ಇವಿ ಕಾರು ಮಾರ್ಕೆಟ್ಗೆ ಇಷ್ಟರಲ್ಲೇ ಬರಲಿದೆ ಟಾಟಾ ಮೋಟಾರ್ಸ್ ಸಂಸ್ಥೆಯ ಟಿಗೊರ್ ಇವಿ ಕಾರು
ಹಾಗೆ ನೋಡಿದರೆ, ಟಿಗೊರ್ ಇವಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಪನಿ ಶೇರ್ ಮಾಡಿಲ್ಲ. ಟಾಟಾ ಮೋಟರ್ಸ್ ಸಂಸ್ಥೆಯು ಐದು ಮಾಡೆಲ್ಗಳಲ್ಲಿ ಟಾಟಾ ನೆಕ್ಸಾನ್ ಇವಿ ಕಾರನ್ನು ಬಿಡುಗಡೆ ಮಾಡಿದೆ-ಎಕ್ಸ್ಎಮ್, ಎಕ್ಸ್ಜೆಡ್+, ಎಕ್ಸ್ಜೆಡ್+ ಲಕ್ಸ್, ಡಾರ್ಕ್ ಎಕ್ಸ್ಜೆಡ್+, ಮತ್ತು ಡಾರ್ಕ್ ಎಕ್ಸ್ಜೆಡ್+.
ಇವಿ ವಾಹನಗಳ ಮಾರುಕಟ್ಟೆ ನಾವು ಅಂದುಕೊಂಡಿರುವುದಕ್ಕಿಂತ ವೇಗವಾಗಿ ವಿಸ್ತರಿಸುತ್ತಿದೆ. ಈ ವಲಯಕ್ಕೆ ಲಗ್ಗೆಯಿಟ್ಟ ನಂತರ ಟಾಟಾ ಮೋಟಾರ್ಸ್ ಸಂಸ್ಥೆಯು ಮೊದಲಿಗೆ ನಿಕ್ಸಾನ್ ಇವಿ ಕಾರನ್ನು ಲಾಂಚ್ ಮಾಡಿತ್ತು. ಈಗ ಟಿಗೊರ್ ಇವಿ ಕಾರನ್ನು ಇಷ್ಟರಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸನ್ನದ್ಧವಾಗುತ್ತಿದೆ. ಕಂಪನಿಯ ಮೂಲಗಳ ಪ್ರಕಾರ ಐಸಿಇ-ಪವರ್ ಮೇಲೆ ಆಧಾರಿತಗೊಂಡಿರುವ ಹೊಸ ಟಿಗೊರ್ ಇವಿ ಕಾರು ಸಂಸ್ಥೆಯ ಜಿಪ್ಟ್ರಾನ್ ಟೆಕ್ನಾಲಜಿಯನ್ನು ಹೊಂದಿರುತ್ತದೆ. ಸದರಿ ಟೆಕ್ನಾಲಜಿಯು ಲಿಥಿಯಂ- ಅಯಾನ್ ಜೋಡಿಯಾಗಿರುವ ಶಾಶ್ವತ ಮ್ಯಾಗ್ನೆಟ್ ಎಸಿ ಮೋಟಾರ್ ಅನ್ನು ಒದಗಿಸುತ್ತದೆ. ಈ ಬ್ಯಾಟರಿ ಪ್ಯಾಕ್ ಧೂಳು ನಿರೋಧಕ ಮತ್ತು ನೀರು ನಿರೋಧಕವಾಗಿದ್ದು ಐಪಿ67 ಸ್ಟ್ಯಾಂಡರ್ಡ್ಗೆ ಅನುಗುಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಗೆ ನೋಡಿದರೆ, ಟಿಗೊರ್ ಇವಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಪನಿ ಶೇರ್ ಮಾಡಿಲ್ಲ. ಟಾಟಾ ಮೋಟರ್ಸ್ ಸಂಸ್ಥೆಯು ಐದು ಮಾಡೆಲ್ಗಳಲ್ಲಿ ಟಾಟಾ ನೆಕ್ಸಾನ್ ಇವಿ ಕಾರನ್ನು ಬಿಡುಗಡೆ ಮಾಡಿದೆ-ಎಕ್ಸ್ಎಮ್, ಎಕ್ಸ್ಜೆಡ್+, ಎಕ್ಸ್ಜೆಡ್+ ಲಕ್ಸ್, ಡಾರ್ಕ್ ಎಕ್ಸ್ಜೆಡ್+, ಮತ್ತು ಡಾರ್ಕ್ ಎಕ್ಸ್ಜೆಡ್+.
ಹೌದು, ನೀವಂದುಕೊಳ್ಳುತ್ತಿರವಂತೆ ಎಲ್ಲ ಮಾಡೆಲ್ ನೆಕ್ಸಾನ್ ಇವಿ ಕಾರುಗಳ ಬೆಲೆ ಭಿನ್ನವಾಗಿದೆ. ಈ ಕಾರುಗಳ ಎಕ್ಸ್ ಶೋರೂಮ್ ಬೆಲೆ ಕೆಳಗಿನಂತಿದೆ.
ನೆಕ್ಸಾನ್ ಇವಿ ಎಕ್ಸ್ ಎಮ್-ರೂ 13.99 ಲಕ್ಷ
ನೆಕ್ಸಾನ್ ಇವಿ ಎಕ್ಸ್ಜೆಡ್+- ರೂ. 15.56 ಲಕ್ಷ
ನೆಕ್ಸಾನ್ ಇವಿ ಎಕ್ಸ್ಜೆಡ್+ ಲಕ್ಸ್-ರೂ. 16.56 ಲಕ್ಷ
ನೆಕ್ಸಾನ್ ಇವಿ ಡಾರ್ಕ್ ಎಕ್ಸ್ಜೆಡ್-ರೂ. 15.99 ಲಕ್ಷ
ನೆಕ್ಸಾನ್ ಇವಿ ಡಾರ್ಕ್ ಎಕ್ಸ್ಜೆಡ್+ ಲಕ್ಸ್-ರೂ. 16.85 ಲಕ್ಷ
ಇದನ್ನೂ ಓದಿ: Viral Video: ಇಂತಹ ಡ್ರೈವಿಂಗ್ ಕೌಶಲ್ಯ ನಾಸಾದವರೇ ಕಲಿಸಿರಬೇಕು! ವಿಡಿಯೋ ನೋಡಿದ್ರೆ ನೀವೂ ಹೀಗನ್ನಬಹುದು