AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಆತ್ಮಹತ್ಯೆ ಮಾಡಿಕೊಂಡರೆ ತಪ್ಪಿತಸ್ಥರನ್ನು ಜೈಲಿಗೆ ಹಾಕಿ: ಮೋದಿಗೆ ಮನವಿ ಮಾಡಿದ ಬಿಗ್​ ಬಾಸ್ ಮಾಜಿ​ ಸ್ಪರ್ಧಿ

ನನ್ನ ಕೆಲಸ, ಸ್ವಜನಪಕ್ಷಪಾತ ನನ್ನನ್ನು ಕೊಲ್ಲುತ್ತಿದೆ. ನಾನು ಈ ನೋವನ್ನು ತಿಂದು ಸಾಕಾಗಿದೆ. ಹೀಗಾಗಿ ಸಾಯಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ ಮೀರಾ.

ನಾನು ಆತ್ಮಹತ್ಯೆ ಮಾಡಿಕೊಂಡರೆ ತಪ್ಪಿತಸ್ಥರನ್ನು ಜೈಲಿಗೆ ಹಾಕಿ: ಮೋದಿಗೆ ಮನವಿ ಮಾಡಿದ ಬಿಗ್​ ಬಾಸ್ ಮಾಜಿ​ ಸ್ಪರ್ಧಿ
ಆತ್ಮಹತ್ಯೆ ಬಗ್ಗೆ ವಿಡಿಯೋ ಮಾಡಿಕೊಂಡ ಮೀರಾ ಮಿಥುನ್
ರಾಜೇಶ್ ದುಗ್ಗುಮನೆ
|

Updated on: Feb 13, 2021 | 7:01 PM

Share

ಕನ್ನಡ ಬಿಗ್​ ಬಾಸ್​ ಮನೆಗೆ ತೆರಳಿದ್ದ ಜಯಶ್ರೀ ರಾಮಯ್ಯ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮತ್ತೋರ್ವ ನಟಿ ಹಾಗೂ ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಆತ್ಮಹತ್ಯೆಗೆ ಶರಣಾಗುವ ಬಗ್ಗೆ ವಿಡಿಯೋ ಮಾಡಿ ಹಾಕಿದ್ದಾರೆ. ಈ ವಿಡಿಯೋ ನೋಡಿದ ನಂತರ ಅನೇಕರು ಇವರಿಗೆ ಸಾಂತ್ವನ ಹೇಳಿದ್ದಾರೆ. ತಮಿಳಿನ ವಿವಾದಿತ ನಟಿ ಮೀರಾ ಮಿಥುನ್​  ತಾವು ಸತ್ತರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮೋದಿಗೆ ಟ್ವಿಟ್ಟರ್​ನಲ್ಲೇ ಆಗ್ರಹಿಸಿದ್ದಾರೆ.

ನಾನು ಕಳೆದ 3 ವರ್ಷಗಳಿಂದ ಕಿರುಕುಳ ಅನುಭವಿಸುತ್ತಿದ್ದೇನೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಿಂದ ದೂರ ಇರಲು ಇಷ್ಟಪಡುತ್ತೇನೆ. ಆದರೆ, ನನ್ನ ಅಭಿಮಾನಿಗಳ ಜತೆ ಸಂಪರ್ಕದಲ್ಲಿರಲು ಇದೊಂದೇ ಮಾರ್ಗ. ನನ್ನ ಕೆಲಸ, ಸ್ವಜನಪಕ್ಷಪಾತ ನನ್ನನ್ನು ಕೊಲ್ಲುತ್ತಿದೆ. ನಾನು ಈ ನೋವನ್ನು ತಿಂದು ಸಾಕಾಗಿದೆ. ಹೀಗಾಗಿ ಸಾಯಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ ಮೀರಾ.

ನಾನು ಈ ಜಗತ್ತಿನಲ್ಲಿ ಬದುಕಬಾರದು ಎಂದು ಅನೇಕರು ಹೇಳುತ್ತಿದ್ದಾರೆ. ನಾನು ಒಳ್ಳೆಯ ಕೆಲಸ ಮಾಡಿದ್ದೇನೆ. ನನಗೆ ಕುಟುಂಬ ಮತ್ತು ಸ್ನೇಹಿತರಿದ್ದಾರೆ. ಆದರೆ, ನನ್ನ ದ್ವೇಷಿಗಳು ನಾನು ಸಾಯಬೇಕೆಂದು ಬಯಸುತ್ತಾರೆ. ಶತ್ರುಗಳು ನನಗೆ ನೋವು ನೀಡುತ್ತಿದ್ದಾರೆ ಮತ್ತು ನಾನು ನೋವನ್ನು ಕೊನೆಗೊಳಿಸಲು ಬಯಸುತ್ತೇನೆ ಎಂದು ಹೇಳುವ ಮೂಲಕ ಆತ್ಮಹತ್ಯೆಯ ಸೂಚನೆ ನೀಡಿದ್ದಾರೆ.

ಒಂದೊಮ್ಮೆ ನಾನು ಸತ್ತರೆ, ನನ್ನ ಸಾವಿಗೆ ಕಾರಣರಾದವರನ್ನು ಜೈಲಿಗೆ ಕಳುಹಿಸಬೇಕು ಎಂದು ನರೇಂದ್ರ ಮೋದಿ ಬಳಿ ಅವರು ಮನವಿ ಮಾಡಿದ್ದಾರೆ.