2 ಕೋಟಿ ಜನರಿಗೆ ಐ ಲವ್ ಯೂ ಎಂದ ರಶ್ಮಿಕಾ ಮಂದಣ್ಣ; ಟಾಪ್ ನಟಿಯರಿಗೆಲ್ಲ ಶಾಕ್
ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟು 5 ವರ್ಷ ಕೂಡ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಅವರು ಘಟಾನುಘಟಿ ಹೀರೋಯಿನ್ಗಳನ್ನೆಲ್ಲ ಹಿಂದಿಕ್ಕಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಾಗಾಲೋಟಕ್ಕೆ ಇನ್ನಷ್ಟು ವೇಗ ಸಿಕ್ಕಿದೆ. ದಿನದಿಂದ ದಿನಕ್ಕೆ ಅವರ ಕೀರ್ತಿ ಹೆಚ್ಚುತ್ತಲೇ ಇದೆ. ಈ ವರ್ಷ ಕ್ರಿಸ್ಮಸ್ ಹಬ್ಬಕ್ಕೆ ಅವರು ನಟಿಸಿರುವ ‘ಪುಷ್ಪ’ (Pushpa) ಸಿನಿಮಾ ತೆರೆಕಾಣಲಿದೆ. ಅದಕ್ಕೂ ಮುನ್ನವೇ ಅವರೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಬರೋಬ್ಬರಿ 2 ಕೋಟಿ ಜನರ ಪ್ರೀತಿಯನ್ನು ರಶ್ಮಿಕಾ ಮಂದಣ್ಣ ಸಂಪಾದಿಸಿದ್ದಾರೆ. ಹೌದು, ಇನ್ಸ್ಟಾಗ್ರಾಮ್ನಲ್ಲಿ ಈ ಕೊಡಗಿನ ಕುವರಿಯನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 2 ಕೋಟಿ, ಅಂದರೆ 20 ಮಿಲಿಯನ್ ಆಗಿದೆ. ತಮ್ಮನ್ನು ಫಾಲೋ ಮಾಡುತ್ತಿರುವ 2 ಕೋಟಿ ಜನರಿಗೆ ರಶ್ಮಿಕಾ ‘ಐ ಲವ್ ಯೂ’ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟು 5 ವರ್ಷ ಕೂಡ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಅವರು ಘಟಾನುಘಟಿ ಹೀರೋಯಿನ್ಗಳನ್ನೆಲ್ಲ ಹಿಂದಿಕ್ಕಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣ ಭಾರತದ ನಟಿ ಎಂಬ ಖ್ಯಾತಿ ಅವರಿಗೆ ಸಿಕ್ಕಿದೆ. ಈ ಸಾಧನೆ ಮಾಡಿರುವುದಕ್ಕೆ ಅನೇಕ ನಟಿಯರು ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಕೀರ್ತಿ ಸುರೇಶ್, ಆಶಿಕಾ ರಂಗನಾಥ್, ಎಲಿ ಅವ್ರಾಮ್, ಸಂಯುಕ್ತಾ ಹೊರನಾಡು ಸೇರಿದಂತೆ ಅನೇಕ ನಟಿಯರು ಶುಭ ಕೋರಿದ್ದಾರೆ.
ಕಾಜಲ್ ಅಗರ್ವಾಲ್ ಅವರಿಗೆ 1.93 ಕೋಟಿ ಫಾಲೋವರ್ಸ್ ಇದ್ದಾರೆ. ಸಮಂತಾ ಅಕ್ಕಿನೇನಿ ಅವರನ್ನು 1.8 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ 1.83 ಕೋಟಿ ಹಾಗೂ ರಾಕುಲ್ ಪ್ರೀತ್ ಸಿಂಗ್ ಅವರು 1.73 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅವರೆಲ್ಲರನ್ನೂ ಮೀರಿಸಿದ ರಶ್ಮಿಕಾ ಮಂದಣ್ಣ ಬರೋಬ್ಬರಿ 2 ಕೋಟಿ ಫಾಲೋವರ್ಸ್ ಗಳಿಸಿಕೊಂಡಿದ್ದಾರೆ. ಈ ಖುಷಿಗೆ ಅವರು ಹೊಸ ಫೋಟೋಶೂಟ್ ಮೂಲಕ ಮಿಂಚಿದ್ದಾರೆ.
‘2 ಕೋಟಿ ಫಾಲೋವರ್ಸ್ ಆಗಿರುವುದಕ್ಕೆ ನಿಮ್ಮೆಲ್ಲರಿಗೂ ಐ ಲವ್ ಯೂ ಎನ್ನಬೇಕು ಅನಿಸುತ್ತಿದೆ’ ಎಂಬ ಕ್ಯಾಪ್ಷನ್ನೊಂದಿಗೆ ಅವರು ಹೊಸ ಫೋಟೋ ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ 33 ಸಾವಿರಕ್ಕೂ ಅಧಿಕ ಕಮೆಂಟ್ಸ್ ಬಂದಿವೆ. 28 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಈಗ ರಶ್ಮಿಕಾ ಸಿನಿಪಯಣ ಬಾಲಿವುಡ್ವರೆಗೆ ಸಾಗಿದೆ. ಅದು ಕೂಡ ಅವರಿಗೆ ಫಾಲೋವರ್ಸ್ ಸಂಖ್ಯೆ ಹೆಚ್ಚಲು ಕಾರಣ ಆಗಿದೆ.
View this post on Instagram
ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸ್ಟಾರ್ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ‘ಮಿಷನ್ ಮಜ್ನು’ ಚಿತ್ರಕ್ಕೂ ಅವರು ನಾಯಕಿ. ಇನ್ನೂ ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈ ವರ್ಷ ಡಿಸೆಂಬರ್ನಲ್ಲಿ ‘ಪುಷ್ಪ’ ಸಿನಿಮಾ ತೆರೆಕಂಡರೆ ಅವರ ಹವಾ ಇನ್ನಷ್ಟು ಹೆಚ್ಚುವುದು ಗ್ಯಾರಂಟಿ.
ಇದನ್ನೂ ಓದಿ:
Rashmika Mandanna: ‘ಈಗ ನಾನು ಕಲ್ಲಾಗಿದ್ದೇನೆ’; ಟ್ರೋಲ್ ಮಾಡುವವರಿಗೆ ತಿರುಗೇಟು ಕೊಟ್ಟ ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಬಗ್ಗೆ ಅಪ್ಸೆಟ್ ಆದ ಕುಟುಂಬದವರು; ಸಂದರ್ಶನದಲ್ಲಿ ಅಳಲು ತೋಡಿಕೊಂಡ ನಟಿ
Published On - 7:51 am, Wed, 11 August 21