‘ಸೂಪರ್’ ಚಿತ್ರದ ನಟಿ ನಯನತಾರಾ ಎಂಗೇಜ್​​ಮೆಂಟ್​; ಇಲ್ಲಿದೆ ರಿಂಗ್​ ಜೊತೆ ವಿಡಿಯೋ ಸಾಕ್ಷಿ

Nayanthara Engagement: ‘ಮದುವೆಗಾಗಿ ನಾನು ಮತ್ತು ನಯನತಾರಾ ಹಣ ಉಳಿತಾಯ ಮಾಡುತ್ತಿದ್ದೇವೆ. ಯಾಕೆಂದರೆ ಮದುವೆಗೆ ಹೆಚ್ಚು ಖರ್ಚಾಗಲಿದೆ’ ಎಂದು ವಿಘ್ನೇಶ್​ ಶಿವನ್​ ಹೇಳಿದ್ದರು. ಈಗ ನಯನತಾರಾ ಕೂಡ ಬಾಯಿ ಬಿಟ್ಟಿದ್ದಾರೆ.

‘ಸೂಪರ್’ ಚಿತ್ರದ ನಟಿ ನಯನತಾರಾ ಎಂಗೇಜ್​​ಮೆಂಟ್​; ಇಲ್ಲಿದೆ ರಿಂಗ್​ ಜೊತೆ ವಿಡಿಯೋ ಸಾಕ್ಷಿ
ವಿಘ್ನೇಶ್​ ಶಿವನ್​, ನಯನತಾರಾ
Follow us
TV9 Web
| Updated By: ಮದನ್​ ಕುಮಾರ್​

Updated on: Aug 11, 2021 | 11:53 AM

ಕನ್ನಡದ ‘ಸೂಪರ್​’ ಸಿನಿಮಾದಲ್ಲಿ ಉಪೇಂದ್ರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಕನ್ನಡಿಗರಿಗೆ ಮನರಂಜನೆ ನೀಡಿದ್ದರು ನಟಿ ನಯನತಾರಾ (Nayanthara). ಆ ಬಳಿಕ ಅವರು ಕನ್ನಡದ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಅವರು ‘ಲೇಡಿ ಸೂಪರ್​ ಸ್ಟಾರ್’ ಎಂದೇ ಫೇಮಸ್​. ಸಿನಿಮಾ ಜೊತೆಜೊತೆಗೆ ಅವರು ಖಾಸಗಿ ಜೀವನದ ಕಾರಣದಿಂದ ಆಗಾಗ ಸುದ್ದಿ ಆಗುತ್ತಾರೆ. ನಿರ್ದೇಶಕ ವಿಘ್ನೇಶ್​ ಶಿವನ್​ (Vignesh Shivan) ಜೊತೆ ಅವರು ಬಹುಕಾಲದಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಈಗ ಅವರಿಬ್ಬರು ಎಂಗೇಜ್​ಮೆಂಟ್​ (Engagement) ಕೂಡ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ಈ ಮೂಲಕ ಶೀಘ್ರದಲ್ಲೇ ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ಹಸೆಮಣೆ ಏರುತ್ತಾರೆ ಎಂಬದು ಖಚಿತವಾಗಿದೆ.

ವಿಘ್ನೇಶ್​ ಶಿವನ್​ ಮತ್ತು ನಯನತಾರಾ ನಡುವಿನ ಪ್ರೇಮ್​ ಕಹಾನಿ ಗುಟ್ಟಾಗಿ ಉಳಿದಿಲ್ಲ. ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ. ಅವರಿಬ್ಬರ ಮದುವೆ ಪ್ಲ್ಯಾನ್​ ಬಗ್ಗೆ ಪದೇಪದೇ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಅದಕ್ಕೀಗ ಪುಷ್ಠಿ ನೀಡುವಂತಹ ಮಾತುಗಳನ್ನು ಸ್ವತಃ ನಯನತಾರಾ ಹೇಳಿದ್ದಾರೆ.

ತಮಿಳಿನ ಸ್ಟಾರ್​ ವಿಜಯ್​ ಟಿವಿಯ ಕಾರ್ಯಕ್ರಮವೊಂದಕ್ಕೆ ನಯನತಾರಾ ಅತಿಥಿಯಾಗಿ ಹೋಗಿದ್ದರು. ಆ ಕಾರ್ಯಕ್ರಮದ ನಡುವೆ ಅವರು ತಮ್ಮ ಎಂಗೇಜ್​ಮೆಂಟ್​ ರಿಂಗ್​ ತೋರಿಸಿದ್ದಾರೆ. ವಿಘ್ನೇಶ್ ಶಿವನ್​ ಕುರಿತಾಗಿಯೂ ನಿರೂಪಕಿ ಪ್ರಶ್ನೆ ಕೇಳಿದ್ದು, ಅದಕ್ಕೂ ಅವರು ಉತ್ತರಿಸಿದ್ದಾರೆ. ಸದ್ಯ ಈ ಪ್ರೋಮೋ ವೈರಲ್​ ಆಗುತ್ತಿದೆ. ಆ.15ರಂದು ಈ ಸಂಚಿಕೆ ಪ್ರಸಾರವಾಗಲಿದೆ. ನಯನತಾರಾ ಅವರ ಪೂರ್ತಿ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಮದುವೆ ಯಾವಾಗ ಎಂಬ ಬಗ್ಗೆ ಇತ್ತೀಚೆಗೆ ವಿಘ್ನೇಶ್​ ಶಿವನ್​ ಅವರಿಗೆ ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಅವರು, ‘ಮದುವೆಗಾಗಿ ನಾನು ಮತ್ತು ನಯನತಾರಾ ಹಣ ಉಳಿತಾಯ ಮಾಡುತ್ತಿದ್ದೇವೆ. ಯಾಕೆಂದರೆ ಮದುವೆಗೆ ಹೆಚ್ಚು ಖರ್ಚಾಗಲಿದೆ. ಅಲ್ಲದೇ, ಕೊರೊನಾ ಪ್ರಕರಣ ಕಡಿಮೆ ಆಗಲಿ ಅಂತ ಕಾಯುತ್ತಿದ್ದೇವೆ’ ಎಂದು ಹೇಳಿದ್ದರು. ಆದರೆ ಎಂಗೇಜ್​​ಮೆಂಟ್​ ಆಗಿರುವ ಬಗ್ಗೆ ಅವರು ಬಾಯಿ ಬಿಟ್ಟಿರಲಿಲ್ಲ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಕಾಥು ವಾಕುಲ ರೆಂಡು ಕಾದಲ್​’ ಚಿತ್ರವನ್ನು ವಿಘ್ನೇಶ್​ ನಿರ್ದೇಶಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ನಯನತಾರಾ, ವಿಜಯ್​ ಸೇತುಪತಿ, ಸಮಂತಾ ಅಕ್ಕಿನೇನಿ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಕೊವಿಡ್​ ಲಸಿಕೆ ವಿಚಾರದಲ್ಲಿ ಗೋಲ್​ಮಾಲ್​ ಮಾಡಿದ್ರಾ ನಯನತಾರಾ? ಫೋಟೋ ತೆರೆದಿಟ್ಟ ಅಸಲಿ ಕಥೆ ಇಲ್ಲಿದೆ

ನಯನತಾರಾ-ಉದಯನಿಧಿ ಲಿವ್​ಇನ್​ನಲ್ಲಿದ್ದರೆ ನಾನೇನು ಮಾಡಲಿ?: ವಿವಾದ ಎಬ್ಬಿಸಿದ ಹೇಳಿಕೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ