ್​ನ ಖ್ಯಾತ ನಟಿಯೊಬ್ಬರು ಕೇವಲ 11ರೂ ಸಂಭಾವನೆಗೆ ನಟಿಸಿದ್ದರು ಎಂಬ ಕುತೂಹಲಕಾರಿ ಅಂಶ ಗೊತ್ತೇ? ಇದನ್ನು ಸ್ವತಃ ಚಿತ್ರದ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ತಮ್ಮ ಆತ್ಮಕತೆಯಲ್ಲಿ ಹಂಚಿಕೊಂಡಿದ್ದಾರೆ.

ಕೇವಲ 11ರೂ ಪಡೆದು ‘ಭಾಗ್ ಮಿಲ್ಖಾ ಭಾಗ್’​ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಈ ನಟಿ; ಕಾರಣವೇನು?
‘ಭಾಗ್ ಮಿಲ್ಖಾ ಭಾಗ್’ ಚಿತ್ರದಲ್ಲಿ ಸೋನಮ್ ಕಪೂರ್ ಮತ್ತು ಫರ್ಹಾನ್ ಅಖ್ತರ್
Follow us
TV9 Web
| Updated By: shivaprasad.hs

Updated on:Aug 11, 2021 | 12:24 PM

ಕೆಲವು ಚಲನಚಿತ್ರ ನಟ, ನಟಿಯರು ಚಿತ್ರದ ಕಥೆ ಇಷ್ಟವಾದರೆ ಉಚಿತವಾಗಿಯೋ ಅಥವಾ ತೀರಾ ಕಡಿಮೆ ಸಂಭಾವನೆಯನ್ನೋ ಪಡೆದೋ ನಟಿಸುತ್ತಾರೆ. ಇದಕ್ಕೆ ಒಂದು ಮಹತ್ತರ ಚಿತ್ರದ ಭಾಗವಾಗಬೇಕು ಎಂಬ ತುಡಿತ, ಕತೆ ಅವರ ಜೀವನಕ್ಕೆ ಎಲ್ಲೋ ಸಂಬಂಧವಿದೆ ಎಂಬ ಭಾವನೆಯೋ ಕಾರಣ ಬೀರಿರಬಹುದು. ಇಂಥದ್ದೇ ಒಂದು ಸಂದರ್ಭದಲ್ಲಿ ಬಾಲಿವುಡ್​ನ ಖ್ಯಾತ ನಟಿಯೊಬ್ಬರು ಬಯೋಪಿಕ್​ ಚಿತ್ರಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ‘ಭಾಗ್ ಮಿಲ್ಖಾ ಭಾಗ್’ ಚಿತ್ರದಲ್ಲಿ ಕೇವಲ 11ರೂ ಸಂಭಾವನೆ ಪಡೆದು ನಟಿಸಿದ್ದರು. ಅಚ್ಚರಿಯ ಈ ವಿಷಯವನ್ನು ಚಿತ್ರದ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ತಮ್ಮ ಆತ್ಮಕತೆಯಲ್ಲಿ ಹಂಚಿಕೊಂಡಿದ್ದಾರೆ. ಆ ನಟಿ ಬೇರಾರೂ ಅಲ್ಲ, ಭಾಗ್ ಮಿಲ್ಖಾ ಭಾಗ್ ಚಿತ್ರದಲ್ಲಿ ತಮ್ಮ ಅಭಿನಯದಿಂದ ಪ್ರಶಂಸೆಗೆ ಒಳಗಾಗಿದ್ದ ನಟಿ ಸೋನಮ್ ಕಪೂರ್!

ತಮ್ಮ ಆತ್ಮಕತೆ ‘ದಿ ಸ್ಟ್ರೇಂಜರ್ ಇನ್​ ದಿ ಮಿರರ್’ನಲ್ಲಿ ರಾಕೇಶ್ ವಿವರಿಸಿರುವಂತೆ, ಸೋನಮ್ ಕಪೂರ್ ಕೇವಲ 11ರೂಗಳಿಗೆ ಭಾಗ್ ಮಿಲ್ಖಾ ಭಾಗ್​ನಲ್ಲಿ ಪಾತ್ರ ಮಾಡಲು ಒಪ್ಪಿದ್ದರು. ದೇಶದ ವಿಭಜನೆ ಮತ್ತು ಮಿಲ್ಖಾ ಸಿಂಗ್ ಅವರ ಪ್ರೇರಣಾದಯಿ ಕತೆ ಕೇಳಿ ಸೋನಮ್ ಬಹಳ ಪ್ರಭಾವಿತರಾದರು. ಚಿತ್ರಕ್ಕೆ ಕೊಡುಗೆ ಸಲ್ಲಿಸಿ ಚಿತ್ರದ ಭಾಗವಾಗಬೇಕು ಎಂಬ ತುಡಿತದಿಂದ ಅವರು, ಅತ್ಯಂತ ಕಡಿಮೆ ಸಂಭಾವನೆಯನ್ನು ಪಡೆದು 7 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದರು. ಒಂದು ಅತ್ಯುತ್ತಮ ಚಿತ್ರ ಮಾಡುತ್ತಿರುವುದಕ್ಕೆ ಸೋನಮ್ ಚಿತ್ರತಂಡವನ್ನು ಶ್ಲಾಘಿಸಿದರು ಎಂದು ರಾಕೇಶ್ ಬರೆದುಕೊಂಡಿದ್ದಾರೆ.

ರಾಕೇಶ್ ಮತ್ತು ಸೋನಮ್ ಮೊದಲು ಡೆಲ್ಲಿ- 6 ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಸೋನಮ್ ಕಪೂರ್ ತೆರೆ ಹಂಚಿಕೊಂಡಿದ್ದರು.  ತಮ್ಮ ಆತ್ಮಕತೆಯಲ್ಲಿ ಡೆಲ್ಲಿ- 6 ಚಿತ್ರದ ಸೋಲಿನಿಂದ ಅನುಭವಿಸಿದ ಖಿನ್ನತೆಯನ್ನು ಕೂಡಾ ರಾಕೇಶ್ ಮುಕ್ತವಾಗಿ ಹೇಳಿಕೊಂಡಿದ್ದಾರೆ. ‘‘ಆ ಸಂದರ್ಭದಲ್ಲಿ ಸಾವೇ ಹಿತಕರ ಎನ್ನಿಸುತ್ತಿತ್ತು. ನಾನು ಖಿನ್ನತೆಯಲ್ಲಿ ದಿನದಿಂದ ದಿನಕ್ಕೆ ನರಳುತ್ತಾ ಪ್ರಪಾತಕ್ಕೆ ಬೀಳುತ್ತಿದ್ದೆ’’ ಎಂದು ಅವರು ಬರೆದುಕೊಂಡಿದ್ದರು. ಆ ನಂತರ ರಾಕೇಶ್ ನಿರ್ದೇಶಿಸಿದ್ದು ಭಾಗ್ ಮಿಲ್ಖಾ ಭಾಗ್ ಚಿತ್ರ. ಅಪಾರ ಯಶಸ್ಸು, ವಿಮರ್ಶಕರಿಂದ ಮೆಚ್ಚುಗೆ ಪಡೆದ ಈ ಚಿತ್ರ ಭಾರತದ ಬಯೋಪಿಕ್ ಚಿತ್ರಗಳ ಇತಿಹಾಸದಲ್ಲಿ ಹೊಸ ಟ್ರೆಂಡ್ ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ:

‘ಸೂಪರ್’ ಚಿತ್ರದ ನಟಿ ನಯನತಾರಾ ಎಂಗೇಜ್​​ಮೆಂಟ್​; ಇಲ್ಲಿದೆ ರಿಂಗ್​ ಜೊತೆ ವಿಡಿಯೋ ಸಾಕ್ಷಿ

Rakhi Sawant: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿ ಸುದ್ದಿಯಲ್ಲಿದ್ದಾರೆ ರಾಖಿ ಸಾವಂತ್; ವಿಡಿಯೊ ನೋಡಿ

(Sonam Kapoor took only 11rs to play a role in Bhag Milkha Bhag here is why)

Published On - 12:23 pm, Wed, 11 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ