Rakhi Sawant: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿ ಸುದ್ದಿಯಲ್ಲಿದ್ದಾರೆ ರಾಖಿ ಸಾವಂತ್; ವಿಡಿಯೊ ನೋಡಿ

ಬಾಲಿವುಡ್ ನಟಿ ರಾಖಿ ಸಾವಂತ್, ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆತವನ್ನು ಅನುಕರಣೆ ಮಾಡಿ ಈಗ ಸುದ್ದಿಯಲ್ಲಿದ್ದಾರೆ.

Rakhi Sawant: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆಯಲು ಪ್ರಯತ್ನಿಸಿ ಸುದ್ದಿಯಲ್ಲಿದ್ದಾರೆ ರಾಖಿ ಸಾವಂತ್; ವಿಡಿಯೊ ನೋಡಿ
ರಾಖಿ ಸಾವಂತ್
Follow us
TV9 Web
| Updated By: shivaprasad.hs

Updated on: Aug 11, 2021 | 11:23 AM

ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪರ ಆಥ್ಲೆಟಿಕ್ಸ್​ನಲ್ಲಿ ಚೊಚ್ಚಲ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ವೈಯುಕ್ತಿಕ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ನೀರಜ್​ಗೆ ಸಂದಿತು. ಈಗ ನೀರಜ್ ಸಾಧನೆಗೆ ಪ್ರೋತ್ಸಾಹಗಳ ಸುರಿಮಳೆಯಾಗುತ್ತಿದ್ದು, ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಅವರನ್ನು ವಿಶೇಷವಾಗಿ ಗೌರವಿಸಿದೆ. ಮಂಗಳವಾರ ನಡೆದ ಎಎಫ್​ಐ ಸಭೆಯಲ್ಲಿ ನೀರಜ್ ಚೋಪ್ರಾ ಅವರ ಐತಿಹಾಸಿಕ ಸಾಧನೆಯನ್ನು ಸ್ಮರಣೀಯವಾಗಿಸಲು ಪ್ರತಿವರ್ಷ ಆಗಸ್ಟ್ 7ನ್ನು ಜಾವೆಲಿನ್ ಥ್ರೋ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಈ ದಿನದಂದು ದೇಶದಾದ್ಯಂತ ಜಾವೆಲಿನ್ ಥ್ರೋ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಎಂದು ಅಥ್ಲೆಟಿಕ್ಸ್ ಫೆಡರೇಶನ್ ತಿಳಿಸಿದೆ. ಈ ಎಲ್ಲಾ ಅಂಶಗಳು ಸದ್ಯ ದೇಶದಲ್ಲಿ ಜಾವೆಲಿನ್ ಆಟದ ಮೇಲೆ ಹೊಸ ಟ್ರೆಂಡ್ ಸೃಷ್ಟಿಸಿದೆ. ಈಗ ಬಾಲಿವುಡ್ ನಟಿ ರಾಖಿ ಸಾವಂತ್ ಕೂಡಾ ವಿಶೇಷ ಜಾವೆಲಿನ್ ಎಸೆದು ಸುದ್ದಿಯಲ್ಲಿದ್ದಾರೆ.

ರಾಖಿ ಸಾವಂತ್ ತಮ್ಮ ನೇರ ಮತ್ತು ಜನರೊಡನೆ ಬೆರೆಯುವ ವ್ಯಕ್ತಿತ್ವದಿಂದಾಗಿ ಅಭಿಮಾನಿಗಳಿಗೆ ಪ್ರಿಯರಾಗಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ಅವರು ಇದೀಗ ಜಾವೆಲಿನ್ ಎಸೆದು ಸುದ್ದಿಯಲ್ಲಿದ್ದಾರೆ. ನೀರಜ್ ಚೋಪ್ರಾ ಜಯವನ್ನು ತಮ್ಮದೇ ಆದ ಶೈಲಿಯಲ್ಲಿ ಸಂಭ್ರಮಿಸಿರುವ ರಾಖಿ ಸಾವಂತ್, ಮರದ ಕೋಲೊಂದನ್ನು ತೆಗೆದುಕೊಂಡು ನೀರಜ್ ಅವರನ್ನು ಅನುಕರಿಸಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದ್ದು, ನೆಟ್ಟಿಗರು ನಾನಾವಿಧವಾಗಿ ಕಾಮೆಂಟ್ ಮಾಡಿದ್ದಾರೆ.

ರಾಖಿ ಸಾವಂತ್ ಈ ಮೊದಲೂ ಕೂಡಾ ಅಂಗಡಿಗಳ ಎದುರು, ಜಿಮ್​ನ ಹೊರಗೆ ಛಾಯಾಚಿತ್ರಕಾರರಿಗೆ ಸಿಕ್ಕಾಗ ತಮಾಷೆಯ ವಿಡಿಯೊಗಳನ್ನು ಮಾಡಿದ್ದರು. ಈ ಬಾರಿ ಜಿಮ್​ನಲ್ಲಿ ಕಸರತ್ತು ಮುಗಿಸಿ ಹೊರಬರುವಾಗ ಜಾವೆಲಿನ್ ಎಸೆತದ ಅನುಕರಣೆ ಮಾಡಿದ್ದಾರೆ. ಕೋಲನ್ನು ಎಸೆದು, ಹೇಗಿತ್ತು ತನ್ನ ಎಸೆತ ಎಂದು ಅವರು ವಿಡಿಯೊ ಸೆರೆಹಿಡಿಯುವವರಲ್ಲಿ ಕೇಳಿದ್ದಾರೆ. ಕೊನೆಯಲ್ಲಿ ನೀರಜ್ ಸಾಧನೆಗೆ ಸಲಾಮ್ ಹೇಳುವಂತೆ, ಜೈ ಹೊ, ಜೈ ಹಿಂದ್ ಎಂದು ತಮ್ಮ ಕಾರನ್ನೇರಿ ಹೊರಟಿದ್ದಾರೆ.

ರಾಖಿ ಸಾವಂತ್ ತಮ್ಮದೇ ಶೈಲಿಯಲ್ಲಿ ಜಾವೆಲಿನ್ ಎಸೆದಿದ್ದು ಹೀಗೆ:

Rakhi sawa

ಇದಕ್ಕೆ ನೆಟ್ಟಿಗರು ನಾನಾವಿಧವಾಗಿ ಪ್ರತಿಕ್ರಿಯಿಸಿದ್ದು, 2024ರ ಒಲಂಪಿಕ್ಸ್​ಗೆ ರಾಖಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ದೊಡ್ಡ ನಟಿಯಾದರೂ ಕೂಡಾ, ಸಾಮಾನ್ಯ ಜನರೊಂದಿಗೆ ಬೆರೆಯುವ ರಾಖಿ ಸಾವಂತ್ ಗುಣವನ್ನು ಹಲವರು ಕೊಂಡಾಡಿದ್ದಾರೆ. ರಾಖಿ ಕೊನೆಯ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು, ಬಿಗ್​ಬಾಸ್ 14ರಲ್ಲಿ. ಅದರಲ್ಲಿ ಅವರು ಫೈನಲಿಸ್ಟ್ ಆಗಿದ್ದರು. ಇತ್ತೀಚೆಗೆ ಅವರು ‘ತೇರೆ ಡ್ರೀಮ್ ಮೇನ್’ ಎಂಬ ಆಲ್ಬಮ್ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

‘ಪರಿಶಿಷ್ಟ ಜಾತಿ ಜನರನ್ನು ಚಿತ್ರರಂಗದಿಂದ ಓಡಿಸಬೇಕು’; ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಮೀರಾ ವಿರುದ್ಧ ಕೇಸ್​

ಕನ್ನಡದಲ್ಲಿ ಶುರು ಹೊಸ ಬಿಗ್​ ಬಾಸ್​; ಅಕುಲ್​ ಬಾಲಾಜಿ, ‘ಕನ್ನಡತಿ’ ಕಿರಣ್​ ರಾಜ್​ ದೊಡ್ಮನೆಗೆ ಎಂಟ್ರಿ

(Rakhi Savanth Tries Javelin Throw with a stick grabs netizens Vivid reactions)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ