ಲಾಂಚ್ ಉದ್ದೇಶವನ್ನು ಪೂರ್ಣಗೊಳಿಸುವಲ್ಲಿ ತಾಂತ್ರಿಕ ದೋಷದಿಂದ ವಿಫಲವಾದ ಇಒಎಸ್-03 ಭೂ ಪರವೀಕ್ಷಣಾ ಉಪಗ್ರಹ
ಬಾಹ್ಯಾಕಾಶಕ್ಕೆ ಜಿಗಿದ 19 ನಿಮಿಷಗಳ ನಂತರ ಇಒಎಸ್ ಅನ್ನು ಹೊತ್ತಿದ್ದ ರಾಕೆಟ್ ಜಿಯೋಸಿಂಕ್ರೊನಾಸ್ ಟ್ರಾನ್ಸ್ಫರ್ ಕಕ್ಷೆಯಲ್ಲಿ ಅದನ್ನು ಇಳಿಸಬೇಕಿತ್ತು.
ಗುರುವಾರ ಬೆಳಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂತರಿಕ್ಷಕ್ಕೆ ಹಾರಿಬಿಟ್ಟ ಇಒಎಸ್-03 ಭೂ ಪರಿವೀಕ್ಷಣಾ ಉಪಗ್ರಹವು ತನ್ನನ್ನು ಆಕಾಶಕ್ಕೆ ಹಾರಿಬಿಟ್ಟ ಉದ್ದೇಶವನ್ನು ಪೂರ್ಣಗೊಳಿಸುವಲ್ಲಿ ವಿಫಲವಾಯಿತು. ತಾಂತ್ರಿಕ ವೈಫಲ್ಯದಿಂದ ಲಾಂಚ್ ಪೂರ್ಣಗೊಳ್ಳಲಿಲ್ಲ ಎಂದು ಇಸ್ರೋ ಹೇಳಿದೆ. ಉಪಗ್ರಹವನನ್ನು ಹಾರಿಬಿಟ್ಟಾಗ ಅದರ ಮೊದಲ ಮತ್ತು ಎರಡನೇ ಹಂತದ ಚಟುವಟಿಗೆ ಸಾಮಾನ್ಯವಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಕ್ರಯೋಜಿನಿಕ್ ಅಪ್ಪರ್ ಸ್ಟೇಜ್ನಲ್ಲಿ ಹೊತ್ತಿಕೊಳ್ಳುವಿಕೆ (ಇಗ್ನಿಷನ್) ಸಾಧ್ಯವಾಗಲಿಲ್ಲ. ಹಾಗಾಗಿ ಉಪಗ್ರಹ ಉಡಾವಣೆಯ ಉದ್ದೇಶಿತ ಗುರಿ ಈಡೇರಲಿಲ್ಲ’ ಅಂತ ಇಸ್ರೋ ಹೇಳಿಕೆಯೊಂದರಲ್ಲಿ ತಿಳಿಸಿದೆ.
GSLV-F10 launch took place today at 0543 Hrs IST as scheduled. Performance of first and second stages was normal. However, Cryogenic Upper Stage ignition did not happen due to technical anomaly. The mission couldn't be accomplished as intended.
— ISRO (@isro) August 12, 2021
ನೈಸರ್ಗಿಕ ವಿಪತ್ತುಗಳಾದ ಚಂಡಮಾರುತ, ಮೇಘಸ್ಫೋಟ, ಬಿರುಗಾಳಿ ಮೊದಲಾದವುಗಳನ್ನು ತ್ವರಿತ ಗತಿಯಲ್ಲಿ ನಿಗ್ರಾಣಿ ಮಾಡುವುದಕ್ಕೆಂದು ಜಿಯೋಸಿಂಕ್ರೊನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ) ಮೂಲಕ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೆಂದ್ರದಿಂದ 26-ಗಂಟೆಗಳ ಕೌಂಟ್ಡೌನ್ ನಂತರ ಗುರುವಾರ ಬೆಳಗ್ಗೆ 5:43 ಕ್ಕೆ ಅಂತರಿಕ್ಷಕ್ಕೆ ಕಳಿಸಲಾಗಿತ್ತು.
ಅದರೆ ಸ್ವಲ್ಪ ಸಮಯದಲ್ಲೇ ಮಿಶನ್ ಕಂಟ್ರೋಲ್ ಸೆಂಟರ್ನಲ್ಲಿ ರೇಂಜ್ ಕಾರ್ಯಾಚರಣೆಗಳ ನಿರ್ದೇಶಕರು, ‘ತಾಂತ್ರಿಕ ತೊಂದರೆಯಿಂದ ಮಿಶನ್ ಸಂಪೂರ್ಣಗೊಳ್ಳಲಿಲ್ಲ,’ ಎಂದು ಘೋಷಿಸಿದರು.
ಬಾಹ್ಯಾಕಾಶಕ್ಕೆ ಜಿಗಿದ 19 ನಿಮಿಷಗಳ ನಂತರ ಇಒಎಸ್ ಅನ್ನು ಹೊತ್ತಿದ್ದ ರಾಕೆಟ್ ಜಿಯೋಸಿಂಕ್ರೊನಾಸ್ ಟ್ರಾನ್ಸ್ಫರ್ ಕಕ್ಷೆಯಲ್ಲಿ ಅದನ್ನು ಇಳಿಸಬೇಕಿತ್ತು.