ಹಲವು ಸೂಟ್​ಕೇಸ್​ಗಳಲ್ಲಿ ಒಳಉಡುಪು ತುಂಬಿಕೊಂಡು ವಿದೇಶಕ್ಕೆ ಹೋಗುವ ಕರಣ್​ ಜೋಹರ್​; ಏನಿದು ವಿಚಿತ್ರ ವರ್ತನೆ?

ವಿದೇಶಕ್ಕೆ ತೆರಳುವಾಗ ಕರಣ್​ ಜೋಹರ್​ ಹಲವು ಸೂಟ್​ಕೇಸ್​ಗಳಲ್ಲಿ ಒಳ ಉಡುಪು ತುಂಬಿಕೊಂಡು ಹೋಗುತ್ತಾರೆ. ಒಮ್ಮೆ ವಿದೇಶಕ್ಕೆ ಹೋಗುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಅವರು 14 ಸೂಟ್​ಕೇಸ್​ಗಳ ಜೊತೆ ಕಾಣಿಸಿಕೊಂಡಿದ್ದರು!

ಹಲವು ಸೂಟ್​ಕೇಸ್​ಗಳಲ್ಲಿ ಒಳಉಡುಪು ತುಂಬಿಕೊಂಡು ವಿದೇಶಕ್ಕೆ ಹೋಗುವ ಕರಣ್​ ಜೋಹರ್​; ಏನಿದು ವಿಚಿತ್ರ ವರ್ತನೆ?
ಕರಣ್ ಜೋಹರ್
Follow us
ಮದನ್​ ಕುಮಾರ್​
|

Updated on: May 25, 2021 | 2:15 PM

ಭಾರತೀಯ ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ಕರಣ್​ ಜೋಹರ್​ ಅವರದ್ದು ಭಿನ್ನ ವ್ಯಕ್ತಿತ್ವ. ಹಲವು ಹಿಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅವರು ಉತ್ತಮ ನಿರ್ದೇಶಕ ಕೂಡ ಹೌದು. ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕೂಡ. ಅನೇಕ ಟಾಕ್​ಶೋ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿಯೂ ಅವರು ಫೇಮಸ್​. ಕಾಫಿ ವಿತ್​ ಕರಣ್​ ಶೋ ಮೂಲಕ ಅವರು ದೊಡ್ಡ ಸೆನ್ಸೇಷನ್​ ಸೃಷ್ಟಿ ಮಾಡಿದ್ದರು. ಇಷ್ಟೆಲ್ಲ ಖ್ಯಾತಿ ಇರುವ ಕರಣ್​ ಜೋಹರ್​ ಅನೇಕ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದುಂಟು. ಅಷ್ಟೇ ಅಲ್ಲ, ಅವರ ಒಂದು ವಿಚಿತ್ರವಾದ ವರ್ತನೆ ಬಗ್ಗೆಯೂ ಒಮ್ಮೆ ಬಾಯಿ ಬಿಟ್ಟಿದ್ದರು.

ಬಾಲಿವುಡ್​ ನಟಿ ನೇಹಾ ಧೂಪಿಯಾ ಅವರು ನಡೆಸಿಕೊಡುವ ‘ನೋ ಫಿಲ್ಟರ್​ ನೇಹಾ’ ಟಾಕ್​ ಶೋನಲ್ಲಿ ಕರಣ್ ಜೋಹರ್​ ಭಾಗವಹಿಸಿದ್ದರು. ಹೆಸರೇ ಸೂಚಿಸುವಂತೆ ಹೆಚ್ಚಿನ ಫಿಲ್ಟರ್​ ಇಲ್ಲದ ಮಾತುಕತೆ ಈ ಕಾರ್ಯಕ್ರಮದಲ್ಲಿ ನಡೆಯುತ್ತದೆ. ಆಗ ಕರಣ್​ ಅವರ ಒಂದು ವಿಚಿತ್ರ ವರ್ತನೆ ಬಗ್ಗೆ ನೇಹಾ ಪ್ರಸ್ತಾಪಿಸಿದ್ದರು. ವಿದೇಶಕ್ಕೆ ತೆರಳುವಾಗ ಕರಣ್​ ಜೋಹರ್​ ಹಲವು ಸೂಟ್​ಕೇಸ್​ಗಳಲ್ಲಿ ಒಳ ಉಡುಪು ತುಂಬಿಕೊಂಡು ಹೋಗುತ್ತಾರೆ. ಒಮ್ಮೆ ವಿದೇಶಕ್ಕೆ ಹೋಗುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಅವರು 14 ಸೂಟ್​ಕೇಸ್​ಗಳ ಜೊತೆ ಕಾಣಿಸಿಕೊಂಡಿದ್ದರು! ಯಾಕೆ ಹೀಗೆ ಎಂದು ಕೇಳಿದ್ದಕ್ಕೆ ಕರಣ್​ ಕೊಟ್ಟ ಉತ್ತರ ಕೇಳಿ ನೇಹಾ ನಕ್ಕು ನಕ್ಕು ಸುಸ್ತಾದರು.

‘ನಾನು ಸಿಕ್ಕಾಪಟ್ಟೆ ಒಳಉಡುಪುಗಳನ್ನು ತೆಗೆದುಕೊಂಡು ಹೋಗುತ್ತೇನೆ. ವಿದೇಶಕ್ಕೆ ಹೋದಾಗ ಪದೇಪದೇ ಅವುಗಳನ್ನು ಲಾಂಡ್ರಿಗೆ ನೀಡಲು ನನಗೆ ಸಮಯ ಇರುವುದಿಲ್ಲ. ಪ್ರತಿ ದಿನ ನಾನು ಮೂರು ಬಾರಿ ಒಳ ಉಡುಪು ಬದಲಾಯಿಸುತ್ತೇನೆ. ಯಾಕೆಂದರೆ ಅವು ನನ್ನೊಳಗೆ ಏನೋ ಕಷ್ಟ ಅನುಭವಿಸುತ್ತಿವೆ ಅಂತ ನನಗೆ ಆಗಾಗ ಅನಿಸುತ್ತದೆ. ಪ್ರಯಾಣ ಮಾಡುವಾಗ ಅನೇಕ ಇನ್ನರ್​ವೇರ್​ಗಳು, ಸಾಕ್ಸ್​ ಹಾಗೂ ಶೂ ಇರುತ್ತವೆ. ಹಾಗಾಗಿ ಅಷ್ಟೊಂದು ಸ್ಯೂಟ್​ಕೇಸ್​ ಬೇಕಾಗುತ್ತದೆ’ ಎಂದು ಕರಣ್​ ಉತ್ತರಿಸಿದ್ದರು.

ಅನೇಕ ಸ್ಟಾರ್​ ಕಿಡ್​ಗಳನ್ನು ಲಾಂಚ್​ ಮಾಡಿದ ಕೀರ್ತಿ ಕರಣ್​ ಜೋಹರ್​ಗೆ ಸಲ್ಲುತ್ತದೆ. ಅದರಿಂದ ನೆಪೋಟಿಸಂ ರೂವಾರಿ ಎಂಬ ಹಣೆಪಟ್ಟಿಯೂ ಅವರಿಗೆ ಕಟ್ಟಲಾಗಿದೆ. ಚಿತ್ರರಂಗದಲ್ಲಿ ಗುಂಪುಗಾರಿಕೆ ಮತ್ತು ತಾರತಮ್ಯ ಮಾಡುತ್ತಾರೆ ಎಂದು ಕರಣ್​ ಜೋಹರ್​ ಮೇಲೆ ಕಂಗನಾ ರಣಾವತ್​ ಮೊದಲಿನಿಂದಲೂ ಆರೋಪ ಮಾಡುತ್ತಲೇ ಬಂದಿದ್ದಾರೆ. ಕರಣ್​ ಅವರ ಧರ್ಮ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಸದ್ಯ ಬ್ರಹ್ಮಾಸ್ತ್ರ, ದೋಸ್ತಾನಾ 2, ಲೈಗರ್​ ಮುಂತಾದ ಸಿನಿಮಾಗಳು ಸಿದ್ಧವಾಗುತ್ತಿವೆ.

ಇದನ್ನೂ ಓದಿ:

Happy Birthday Karan Johar: ಕರಣ್​ ಜೋಹರ್​ 49ನೇ ಜನ್ಮದಿನ; ಲಾಕ್​ಡೌನ್​ನಲ್ಲೂ ಪಾರ್ಟಿ?

ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ