ರಾಜ್​ ಕುಂದ್ರಾಗೆ ಇನ್ನಷ್ಟು ದಿನ ಜೈಲೇ ಗತಿ; ಅಶ್ಲೀಲ ಸಿನಿಮಾ ಕೇಸ್​ನಲ್ಲಿ ಮರೀಚಿಕೆಯಾದ ಜಾಮೀನು

Raj Kundra: ರಾಜ್ ಕುಂದ್ರಾಗೆ ಬ್ರಿಟಿಷ್​ ಪೌರತ್ವ ಇದೆ. ಹಾಗಾಗಿ ಜಾಮೀನು ಸಿಕ್ಕರೆ ಅವರು ದೇಶ ಬಿಟ್ಟು ಹೋಗುವ ಸಾಧ್ಯತೆ ದಟ್ಟವಾಗಿದೆ. ಅರೆಸ್ಟ್​ ಆಗುವುದಕ್ಕಿಂತ ಮುನ್ನ ಅವರು ಹಲವು ಸಾಕ್ಷಿಗಳನ್ನು ನಾಶ ಮಾಡಿದ್ದರು ಎಂಬ ಮಾಹಿತಿ ಇದೆ.

ರಾಜ್​ ಕುಂದ್ರಾಗೆ ಇನ್ನಷ್ಟು ದಿನ ಜೈಲೇ ಗತಿ; ಅಶ್ಲೀಲ ಸಿನಿಮಾ ಕೇಸ್​ನಲ್ಲಿ ಮರೀಚಿಕೆಯಾದ ಜಾಮೀನು
ರಾಜ್​ ಕುಂದ್ರಾ
Follow us
TV9 Web
| Updated By: ಮದನ್​ ಕುಮಾರ್​

Updated on: Aug 11, 2021 | 12:37 PM

ನೀಲಿ ಸಿನಿಮಾಗಳ ನಿರ್ಮಾಣದ ದಂಧೆಯಲ್ಲಿ ತೊಡಗಿಕೊಂಡಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಉದ್ಯಮಿ ಕುಂದ್ರಾರಾಜ್​ಗೆ (Raj Kundra) ಸಂಕಷ್ಟ ಹೆಚ್ಚುತ್ತಿದೆ. ಜಾಮೀನು ಪಡೆಯಲು ಅವರು ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತಿವೆ. ಜುಲೈ 19ರಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಬುಧವಾರ (ಆ.11) ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗಲಿದೆ. ಮುಂದೇನು ಎಂದು ಕಾದಿದ್ದ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್​ ಕುಂದ್ರಾಗೆ ಮತ್ತೊಂದು ಆಘಾತ ಎದುರಾಗಿದೆ. ಅವರ ಜಾಮೀನು ಅರ್ಜಿ ವಿಚಾರಣೆ ದಿನಾಂಕವನ್ನು ನ್ಯಾಯಾಲಯ ಮುಂದೂಡಿದೆ!

ಜಾಮೀನಿಗಾಗಿ ರಾಜ್​ ಕುಂದ್ರಾ ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್​ ಸ್ವೀಕರಿಸಿ ಇಂದು ವಿಚಾರಣೆ ನಡೆಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅರ್ಜಿ ವಿಚಾರಣೆಯನ್ನು ಆ.20ಕ್ಕೆ ನ್ಯಾಯಾಲಯ ಮುಂದೂಡಿದೆ. ಹಾಗಾಗಿ ಅಲ್ಲಿಯವರೆಗೆ ರಾಜ್​ ಕುಂದ್ರಾಗೆ ಜೈಲೇ ಗತಿಯಾಗಿದೆ. ಇಷ್ಟು ಬೇಗ ಅವರಿಗೆ ಜಾಮೀನು ನೀಡಬಾರದು ಎಂಬುದಕ್ಕೆ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು 19 ಕಾರಣಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಪೊಲೀಸರ ವಿಚಾರಣೆಗೆ ರಾಜ್​ ಕುಂದ್ರಾ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿಲ್ಲ. ಹಾಗಾಗಿ ತನಿಖೆ ವಿಳಂಬ ಆಗುತ್ತಿದೆ. ಅಶ್ಲೀಲ ಸಿನಿಮಾ ದಂಧೆಯಲ್ಲಿ ಸಿಕ್ಕಿಕೊಂಡ ಹಲವು ಸಂತ್ರಸ್ತರು ಹೇಳಿಕೆ ನೀಡಲು ಮುಂದೆಬರುತ್ತಿದ್ದು, ಅವರಿಂದ ಸಾಕ್ಷಿ ಸಂಗ್ರಹಿಸುವುದು ಇನ್ನೂ ಬಾಕಿ ಇದೆ. ರಾಜ್​ ಕುಂದ್ರಾ ಓರ್ವ ಪ್ರಭಾವಿ ವ್ಯಕ್ತಿ. ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ತನಿಖಾಧಿಕಾರಿಗಳು ಕೋರ್ಟ್​ಗೆ ತಿಳಿಸಿದ್ದಾರೆ.

ರಾಜ್ ಕುಂದ್ರಾಗೆ ಬ್ರಿಟಿಷ್​ ಪೌರತ್ವ ಇದೆ. ಹಾಗಾಗಿ ಜಾಮೀನು ಸಿಕ್ಕರೆ ಅವರು ದೇಶ ಬಿಟ್ಟು ಹೋಗುವ ಸಾಧ್ಯತೆ ದಟ್ಟವಾಗಿದೆ. ಅರೆಸ್ಟ್​ ಆಗುವುದಕ್ಕಿಂತ ಮುನ್ನ ಅವರು ಹಲವು ಸಾಕ್ಷಿಗಳನ್ನು ನಾಶ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ರಾಜ್​ ಕುಂದ್ರಾಗೆ ಜಾಮೀನು ಮರೀಚಿಕೆ ಆಗಿದೆ. ಅವರ ಕರ್ಮಕಾಂಡದಿಂದಾಗಿ ಪತ್ನಿ ಶಿಲ್ಪಾ ಶೆಟ್ಟಿ ಕೂಡ ಸಂಕಷ್ಟ ಎದುರಿಸುವಂತಾಗಿದೆ. ಅವರು ಅನೇಕ ಪ್ರತಿಷ್ಠಿತ ಕಂಪನಿಗಳಿಗೆ ರಾಯಭಾರಿ ಆಗಿದ್ದರು. ಆದರೆ ಆ ಪೈಕಿ ಹಲವು ಕಂಪನಿಗಳ ಒಪ್ಪಂದ ಮುರಿದುಬೀಳುವ ಸಾಧ್ಯತೆ ಇದೆ.

ಅಶ್ಲೀಲ ಸಿನಿಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್​ ಕುಂದ್ರಾ ಸೇರಿ ಒಟ್ಟು 11 ಜನರನ್ನು ಬಂಧಿಸಲಾಗಿದೆ. ಮಹಿಳೆಯರಿಗೆ ಬಾಲಿವುಡ್​ ಸಿನಿಮಾ ಮತ್ತು ಓಟಿಟಿ ಶೋಗಳಲ್ಲಿ ಅವಕಾಶ ಕೊಡಿಸುತ್ತೇವೆ ಎಂದು ನಂಬಿಸಿ, ಅಶ್ಲೀಲ ಸಿನಿಮಾ ದಂಧೆಗೆ ತಳ್ಳುತ್ತಿದ್ದ ಆರೋಪ ಈ 11 ಜನರ ಮೇಲಿದೆ.

ಇದನ್ನೂ ಓದಿ:

‘ಸನ್ನಿ ಲಿಯೋನ್​ ಅವರನ್ನೇ ಒಪ್ಪಿಕೊಂಡ ನಾವು ಶಿಲ್ಪಾ ಶೆಟ್ಟಿಯನ್ನು ಯಾಕೆ ದ್ವೇಷಿಸುತ್ತೇವೆ?’; ಹಿಮಾಂಶ್​ ಕೊಹ್ಲಿ ಪ್ರಶ್ನೆ

‘ಶಿಲ್ಪಾ ಶೆಟ್ಟಿಗೂ ನಿಮ್ಮ ವಿಡಿಯೋ ಸಖತ್​ ಇಷ್ಟ’ ಎಂದು ಪತ್ನಿ ಹೆಸರಲ್ಲಿ ಶೆರ್ಲಿನ್​ಗೆ ಯಾಮಾರಿಸಿದ್ದ ರಾಜ್​ ಕುಂದ್ರಾ

(Raj Kundra Porn Case: Shilpa Shetty husband to spend more time in Jail)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ