AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suniel Shetty: ತಂದೆ ಸುನೀಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಚಿತ್ರ ಹಂಚಿಕೊಂಡು ಶುಭಾಶಯ ಕೋರಿದ ಆಥಿಯಾ ಶೆಟ್ಟಿ

Athiya Shetty: ಬಾಲಿವುಡ್​ನ ಖ್ಯಾತ ನಟ ಸುನೀಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅವರ ಮಗಳು, ನಟಿ ಆಥಿಯಾ ಶೆಟ್ಟಿ ಎರಡು ಸುಂದರ ಚಿತ್ರ ಮತ್ತು ಬರಹದೊಂದಿಗೆ ಶುಭಾಶಯ ಕೋರಿದ್ದಾರೆ.

Suniel Shetty: ತಂದೆ ಸುನೀಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಚಿತ್ರ ಹಂಚಿಕೊಂಡು ಶುಭಾಶಯ ಕೋರಿದ ಆಥಿಯಾ ಶೆಟ್ಟಿ
ಆಥಿಯಾ ಹಂಚಿಕೊಂಡ ಚಿತ್ರ
TV9 Web
| Edited By: |

Updated on:Aug 11, 2021 | 2:53 PM

Share

ಬಾಲಿವುಡ್ ನಟ ಸುನೀಲ್ ಶೆಟ್ಟಿ ಜನ್ಮದಿನಕ್ಕೆ ಮಗಳು ಆಥಿಯಾ ಶೆಟ್ಟಿ ಎರಡು ವಿಶೇಷ ಚಿತ್ರಗಳನ್ನು ಹಂಚಿಕೊಂಡು ಶುಭಾಶಯ ಕೋರಿದ್ದು ಎಲ್ಲರ ಗಮನ ಸೆಳೆದಿದೆ. ಕಪ್ಪು ಬಿಳುಪಿನ ಎರಡು ಚಿತ್ರಗಳನ್ನು ಹಂಚಿಕೊಂಡಿರುವ ಆಥಿಯಾ, ಅದಕ್ಕೆ ಸುಂದರ ಒಕ್ಕಣೆಯನ್ನೂ ಬರೆದು ತಂದೆಗೆ ಶುಭಾಶಯ ಕೋರಿದ್ದಾರೆ. ಮೊದಲ ಚಿತ್ರದಲ್ಲಿ ಆಥಿಯಾ ಮತ್ತು ಸುನೀಲ್ ಇತ್ತೀಚೆಗೆ ತೆಗೆಸಿಕೊಂಡ ಭಾವಚಿತ್ರವಿದ್ದರೆ, ಮತ್ತೊಂದರಲ್ಲಿ ಆಥಿಯಾ ಬಾಲ್ಯದಲ್ಲಿರುವಾಗ ಆಕೆಯನ್ನು ಕರೆದುಕೊಂಡ ಸುನೀಲ್ ಅವರ ಚಿತ್ರವಿದೆ.

ನಟ ಸುನೀಲ್ ಶೆಟ್ಟಿ ಇಂದು (ಆಗಸ್ಟ್ 11) 60ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.  ಆಥಿಯಾ ಹಂಚಿಕೊಂಡ ಪೋಸ್ಟ್​ನಲ್ಲಿ ತಂದೆಯಾಗಿ ಸುನೀಲ್ ಶೆಟ್ಟಿ ಹಂಚಿಕೊಂಡ ಪ್ರೀತಿಗೆ, ಸಮಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದು, ಅವರನ್ನು ಪಡೆಯುವುದಕ್ಕೆ ತಾನು ಪುಣ್ಯ ಮಾಡಿದ್ದೆ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಆದರ್ಶ ವ್ಯಕ್ತಿಯಾಗಿ ನಿಂತು, ಅವರನ್ನು ಪೂರ್ಣವಾಗಿ ಬೆಂಬಲಿಸಿದ್ದಕ್ಕೆ ಆಥಿಯಾ ಕೃತಜ್ಞತೆ ಸಲ್ಲಿಸಿದ್ದಾರೆ.

ಆಥಿಯಾ ಶೆಟ್ಟಿ ಹಂಚಿಕೊಂಡ ಪೋಸ್ಟ್:

ಸದ್ಯ ಆಥಿಯಾ ಶೆಟ್ಟಿ ಲಂಡನ್​ನಲ್ಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಕೆ.ಎಲ್.ರಾಹುಲ್ ಅವರೊಂದಿಗೆ ಆಥಿಯಾ ತೆರಳಿದ್ದು, ಅಲ್ಲಿ ಸುತ್ತಾಡುತ್ತಿರುವ ಚಿತ್ರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಕೆ.ಎಲ್.ರಾಹುಲ್ ಜನ್ಮದಿನಕ್ಕೆ ಆಥಿಯಾ ಶುಭ ಕೋರಿದ್ದಾಗ, ಸುನೀಲ್ ಶೆಟ್ಟಿ ಅದಕ್ಕೆ ಕಾಮೆಂಟ್ ಮಾಡಿದ್ದು ಸುದ್ದಿಯಾಗಿತ್ತು. ಮಗಳು ಆಥಿಯಾ ಹಾಗೂ ರಾಹುಲ್ ಜೊತೆ ನಿಂತಿದ್ದ ಫೊಟೊಕ್ಕೆ ಸುನೀಲ್ ನಿಜವಾಗಿಯೂ ಎಂದು ಕಾಮೆಂಟ್ ಮಾಡಿದ್ದರು. ಅಲ್ಲಿಂದ ರಾಹುಲ್ ಹಾಗೂ ಆಥಿಯಾ ಜೊತೆಯಲ್ಲಿ ಸುತ್ತಾಡುತ್ತಿದ್ದಾರೆ ಎಂಬ ಸುದ್ದಿ ಅಧಿಕೃತವಾದಂತಾಗಿತ್ತು.

ಇದನ್ನೂ ಓದಿ:

ಬಾಯ್​ಫ್ರೆಂಡ್​ ರಾಹುಲ್​ ಜತೆ ಫೋಟೋ ಹಂಚಿಕೊಂಡ ಆಥಿಯಾ; ಇದು ನಿಜ ಎಂದ ಸುನೀಲ್​ ಶೆಟ್ಟಿ

ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್​ಗೆ ಖುಷಿಯಾಗೋ ವಿಚಾರ

(Athiya Shetty wishes to her father Suniel Shetty on birthday with a long note and two beautiful photos)

Published On - 2:52 pm, Wed, 11 August 21