‘ಪರಿಶಿಷ್ಟ ಜಾತಿ ಜನರನ್ನು ಚಿತ್ರರಂಗದಿಂದ ಓಡಿಸಬೇಕು’; ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಮೀರಾ ವಿರುದ್ಧ ಕೇಸ್​

ತನ್ನನ್ನು ತಾನು ಸೂಪರ್​ ಮಾಡೆಲ್​ ಎಂದು ಕರೆದುಕೊಳ್ಳುವ ನಟಿ ಮೀರಾ ಮಿಥುನ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಆಗುತ್ತಿರುವ ಕೆಡುಕುಗಳಿಗೆ ಪರಿಶಿಷ್ಟ ಜಾತಿ ಜನರು ಕಾರಣ ಎಂದು ಅವರು ಹೇಳಿರುವುದು ಆಕ್ರೋಶಕ್ಕೆ ಗುರಿ ಆಗಿದೆ.

‘ಪರಿಶಿಷ್ಟ ಜಾತಿ ಜನರನ್ನು ಚಿತ್ರರಂಗದಿಂದ ಓಡಿಸಬೇಕು’; ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಮೀರಾ ವಿರುದ್ಧ ಕೇಸ್​
‘ಪರಿಶಿಷ್ಟ ಜಾತಿ ಜನರನ್ನು ಚಿತ್ರರಂಗದಿಂದ ಓಡಿಸಬೇಕು’; ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಮೀರಾ ವಿರುದ್ಧ ಕೇಸ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 11, 2021 | 9:29 AM

ಕಾಲಿವುಡ್​ ನಟಿ ಮೀರಾ ಮಿಥುನ್ (Meera Mithun)​ ಅವರು ಈಗ ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸಂದರ್ಶನವೊಂದಲ್ಲಿ ಮಾತನಾಡುವ ಭರದಲ್ಲಿ ಅವರು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿದ್ದಾರೆ. ‘ಚಿತ್ರರಂಗದಲ್ಲಿ ಆಗುತ್ತಿರುವ ಅನೇಕ ಅನಾಹುತಗಳಿಗೆ ಪರಿಶಿಷ್ಟ ಜಾತಿಯ (Scheduled Caste) ಜನರೇ ಕಾರಣ. ಅಂಥವರನ್ನು ಚಿತ್ರರಂಗದಿಂದ ತೊಲಗಿಸಬೇಕು’ ಎಂದು ಅವರು ಹೇಳಿಕೆ ನೀಡಿದ್ದು ಈಗ ವಿವಾದಕ್ಕೆ ಕಾರಣ ಆಗಿದೆ. ಮೀರಾ ಮಿಥುನ್​ ಹೀಗೆ ಮನಬಂದಂತೆ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ಅವರ ಹೇಳಿಕೆಗಳಿಂದ ಆಕ್ರೋಶಗೊಂಡಿರುವ ಜನರು ಪೊಲೀಸರಿಗೆ ದೂರು ನೀಡಿದ್ದಾರೆ. ಚೆನ್ನೈ ಪೊಲೀಸರು ಮೀರಾ ಮಿಥುನ್​ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಅಷ್ಟಕ್ಕೂ ಯಾರು ಈ ಮೀರಾ ಮಿಥುನ್​? ತಮಿಳುನಲ್ಲಿ ಈ ನಟಿ ಮಾಡಿರುವುದು ಮೂರು ಮತ್ತೊಂದು ಸಿನಿಮಾ ಮಾತ್ರ. ಅದರಲ್ಲಿ ಅವರಿಗೆ ಸಿಕ್ಕಿದ್ದು ಕೂಡ ಸಣ್ಣ ಪುಟ್ಟ ಪಾತ್ರಗಳಷ್ಟೇ. ಬಿಗ್​ ಬಾಸ್​ ತಮಿಳು ಸೀಸನ್​ 3ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಅವರಿಗೆ ಸ್ವಲ್ಪ ಜನಪ್ರಿಯತೆ ಸಿಕ್ಕಿತ್ತು. ತನ್ನನ್ನು ತಾನು ಸೂಪರ್​ ಮಾಡೆಲ್​ ಎಂದು ಕರೆದುಕೊಳ್ಳುವ ಈ ನಟಿ ಈಗ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

‘ಅನೈತಿಕ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳಲ್ಲಿ ಪರಿಶಿಷ್ಟ ಜಾತಿ ಜನರು ಪಾಲ್ಗೊಂಡಿರುವುದರಿಂದ ಅವರು ಸಮಸ್ಯೆ ಎದುರಿಸುತ್ತಾರೆ. ಕಾರಣ ಇಲ್ಲದೇ ಯಾರೂ ಯಾರ ಬಗ್ಗೆಯೂ ಕೆಟ್ಟದ್ದು ಮಾತನಾಡುವುದಿಲ್ಲ. ಚಿತ್ರರಂಗದಲ್ಲಿ ಆಗುತ್ತಿರುವ ಕೆಡುಕುಗಳಿಗೆ ಪರಿಶಿಷ್ಟ ಜಾತಿಯ ನಿರ್ದೇಶಕರು ಕಾರಣ. ಅಂಥವರನ್ನೆಲ್ಲ ಚಿತ್ರರಂಗದಿಂದ ತೊಲಗಿಸಲು ಇದು ಸರಿಯಾದ ಸಮಯ ಅಂತ ನನಗೆ ಅನಿಸುತ್ತದೆ’ ಎಂದು ಅವರು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ನಟಿ ಮುನ್​ಮುನ್​ ದತ್ತ ಕೂಡ ಜಾತಿ ನಿಂದನೆ ಮಾಡಿ ಜನರ ಆಕ್ರೋಶಕ್ಕೆ ಗುರಿ ಆಗಿದ್ದರು. ಯೂಟ್ಯೂಬ್​ಬಲ್ಲಿ ವಿಡಿಯೋ ಮಾಡಿದ್ದ ಅವರು, ‘ನಾನು ಆ ಜಾತಿಯ ಜನರ ರೀತಿ ಕಾಣಬಾರದು’ ಎಂದು ಒಂದು ನಿರ್ದಿಷ್ಟ ಜಾತಿಯ ಹೆಸರು ಹೇಳಿ ಅವಮಾನ ಮಾಡಿದ್ದರು. ಅವರು ವಿರುದ್ಧವೂ ಕೇಸ್​ ದಾಖಲಾಗಿತ್ತು. ಬಳಿಕ ಕ್ಷಮೆ ಕೇಳಿದ್ದ ಮುನ್​ಮುನ್​ ದತ್ತ, ‘ಯಾರಿಗೂ ನೋವು ಮಾಡಬೇಕು ಎಂಬ ಉದ್ದೇಶದಿಂದ ನಾನು ಆ ಪದ ಬಳಸಿರಲಿಲ್ಲ. ನನ್ನ ಭಾಷೆಯ ಮಿತಿಯಿಂದಾಗಿ ಆ ಪದದ ಸರಿಯಾದ ಅರ್ಥ ನನಗೆ ತಿಳಿದಿರಲಿಲ್ಲ. ಎಲ್ಲರ ಜಾತಿ, ಧರ್ಮ, ಜನಾಂಗದ ಬಗ್ಗೆ ನಾನು ಗೌರವ ಹೊಂದಿದ್ದೇನೆ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ಎಂದು ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ:

ನಾನು ಆತ್ಮಹತ್ಯೆ ಮಾಡಿಕೊಂಡರೆ ತಪ್ಪಿತಸ್ಥರನ್ನು ಜೈಲಿಗೆ ಹಾಕಿ: ಮೋದಿಗೆ ಮನವಿ ಮಾಡಿದ ಬಿಗ್​ ಬಾಸ್ ಮಾಜಿ​ ಸ್ಪರ್ಧಿ

ಜಾತಿ ನಿಂದನೆ ಮಾಡಿದ ಖ್ಯಾತ ಕಿರುತೆರೆ ನಟಿ ಮುನ್​ಮುನ್​ ದತ್ತ ವಿರುದ್ಧ ಎಫ್​ಐಆರ್​ ದಾಖಲು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ