AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಲ್ಪಾ ಶೆಟ್ಟಿಯಿಂದಾಗಿ ತಾವು ಅನುಭವಿಸಿದ ಹಿಂಸೆ ಬಗ್ಗೆ ವಿವರಿಸಿ ಗಳಗಳನೆ ಅತ್ತ ತಂಗಿ ಶಮಿತಾ ಶೆಟ್ಟಿ

Shamita Shetty: ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮದ ವೀಕೆಂಡ್​ ಎಪಿಸೋಡ್​ನಲ್ಲಿ ಶಮಿತಾ ಶೆಟ್ಟಿ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿಯ ತಂಗಿ ಎಂಬ ಕಾರಣಕ್ಕೆ ತಮಗಾದ ಹಿಂಸೆಯನ್ನು ಅವರು ವಿವರಿಸಿದ್ದಾರೆ.

ಶಿಲ್ಪಾ ಶೆಟ್ಟಿಯಿಂದಾಗಿ ತಾವು ಅನುಭವಿಸಿದ ಹಿಂಸೆ ಬಗ್ಗೆ ವಿವರಿಸಿ ಗಳಗಳನೆ ಅತ್ತ ತಂಗಿ ಶಮಿತಾ ಶೆಟ್ಟಿ
ಶಿಲ್ಪಾ ಶೆಟ್ಟಿಯಿಂದಾಗಿ ತಾವು ಅನುಭವಿಸಿದ ಹಿಂಸೆ ಬಗ್ಗೆ ವಿವರಿಸಿ ಗಳಗಳನೆ ಅತ್ತ ತಂಗಿ ಶಮಿತಾ ಶೆಟ್ಟಿ
TV9 Web
| Updated By: ಮದನ್​ ಕುಮಾರ್​|

Updated on: Aug 17, 2021 | 12:04 PM

Share

ಉದ್ಯಮಿ ರಾಜ್​ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರುತ್ತಿದ್ದಂತೆಯೇ ಅವರ ನಾದಿನಿ ಶಮಿತಾ ಶೆಟ್ಟಿ (Shamita Shetty) ಅವರು ವಿಪರೀತ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಶಿಲ್ಪಾ ಶೆಟ್ಟಿ (Shilpa Shetty) ಬಗ್ಗೆಯೂ ನೆಟ್ಟಿಗರಿಂದ ಕಟು ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಶಮಿತಾ ಶೆಟ್ಟಿ ಅವರು ಬಿಗ್​ ಬಾಸ್​ ಓಟಿಟಿ (Bigg Boss OTT) ಶೋನಲ್ಲಿ ಸ್ಪರ್ಧಿಸುತ್ತಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಪ್ರತಿ ಎಪಿಸೋಡ್​ನಲ್ಲಿಯೂ ಶಮಿತಾ ಶೆಟ್ಟಿ ಒಂದಿಲ್ಲೊಂದು ಕಾರಣಕ್ಕೆ ಶೈನ್​ ಆಗುತ್ತಿದ್ದಾರೆ. ತಮ್ಮ ಬದುಕಿನ ಹಲವು ವಿವರಗಳನ್ನು ಜನರ ಮುಂದೆ ತೆರೆದಿಡುತ್ತ, ಅವರು ಕರುಣೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. 

ಬಾಲಿವುಡ್​ನಲ್ಲಿ ಶಿಲ್ಪಾ ಶೆಟ್ಟಿ ಮಾಡಿರುವ ಸಾಧನೆ ದೊಡ್ಡದು. ಶಮಿತಾ ಶೆಟ್ಟಿ ಸಹ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿದ್ದರೂ ಕೂಡ ಅಕ್ಕನಷ್ಟು ಯಶಸ್ಸು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿ ಅವರಿಗೆ ಸ್ವಂತ ಗುರುತು ಸಿಗಲೇ ಇಲ್ಲ. ಅದು ಶಮಿತಾಗೆ ಪ್ರತಿದಿನ ಕಾಡುತ್ತಿದೆ. ಆ ವಿಚಾರವನ್ನು ಹೇಳಿಕೊಂಡು ಬಿಗ್​ ಬಾಸ್​ ಮನೆಯಲ್ಲಿ ಅವರು ಗಳಗಳನೆ ಅತ್ತಿದ್ದಾರೆ.

ತಾವು ಇಂದಿಗೂ ಶಿಲ್ಪಾ ಶೆಟ್ಟಿಯ ನೆರಳಿನಲ್ಲಿ ಬದುಕುತ್ತಿರುವುದಕ್ಕೆ ಶಮಿತಾ ಶೆಟ್ಟಿಗೆ ಸಖತ್​ ನೋವಿದೆ. ಈ ವೀಕೆಂಡ್​ ಎಪಿಸೋಡ್​ನಲ್ಲಿ ಅವರು ಆ ನೋವನ್ನು ತೋಡಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿಯ ತಂಗಿ ಎಂದೇ ಜನರು ಅವರನ್ನು ಗುರುತಿಸುತ್ತಾರೆ. ಅದರಿಂದ ಹೊರಬರಬೇಕು ಎಂದು ಶಮಿತಾ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಈಗ ತಮ್ಮತನವನ್ನು ತೋರಿಸಲು ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ನೆರಳಿನಲ್ಲಿ ತಾವು ಇರುವುದು ಕಷ್ಟಕರವೇ ಹೌದಾದರೂ ಅದು ತಮ್ಮನ್ನು ರಕ್ಷಿಸುತ್ತಿದೆ ಎಂಬ ಸತ್ಯವನ್ನೂ ಶಮಿತಾ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ತಾವು ಲಕ್ಕಿ ಎಂದೂ ಅವರು ಹೇಳಿದ್ದಾರೆ. ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮವನ್ನು ಖ್ಯಾತ ನಿರ್ಮಾಪಕ ನಿರ್ದೇಶಕ ಕರಣ್​ ಜೋಹರ್​ ನಿರೂಪಿಸುತ್ತಿದ್ದಾರೆ. ಶಮಿತಾ ಚೆನ್ನಾಗಿ ಆಟ ಆಡುತ್ತಿರುವುದಕ್ಕೆ ಕರಣ್​ ಮೆಚ್ಚುಗೆ ಸೂಚಿಸಿದ್ದಾರೆ.

ನೇಹಾ ಭಾಸಿನ್​, ರಿಧಿಕಾ ಪಂಡಿತ್​, ನಿಶಾಂತ್​ ಭಟ್​, ದಿವ್ಯಾ ಅಗರ್​ವಾಲ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಣಾಹಣಿ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ಸಂಭಾವನೆ ಎಷ್ಟು?; ಶಮಿತಾ ಶೆಟ್ಟಿಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ನಟಿ

ಕೈಯಲ್ಲಿ ಸಿನಿಮಾಗಳೇ ಇಲ್ಲದಿದ್ರೂ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ 35 ಕೋಟಿ ಆಸ್ತಿಯ ಒಡತಿ; ಹೇಗೆ ಗೊತ್ತಾ?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!