ಅರವಿಂದ್ ಸೋಲಿಗೆ ದಿವ್ಯಾ ಕಾರಣ? ಉರುಡುಗ ತಲೆಯಲ್ಲಿ ಹೀಗೊಂದು ಪ್ರಶ್ನೆ
ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರ ಒಂದು ಪಕ್ಕದಲ್ಲಿ ಅರವಿಂದ್ ಹಾಗೂ ಮತ್ತೊಂದು ಕಡೆ ತಾವು ನಿಲ್ಲಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ.
ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರ ಫಿನಾಲೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರ ಒಂದು ಪಕ್ಕದಲ್ಲಿ ಅರವಿಂದ್ ಹಾಗೂ ಮತ್ತೊಂದು ಕಡೆ ತಾವು ನಿಲ್ಲಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಈ ಬಗ್ಗೆ ಅವರಿಗೆ ಬೇಸರ ಉಂಟಾಗಿದೆ. ಈ ಮಧ್ಯೆ ಅರವಿಂದ್ ಸೋಲಿಗೆ ತಾವು ಕಾರಣವೇ ಎನ್ನುವ ಅನುಮಾನ ಬಂದಿದೆ.
ಅರವಿಂದ್ ಹಾಗೂ ಬಿಗ್ ಬಾಸ್ ವಿನ್ನರ್ ಮಂಜು ನಡುವಿನ ಮತಗಳ ಅಂತರ ತುಂಬಾನೇ ಕಡಿಮೆ. ಒಂದೊಮ್ಮೆ ದಿವ್ಯಾ ಉರುಡುಗ ಟಾಪ್ ಪೈವ್ನಲ್ಲಿ ಇಲ್ಲದೆ ಇದ್ದಿದ್ದರೆ ಅವರ ಮತಗಳು ಅರವಿಂದ್ಗೆ ಬೀಳುತ್ತಿತ್ತು ಎನ್ನುವ ಮಾತಿದೆ. ಇದು ದಿವ್ಯಾಗೂ ಹೌದು ಎನಿಸಿದೆ. ಟಿವಿ9 ಕನ್ನಡದ ಜತೆ ನಡೆದ ಸಂದರ್ಶನದಲ್ಲಿ ಈ ಮಾತನ್ನು ಅವರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ‘ಮಂಜು ಹೇಳಿದ ಆ ಮಾತನ್ನು ನಾನು ಎಂದಿಗೂ ಒಪ್ಪಿಕೊಳ್ಳಲ್ಲ’; ದಿವ್ಯಾ ಉರುಡುಗ