AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್​ವೈ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸಿ, ನನ್ನಿಂದ ನಿಮಗೆ ಏನೂ ತೊಂದರೆ ಆಗುವುದಿಲ್ಲ: ಹೆಚ್​.ಡಿ.ದೇವೇಗೌಡ

ಬಿಎಸ್​ವೈ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸಿ, ನನ್ನಿಂದ ನಿಮಗೆ ಏನೂ ತೊಂದರೆ ಆಗುವುದಿಲ್ಲ: ಹೆಚ್​.ಡಿ.ದೇವೇಗೌಡ

TV9 Web
| Updated By: Skanda

Updated on: Aug 12, 2021 | 1:34 PM

ಅವರ ಕಟುಂಬಕ್ಕೂ ನಮಗೂ ಮೊದಲಿನಿಂದಲೂ ಪರಿಚಯ ಇದೆ. ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದಿದ್ದೇನೆ. ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸಲು ಹೇಳಿದ್ದೇನೆ: ಹೆಚ್​.ಡಿ.ದೇವೇಗೌಡ

ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ನಂತರ ಒಂದಷ್ಟು ಬದಲಾವಣೆಗಳು ರಾಜ್ಯ ರಾಜಕೀಯದಲ್ಲಿ ಕಂಡುಬಂದಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಪ್ರಧಾನಿ, ಜೆಡಿಎಸ್​ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್​.ಡಿ.ದೇವೇಗೌಡ ಬಿಜೆಪಿಯ ವಿದ್ಯಮಾನಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಗೊಂದಲ ನಿವಾರಿಸಲು ಬೊಮ್ಮಾಯಿ ಸಮರ್ಥರಿದ್ದಾರೆ. ಅವರ ಕಟುಂಬಕ್ಕೂ ನಮಗೂ ಮೊದಲಿನಿಂದಲೂ ಪರಿಚಯ ಇದೆ. ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದಿದ್ದೇನೆ. ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಸರ್ಕಾರ ನಡೆಸಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಮನೆಗೆ ಬಂದಿದ್ದರು. ನನ್ನ ಹಾಗೂ ನನ್ನ ಪತ್ನಿಯ ಆಶೀರ್ವಾದ ಪಡೆಯೋಕೆ ಬಂದಿದ್ದಾಗಿ ಹೇಳಿದರು. ಅವರ ತಂದೆಯೂ ಮುಖ್ಯಮಂತ್ರಿಯಾಗಿದ್ದವರು. ಆಗಿನಿಂದಲೂ ನಮಗೂ ಅವರಿಗೂ ಒಡನಾಟ ಚೆನ್ನಾಗಿದೆ. ಅದರ ಹೊರತಾಗಿ ಭೇಟಿಗೆ ಬೇರೆ ಯಾವ ಬಣ್ಣ ಬೇಕಿಲ್ಲ. ಮೇಲಾಗಿ ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದು ಹೇಳಿದ್ದೇನೆ. BSY ಮಾರ್ಗದರ್ಶನದಲ್ಲಿ ಸರ್ಕಾರ ನಡೆಸುತ್ತಾ ಹೈಕಮಾಂಡ್​ ನಾಯಕರನ್ನೂ ಅನುಸರಿಸಿಕೊಂಡು ಹೋಗಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ತಿಳಿಸಿದ್ದೇನೆ ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

(HD Deve Gowda reaction on CM Basavaraj Bommai meet and his suggestions to Karnataka Government)

ಇದನ್ನೂ ಓದಿ:
ಸಂಸತ್​ ಅಧಿವೇಶನದಲ್ಲಿ ಒಂದು ದಿನವೂ ಅಬ್ಸೆಂಟ್​ ಆಗಲಿಲ್ಲ; ಆದರೆ ಕಲಾಪದಲ್ಲಿ ಯಾವುದೇ ವಿಷಯ ಚರ್ಚೆಯಾಗಿಲ್ಲ; ಮಾಜಿ ಪ್ರಧಾನಿ ದೇವೇಗೌಡ