‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ

Bigg Boss OTT: ಬಿಗ್​ ಬಾಸ್​ ಶೋನಲ್ಲಿ ಶಮಿತಾ ಶೆಟ್ಟಿ ಈ ವಿಷಯ ಬಾಯಿಬಿಟ್ಟಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಇಷ್ಟು ದಿನ ಮುಚ್ಚಿಟ್ಟಿದ್ದ ಆ ರಹಸ್ಯವನ್ನು ಅವರು ಬಯಲು ಮಾಡಿದ್ದಾರೆ.

‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Aug 12, 2021 | 2:11 PM

ಅಶ್ಲೀಲ ಸಿನಿಮಾ ನಿರ್ಮಾಣ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರ ವಶದಲ್ಲಿರುವ ರಾಜ್​ ಕುಂದ್ರಾ (Raj Kundra) ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅವರ ಬಂಧನದ ಬಳಿಕ ಪತ್ನಿ ಶಿಲ್ಪಾ ಶೆಟ್ಟಿ (Shilpa Shetty), ನಾದಿನಿ ಶಮಿತಾ ಶೆಟ್ಟಿ (Shamita Shetty) ಸೇರಿದಂತೆ ಇಡೀ ಕುಟುಂಬವೇ ಮುಜುಗರ ಅನುಭವಿಸುವಂತಾಗಿದೆ. ಅದರ ನಡುವೆಯೂ ಶಮಿತಾ ಶೆಟ್ಟಿ ಅವರು ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ. ಅವರು ಇದರಲ್ಲಿ ಭಾಗವಹಿಸುತ್ತಿರುವುದರ ಬಗ್ಗೆ ಪರ-ವಿರೋಧದ ಚರ್ಚೆ ಜೋರಾಗಿದೆ. ಹಾಗಾಗಿ ದೊಡ್ಮನೆಯೊಳಗೆ ಶಮಿತಾ ಶೆಟ್ಟಿಯ ಪ್ರತಿ ಚಲನವಲನ ಕೂಡ ದೊಡ್ಡ ಸುದ್ದಿ ಆಗುತ್ತಿದೆ. ಈಗ ತಮ್ಮ ಬದುಕಿನ ಒಂದು ಕಹಿ ಘಟನೆಯನ್ನು ಅವರು ಹೇಳಿಕೊಂಡಿದ್ದಾರೆ.

ಕರಣ್​ ಜೋಹರ್​ ನಡೆಸಿಕೊಡುತ್ತಿರುವ ‘ಬಿಗ್​ ಬಾಸ್​ ಓಟಿಟಿ’ ಶೋ ಕೇವಲ ವೂಟ್​ನಲ್ಲಿ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮ ತುಂಬ ವಿವಾದಾತ್ಮಕವಾಗಿದ್ದು, ಹಲವು ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ. ಅದರಲ್ಲಿ ಕೊರಿಯೋಗ್ರಾಫರ್​ ನಿಶಾಂತ್​ ಭಟ್​ ಸಹ ಇದ್ದಾರೆ. ಆದರೆ ಅವರ ಜೊತೆಗೆ ಶಮಿತಾ ಶೆಟ್ಟಿ ಬೆರೆಯುತ್ತಿಲ್ಲ. ಅವರಿಂದ ಸಾಧ್ಯವಾದಷ್ಟು ಅಂತರವನ್ನು ಕಾಪಾಡಿಕೊಳ್ಳಲು ಶಮಿತಾ ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.

ಸಹ ಸ್ಪರ್ಧಿ ದಿವ್ಯಾ ಅಗರ್​ವಾಲ್​ ಜೊತೆ ಮಾತನಾಡುವಾಗ ಶಮಿತಾ ಶೆಟ್ಟಿ ಈ ವಿಷಯ ಬಾಯಿಬಿಟ್ಟಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಇಷ್ಟು ದಿನ ಮುಚ್ಚಿಟ್ಟಿದ್ದ ಆ ರಹಸ್ಯವನ್ನು ಅವರು ಬಯಲು ಮಾಡಿದ್ದಾರೆ. ‘ಒಂದು ಶೋನಲ್ಲಿ ಜೊತೆಯಾಗಿ ಕೆಲಸ ಮಾಡುವಾಗ ನಿಶಾಂತ್​ ಭಟ್​ ನನ್ನೊಂದಿಗೆ ಲಿಮಿಟ್​ ಕ್ರಾಸ್​ ಮಾಡಿದ್ದ. ಅದು ನನಗೆ ಕಿರಿಕಿರಿ ಉಂಟುಮಾಡಿತ್ತು. ಆ ಬಳಿಕ ನಾನು ಅವನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ’ ಎಂದು ಶಮಿತಾ ಹೇಳಿದ್ದಾರೆ.

‘ಆ ಘಟನೆ ಯಾವುದು ಎಂದು ನಾನು ಹೇಳಲು ಇಷ್ಟಪಡುವುದಿಲ್ಲ. ಆದರೆ ಅವನು ಮಿತಿ ಮೀರಿ ವರ್ತಿಸಿದ್ದ. ಅದು ನನಗೆ ಇಷ್ಟ ಆಗಿರಲಿಲ್ಲ. ಆ ಘಟನೆ ಬಳಿಕ ಅವನು ನನ್ನೊಂದಿಗೆ ಮಾತನಾಡುತ್ತಿದಿಲ್ಲ. ಅದನ್ನು ನೆನಪಿಸಲು ನನಗೂ ಇಷ್ಟ ಇಲ್ಲ’ ಎಂದು ಶಮಿತಾ ಶೆಟ್ಟಿ ಹೇಳಿರುವುದು ಚರ್ಚೆ ಆಗುತ್ತಿದೆ. ಈ ಮಾತು ನಿಶಾಂತ್​ ಕಿವಿಗೆ ಬಿದ್ದರೆ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ವೀಕ್ಷಕರಲ್ಲಿ ಮೂಡಿದೆ.

ಇದನ್ನೂ ಓದಿ:

ಕೈಯಲ್ಲಿ ಸಿನಿಮಾಗಳೇ ಇಲ್ಲದಿದ್ರೂ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ 35 ಕೋಟಿ ಆಸ್ತಿಯ ಒಡತಿ; ಹೇಗೆ ಗೊತ್ತಾ?

‘ರಾಜ್ ಕುಂದ್ರಾ ರಾತ್ರಿಯ ಯೋಗ ಪೋಸ್​ ಕಲಿಸುತ್ತಾರೆ’; ಶಿಲ್ಪಾ ಶೆಟ್ಟಿ ತಂಗಿಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್