AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ ಯೂ ವರ್ಜಿನ್​? ಖ್ಯಾತ ನಟಿಯ ಪುತ್ರಿಗೆ ನೆಟ್ಟಿಗನ ಪ್ರಶ್ನೆ; ಸಿಕ್ಕ ಉತ್ತರವೂ ಅಷ್ಟೇ ಖಡಕ್​

Surekha Vani daughter Supritha: ‘ನನಗೊಂದು ಪ್ರಶ್ನೆ ಕೇಳಿ’ ಎಂದು ಅಭಿಮಾನಿಗಳಿಗೆ ಸುಪ್ರಿತಾ ಅವಕಾಶ ನೀಡಿದರು. ಆಗ ನೆಟ್ಟಿಗರು ಬಗೆಬಗೆಯ ಪ್ರಶ್ನೆ ಕೇಳಿದರು. ಅದರಲ್ಲಿ ಒಬ್ಬಾತ ಮಾತ್ರ ನೇರವಾಗಿ ‘ನೀವು ವರ್ಜಿನ್​ ಹೌದೋ ಅಲ್ಲವೋ’ ಎಂದು ಕೇಳಿದ್ದಾನೆ.

ಆರ್​ ಯೂ ವರ್ಜಿನ್​? ಖ್ಯಾತ ನಟಿಯ ಪುತ್ರಿಗೆ ನೆಟ್ಟಿಗನ ಪ್ರಶ್ನೆ; ಸಿಕ್ಕ ಉತ್ತರವೂ ಅಷ್ಟೇ ಖಡಕ್​
ಸುಪ್ರಿತಾ
ಮದನ್​ ಕುಮಾರ್​
|

Updated on: May 25, 2021 | 3:57 PM

Share

ಕೊರೊನಾ ವೈರಸ್​ ನಿಯಂತ್ರಿಸುವ ಕಾರಣಕ್ಕಾಗಿ ಎಲ್ಲ ಕಡೆಗಳಲ್ಲಿ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಸಿನಿಮಾ, ಧಾರಾವಾಹಿಗಳ ಶೂಟಿಂಗ್​ ಕೂಡ ಸ್ಥಗಿತಗೊಂಡಿದೆ. ಹಾಗಾಗಿ ಎಲ್ಲ ಸೆಲೆಬ್ರಿಟಿಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾ ಬಳಕೆಯನ್ನು ನಟ-ನಟಿಯರು ಹೆಚ್ಚು ಮಾಡಿದ್ದಾರೆ. ಫ್ಯಾನ್ಸ್​ ಜೊತೆ ಪ್ರಶ್ನೋತ್ತರವನ್ನೂ ಅವರು ನಡೆಸುತ್ತಾರೆ. ಈ ವೇಳೆ ತರಹೇವಾರಿ ಪ್ರಶ್ನೆಗಳು ಜನರಿಂದ ಎದುರಾಗುತ್ತವೆ. ಇತ್ತೀಚೆಗೆ ಟಾಲಿವುಡ್​ ಜನಪ್ರಿಯ ನಟಿ ಸುರೇಖಾ ವಾಣಿ ಅವರ ಪುತ್ರಿಗೆ ನೆಟ್ಟಿಗರು ‘ಆರ್​ ಯೂ ವರ್ಜಿನ್​’ ಎಂದು ಕೇಳಿದ್ದಾರೆ.

ನಟಿ ಸುರೇಖಾ ವಾಣಿ ಅವರು ಪೋಷಕ ಪಾತ್ರಗಳ ಮೂಲಕ ಫೇಮಸ್​ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲೂ ಅವರು ಲಕ್ಷಾಂತರ ಫಾಲೋವರ್ಸ್​ ಹೊಂದಿದ್ದಾರೆ. ಇನ್ನು ಅವರು ಪುತ್ರಿ ಸುಪ್ರಿತಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದಾರೆ. ಕಲರ್​ಫುಲ್​ ಆದ ಫೋಟೋಶೂಟ್​ಗಳ ಮೂಲಕ ಆಗಾಗ ಗಮನ ಸೆಳೆಯುತ್ತಾರೆ. ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುತ್ತ, ಇನ್​ಸ್ಟಾಗ್ರಾಮ್​ನಲ್ಲಿ ನಾಲ್ಕು ಲಕ್ಷ ಫಾಲೋವರ್ಸ್​ ಸಂಪಾದಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು.

‘ನನಗೊಂದು ಪ್ರಶ್ನೆ ಕೇಳಿ’ ಎಂದು ಅಭಿಮಾನಿಗಳಿಗೆ ಸುಪ್ರಿತಾ ಅವಕಾಶ ನೀಡಿದರು. ಆಗ ನೆಟ್ಟಿಗರು ಬಗೆಬಗೆಯ ಪ್ರಶ್ನೆ ಕೇಳಿದರು. ಒಬ್ಬಾತ ಮಾತ್ರ ನೇರವಾಗಿ ‘ನೀವು ವರ್ಜಿನ್​ ಆಗಿದ್ದೀರಾ’ ಎಂದು ಕೇಳಿದ್ದಾನೆ. ಈ ಪ್ರಶ್ನೆಯನ್ನು ಸುಪ್ರಿತಾ ನಿರೀಕ್ಷಿಸಿರಲಿಲ್ಲ ಎನಿಸುತ್ತದೆ. ಆದರೆ ಸಾಮಾನ್ಯವಾಗಿ ಈ ರೀತಿ ಆನ್​ಲೈನ್​ನಲ್ಲಿ ಪ್ರಶ್ನೋತ್ತರಕ್ಕೆ ಇಳಿಯುವ ಅನೇಕ ನಟಿಯರಿಗೆ ಆರ್​ ಯೂ ವರ್ಜಿನ್​ ಎಂಬ ಪ್ರಶ್ನೆ ಎದುರಾಗುತ್ತದೆ. ಅದನ್ನು ಸುಪ್ರಿತಾ ಸ್ವೀಕರಿಸಿ, ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ನೆಟ್ಟಿಗರು ಕೇಳಿದ ಆ ಪ್ರಶ್ನೆಗೆ ಉತ್ತರವಾಗಿ ಪವನ್​ ಕಲ್ಯಾಣ್​ ನಟನೆಯ ‘ವಕೀಲ್​ ಸಾಬ್​’ ಸಿನಿಮಾದ ಒಂದು ವಿಡಿಯೋವನ್ನು ಸುಪ್ರಿಯಾ ಶೇರ್​ ಮಾಡಿದ್ದಾರೆ. ಆ ಸಿನಿಮಾದಲ್ಲಿ ವಕೀಲರು (ಪ್ರಕಾಶ್​ ರಾಜ್​) ಯುವತಿಯೊಬ್ಬಳಿಗೆ (ಅಂಜಲಿ) ಆರ್​ ಯೂ ವರ್ಜಿನ್​ ಎಂದು ಕೇಳುತ್ತಾರೆ. ಅದು ಆ ಸಿನಿಮಾದಲ್ಲಿ ತುಂಬ ಪ್ರಮುಖ ದೃಶ್ಯವಾಗಿದೆ. ಆ ಮೂಲಕ ಯುವತಿ ವರ್ಜಿನ್​ ಹೌದೋ ಅಲ್ಲವೋ ಎಂಬುದು ಇಲ್ಲಿ ಮುಖ್ಯವಲ್ಲ ಎಂಬ ಮಾತನ್ನು ಹೇಳಲಾಗಿತ್ತು. ಆ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ, ನೆಟ್ಟಿಗರು ಕೇಳಿದ ಪ್ರಶ್ನೆಗೆ ಖಡಕ್​ ಆಗಿ ಸುಪ್ರಿಯಾ ಉತ್ತರಿಸಿದ್ದಾರೆ.

ಇದನ್ನೂ ಓದಿ:

ನಮ್ಮ ಕಾಲದಲ್ಲಿ ಹೀರೋಯಿನ್​ಗಳು ವರ್ಜಿನ್​ ಆಗಿರಬೇಕಿತ್ತು; ಮಗಳ ಪರ್ಸನಲ್​ ಲೈಫ್​ ಕೆದಕಿದವರಿಗೆ ನಟಿಯ ಉತ್ತರ

Are you a Virgin? ಎಂದು ಕೇಳಿದ ಅಭಿಮಾನಿಗೆ ನಟಿ ಶಾನ್ವಿ ಶ್ರೀವಾಸ್ತವ ನೀಡಿದ ಬೋಲ್ಡ್ ಉತ್ತರ ಇದು!

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ