Vidya Balan: ಫೊಟೊಶಾಪ್ ಮಾಡಿ ನನ್ನನ್ನು ತೆಳ್ಳಗೆ ತೋರಿಸಬೇಡಿ; ವಿದ್ಯಾ ಬಾಲನ್​ ಹೀಗೆ ಖಡಕ್ ವಾರ್ನಿಂಗ್ ಮಾಡಿದ್ದೇಕೆ?

Body Shaming: ಬಾಲಿವುಡ್ ನಟಿ ವಿದ್ಯಾ ಬಾಲನ್ ಬಾಡಿ ಶೇಮಿಂಗ್ ಕುರಿತು ಈ ಹಿಂದೆ ಹಲವು ಬಾರಿ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಛಾಯಾಚಿತ್ರಕಾರ ಡಬ್ಬೂ ರತ್ನನಿ ವಿದ್ಯಾ ಅವರ ಖಡಕ್ ನಿಲುವುಗಳ ಕುರಿತು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Vidya Balan: ಫೊಟೊಶಾಪ್ ಮಾಡಿ ನನ್ನನ್ನು ತೆಳ್ಳಗೆ ತೋರಿಸಬೇಡಿ; ವಿದ್ಯಾ ಬಾಲನ್​ ಹೀಗೆ ಖಡಕ್ ವಾರ್ನಿಂಗ್ ಮಾಡಿದ್ದೇಕೆ?
ವಿದ್ಯಾ ಬಾಲನ್​
Follow us
TV9 Web
| Updated By: shivaprasad.hs

Updated on: Aug 12, 2021 | 1:29 PM

ಬಾಲಿವುಡ್​ನ ಖ್ಯಾತ ನಟಿ ವಿದ್ಯಾ ಬಾಲನ್ ಫೊಟೊ ಶೂಟ್ ಮಾಡಿದ ನಂತರ ಆ ಚಿತ್ರಗಳನ್ನು ಫೊಟೊಶಾಪ್ ಮುಖಾಂತರ ಮಾರ್ಪಡಿಸುವುದನ್ನು ಇಷ್ಟಪಡುವುದಿಲ್ಲವಂತೆ. ‘ತಾವು ಇರುವಂತೆಯೇ ಚಿತ್ರಗಳೂ ಇರಬೇಕು, ಕೇವಲ ಚಿತ್ರದಲ್ಲಿ ಸಣ್ಣಗಿರುವಂತೆ ಫೊಟೊ ಶಾಪ್ ಮಾಡುವುದು ಅವರಿಗಿಷ್ಟವಿಲ್ಲ’ ಎಂದು ವಿದ್ಯಾ ಬಾಲನ್ ಅವರ ನಿಲುವಿನ ಕುರಿತು ಖ್ಯಾತ ಛಾಯಾಚಿತ್ರಕಾರ ಡಬ್ಬೂ ರತ್ನನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 

ತಮ್ಮ ಛಾಯಾಚಿತ್ರ ತೆಗೆಯುವ ವಿಧಾನವನ್ನು ವಿವರಿಸುತ್ತಾ ಮಾತನಾಡಿದ ಡಬ್ಬೂ, ‘ನೆರಳು ಬೆಳಕನ್ನು ಸಂಯೋಜಿಸಿ, ಲೈಟಿಂಗ್ ಸರಿಪಡಿಸಿಕೊಂಡು, ನಂತರ ಎಡಿಟ್ ಮಾಡುವುದಕ್ಕೆ ಕಡಿಮೆ ಕೆಲಸಗಳಿರುವಂತೆ ನಾನು ಫೊಟೊ ತೆಗೆಯುತ್ತೇನೆ. ಈ ರೀತಿ ತೆಗೆಯುವುದು ವಿದ್ಯಾ ಬಾಲನ್ ವಿಷಯದಲ್ಲಿ ಬಹಳ ಮುಖ್ಯವಾದುದು. ಕಾರಣ, ವಿದ್ಯಾ ಬಾಲನ್ ಅವರಿಗೆ ಫೊಟೊ ಎಡಿಟ್ ಮಾಡುವುದು ಇಷ್ಟವಿಲ್ಲ. ನಿಜ ಜೀವನದಲ್ಲಿ ಹೇಗಿದ್ದಾರೋ, ಹಾಗೆಯೇ ಫೊಟೊಗಳೂ ಇರಬೇಕು. ಕೇವಲ ಚಿತ್ರದಲ್ಲಿ ಮಾತ್ರ ತೆಳ್ಳಗೆ ಕಂಡು ಪ್ರಯೋಜನವಿಲ್ಲ ಎನ್ನುವುದು ಅವರ ಅಭಿಪ್ರಾಯ’ ಎಂದಿದ್ದಾರೆ.

​ವಿದ್ಯಾ ಚಿತ್ರಗಳನ್ನು ತೆಗೆಯುವಾಗ ಈ ವಿಷಯವನ್ನು ಬಹಳ ಸ್ಪಷ್ಟವಾಗಿ ಮ್ಯಾಗಜೀನ್​ಗಳ ತಂಡಕ್ಕೆ ಅವರು ತಿಳಿಸುತ್ತಾರಂತೆ.  ಎಡಿಟ್ ಮಾಡುವಾಗ ಕೇವಲ ಬಣ್ಣಗಳನ್ನು ಹೊಂದಿಸಿ, ಸರಿಪಡಿಸಿ. ಬೇರೆ ಯಾವುದೇ ಮಾರ್ಪಾಡುಗಳನ್ನು ಮಾಡಬೇಡಿ. ಉದಾಹರಣೆಗೆ ಹಿನ್ನೆಲೆಯಲ್ಲಿರುವ ಮರದ ಎಲೆಯ ಬಣ್ಣ ಬದಲಾಯಿಸಬೇಕೋ, ಬದಲಾಯಿಸಿ. ಆದರೆ ತನ್ನ ಚಿತ್ರವನ್ನು ಮಾರ್ಪಡಿಸಬೇಡಿ. ಅದು ನೈಜವಾಗಿರಲಿ ಎನ್ನುತ್ತಾರಂತೆ ವಿದ್ಯಾ.

ವಿದ್ಯಾ ಬಾಲನ್ ಆಗಾಗ ತಾವು ಅನುಭವಿಸಿದ ಬಾಡಿ ಶೇಮಿಂಗ್  ಬಗ್ಗೆ ಮಾತನಾಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಶೆರ್ನಿ ಚಿತ್ರದ ಪ್ರಚಾರದ ಸಮಯದಲ್ಲಿ, ತನ್ನ ದೇಹದ ತೂಕವು ರಾಷ್ಟ್ರೀಯ ಸಮಸ್ಯೆ ಎಂಬಂತೆ ಪ್ರಚಾರವಾಗಿದ್ದನ್ನು ಅವರು ನೆನಪಿಸಿಕೊಂಡಿದ್ದರು. ತಮ್ಮ ದೇಹದ ತೂಕದ ಸಮಸ್ಯೆಗೆ ಏನು ಕಾರಣ ಎಂಬುದನ್ನು ಲೀಡಿಂಗ್ ಡೈಲಿಗೆ ನೀಡಿದ ಸಂದರ್ಶನದಲ್ಲಿ ಅವರು ಒಮ್ಮೆ ತಿಳಿಸಿದ್ದರು. ‘‘ದೇಹದಲ್ಲಿನ ಹಾರ್ಮೋನ್ ಸಮಸ್ಯೆಯಿಂದಾಗಿ ನಾನು ಜೀವನಪೂರ್ತಿ ಕಷ್ಟಪಡುತ್ತಿದ್ದೆ. ನನ್ನ ದೇಹದ ಕುರಿತು ನನಗೆ ಕೀಳರಿಮೆ ಇತ್ತು. ಆದರೆ ಕ್ರಮೇಣ ನನಗೆ ಸತ್ಯದ ಅರಿವಾಯಿತು. ನನ್ನನ್ನು ನಾನು ಒಪ್ಪಿಕೊಂಡು, ಪ್ರೀತಿಸತೊಡಗಿದೆ. ಕ್ರಮೇಣ, ಜನರೂ ಅದನ್ನು ಒಪ್ಪಿಕೊಂಡು ನಾನಿದ್ದಂತೆಯೇ ನನ್ನನ್ನು ಇಷ್ಟಪಡತೊಡಗಿದರು’’ ಎಂದು ವಿದ್ಯಾ ತಿಳಿಸಿದ್ದರು.

ಇದನ್ನೂ ಓದಿ:

World Elephant Day 2021: ಈ ಆನೆಗಳ ಬುದ್ಧಿವಂತಿಕೆ ನೋಡಿದರೆ ಎಂಥವರೂ ಬೆರಗಾಗುತ್ತಾರೆ

ಅರವಿಂದ್​ ಸೋಲಿಗೆ ದಿವ್ಯಾ ಕಾರಣ? ಉರುಡುಗ ತಲೆಯಲ್ಲಿ ಹೀಗೊಂದು ಪ್ರಶ್ನೆ

ಕುರಿ ಕಾಯುತ್ತಿದ್ದ ಸಿದ್ದರಾಮಯ್ಯನವರ ರಾಜಕೀಯ ಹಾದಿಯೇ ಅಚ್ಚರಿ; ಇಲ್ಲಿದೆ ರೋಚಕ ಸ್ಟೋರಿ

(Vidya Balan strictly says to photographers that do not make her slim on editing recalls photographer Dabboo Rathnani)