ನಿಮ್ಮದು ಸುದೀಪ್​ ಜಾತಿಯೇ ಆಗಿದ್ರಿಂದ ಬಿಗ್​ಬಾಸ್​ ಟ್ರೋಫಿ ಸಿಕ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಮಂಜು ಪಾವಗಡ

ಈ ವಿಚಾರವನ್ನು ಗೆಲುವಿನ ಖುಷಿಯಲ್ಲಿರುವ ಮಂಜು ಪಾವಗಡ ಅವರ ಮುಂದಿಟ್ಟಾಗ ನಾನು ಇದಕ್ಕೆ ಉತ್ತರಿಸುವುದಿಲ್ಲ ಎಂದು ಹೇಳಿದರಾದರೂ ಕೊನೆಗೆ ಒಂದು ಸಾಲಿನಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಗೆಲುವಿಗೆ ಜಾತಿಯ ಕಾರಣ ತಳುಕು ಹಾಕಿದವರಿಗೆ ಉತ್ತರ ಕೊಟ್ಟಿದ್ದಾರೆ.

TV9kannada Web Team

| Edited By: Skanda

Aug 12, 2021 | 9:44 AM

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ 8ನೇ ಆವೃತ್ತಿ ಮುಕ್ತಾಯಗೊಂಡಿದೆ. ಇಷ್ಟು ದಿನ ದೊಡ್ಡಮನೆಯ ಒಳಗೆ ಬಂಧಿಯಾಗಿ ಜನರಿಗೆ ಮನರಂಜನೆ ನೀಡುತ್ತಿದ್ದವರೆಲ್ಲಾ ಇದೀಗ ಹೊರಗೆ ಬಂದು ತಮ್ಮ ಪ್ರಯಾಣ ಹೇಗಿತ್ತು ಎಂದು ಮೆಲುಕು ಹಾಕುತ್ತಿದ್ದಾರೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್​ಬಾಸ್​ ಸ್ಪರ್ಧಿಗಳ ಕುರಿತಾದ ಗುಸುಗುಸು ಇನ್ನೂ ನಿಂತಿಲ್ಲ. ಈಗ ಗೆದ್ದವರು ಹೇಗೆ ಗೆದ್ದರು? ಅಸಲಿಗೆ ಯಾರು ಗೆಲ್ಲಬೇಕಿತ್ತು? ಯಾರಿಗೆ ಯಾವುದು ವರದಾನವಾಯಿತು? ಹೀಗೆ ಜನ ತಮಗೆ ಅನ್ನಿಸಿದ್ದನ್ನು ವಿಮರ್ಶಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಈ ನಡುವೆ ಬಿಗ್​ಬಾಸ್​ ಟ್ರೋಫಿಗೆ ಮುತ್ತಿಕ್ಕಿದ ಮಂಜು ಪಾವಗಡ ಅವರ ಗೆಲುವನ್ನು ಜಾತಿಗೆ ತಳುಕು ಹಾಕಿ ಕೆಲವರು ಚರ್ಚೆ ಆರಂಭಿಸಿದ್ದಾರೆ. ಕಾಲ ಎಷ್ಟೇ ಮುಂದೆ ಹೋದರೂ ಜನರ ತಲೆಯಿಂದ ಈ ಜಾತಿಯ ವಿಚಾರಗಳು ಹೊರಗೆ ಬಂದಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನವೂ ಹೌದು.

ಬಿಗ್​ಬಾಸ್​ ಸಾರಥಿ ಕಿಚ್ಚ ಸುದೀಪ್​ ಹಾಗೂ ಮಂಜು ಪಾವಗಡ ಒಂದೇ ಜಾತಿಯವರಾಗಿದ್ದೇ ಮಂಜು ಗೆಲುವಿಗೆ ವರದಾನವಾಯಿತು ಎಂದು ಕೆಲವರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ರೀತಿ ಬರೆದುಕೊಂಡಿರುವುದಕ್ಕೆ ಪ್ರಜ್ಞಾವಂತರು ಆಕ್ಷೇಪ ಎತ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ ಕೂಡಾ. ಅಂದಹಾಗೆ, ಇದೇ ವಿಚಾರವನ್ನು ಗೆಲುವಿನ ಖುಷಿಯಲ್ಲಿರುವ ಮಂಜು ಪಾವಗಡ ಅವರ ಮುಂದಿಟ್ಟಾಗ ನಾನು ಇದಕ್ಕೆ ಉತ್ತರಿಸುವುದಿಲ್ಲ ಎಂದು ಹೇಳಿದರಾದರೂ ಕೊನೆಗೆ ಒಂದು ಸಾಲಿನಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಗೆಲುವಿಗೆ ಜಾತಿಯ ಕಾರಣ ತಳುಕು ಹಾಕಿದವರಿಗೆ ಉತ್ತರ ಕೊಟ್ಟಿದ್ದಾರೆ. ಅವರ ಉತ್ತರ ಏನಿತ್ತು ಎನ್ನುವುದನ್ನು ವಿಡಿಯೋದಲ್ಲಿ ನೋಡಿ.

ಇದನ್ನೂ ಓದಿ:
ಬಿಗ್​ ಬಾಸ್ ಪಾಸ್​ ಆದ ಮಂಜು ಕಾಲೇಜಿನಲ್ಲಿ 9 ಬಾರಿ ಪರೀಕ್ಷೆ ಕಟ್ಟಿದರೂ ಪಾಸ್​ ಆಗಲಿಲ್ಲ; ಅವರ ವಿದ್ಯಾರ್ಹತೆ ಏನು?

(Manju slams those who said Sudeep and Manju are from same caste so he won the Bigg boss Kannada 8)

Follow us on

Click on your DTH Provider to Add TV9 Kannada