ಕಸದ ಚೀಲವನ್ನೇ ಕಾಸ್ಟ್ಯೂಮ್​ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್​ ಬಾಸ್​ನಿಂದ ಔಟ್​; ನಿಲ್ಲದ ಕಣ್ಣೀರು

Bigg Boss OTT: ‘ಈ ಎಲಿಮಿನೇಷನ್​ನಿಂದ ನನಗೆ ಶಾಕ್​ ಆಗಿದೆ. ನನ್ನನ್ನು ಯಾಕೆ ಎಲಿಮಿನೇಟ್​ ಮಾಡಲಾಗಿದೆ ಎಂಬುದೇ ತಿಳಿಯುತ್ತಿಲ್ಲ. ಈಗಲೂ ನಾನು ಅಳುತ್ತಿದ್ದೇನೆ’ ಎಂದು ಊರ್ಫಿ ಜಾವೇದ್​ ಪ್ರತಿಕ್ರಿಯೆ ನೀಡಿದ್ದಾರೆ.

ಕಸದ ಚೀಲವನ್ನೇ ಕಾಸ್ಟ್ಯೂಮ್​ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್​ ಬಾಸ್​ನಿಂದ ಔಟ್​; ನಿಲ್ಲದ ಕಣ್ಣೀರು
ಉರ್ಫಿ ಜಾವೇದ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 17, 2021 | 2:00 PM

ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್​ ಜೋಹರ್​ (Karan Johar) ನಡೆಸಿಕೊಡುತ್ತಿರುವ ‘ಬಿಗ್​ ಬಾಸ್​ ಓಟಿಟಿ’ (Bigg Boss OTT) ಕಾರ್ಯಕ್ರಮ ಸಿಕ್ಕಾಪಟ್ಟೆ ಹೈಪ್​ ಪಡೆದುಕೊಂಡಿದೆ. ಇದರಲ್ಲಿ ವಿವಾದಗಳೇ ಹೆಚ್ಚು ಸೌಂಡು ಮಾಡುತ್ತಿವೆ. ಆರು ವಾರಗಳ ಕಾಲ ಓಟಿಟಿಯಲ್ಲಿ ಪ್ರಸಾರವಾಗಲಿರುವ ಈ ಶೋನಲ್ಲೀಗ ಮೊದಲ ಎಲಿಮಿನೇಷನ್​ ನಡೆದಿದೆ. ನಟಿ ಊರ್ಫಿ ಜಾವೇದ್​ (Urfi Javed) ಅವರನ್ನು ಡೊಡ್ಮನೆಯಿಂದ ಹೊರಗೆ ಕಳಿಸಲಾಗಿದೆ. ಈ ಶೋನಲ್ಲಿ ಮುಂದುವರಿಯಬೇಕು ಎಂದು ಅವರು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥ ಆಗಿವೆ. ಕಣ್ಣೀರು ಹಾಕುತ್ತಲೇ ಅವರು ಬಿಗ್​ ಬಾಸ್​ನಿಂದ ಹೊರಬಂದಿದ್ದಾರೆ.

ಬಿಗ್​ ಬಾಸ್​ನಲ್ಲಿ ತಾವು ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಬಗ್ಗೆ ಊರ್ಫಿ ಜಾವೇದ್​ ಅವರಿಗೆ ಬಹಳ ಭರವಸೆ ಇತ್ತು. ಆದರೆ ಕೊನೇ ಕ್ಷಣದಲ್ಲಿ ಅವರ ನಂಬಿಕೆ ಹುಸಿ ಆಯಿತು. ಸ್ನೇಹಿತ ಜೀಶಾನ್​ ಖಾನ್​ ಜೊತೆ ಅವರ ಆಪ್ತವಾಗಿದ್ದರು. ಆದರೆ ಜೀಶಾನ್​ ಅವರಿಂದಲೇ ಊರ್ಫಿಗೆ ಬೆಂಬಲ ಸಿಗಲಿಲ್ಲ. ಹಾಗಾಗಿ ಅವರು ಎಲಿಮಿಮೇಟ್​ ಆಗಬೇಕಾಯಿತು. ಬಿಗ್​ ಬಾಸ್​ನಿಂದ ಹೊರ ಬರುವುದಕ್ಕೂ ಮುನ್ನ ಅವರು ಜೀಶಾನ್​ಗೆ ಹಿಗ್ಗಾಮುಗ್ಗ ಬೈಯ್ದು ಕೋಪ ತೀರಿಸಿಕೊಂಡರು.

‘ಈ ಎಲಿಮಿನೇಷನ್​ನಿಂದ ನನಗೆ ಶಾಕ್​ ಆಗಿದೆ. ನನ್ನನ್ನು ಯಾಕೆ ಎಲಿಮಿನೇಟ್​ ಮಾಡಲಾಗಿದೆ ಎಂಬುದೇ ತಿಳಿಯುತ್ತಿಲ್ಲ. ಎಲ್ಲರೂ ನನಗೆ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಈಗಲೂ ನಾನು ಅಳುತ್ತಿದ್ದೇನೆ. ಎಲಿಮಿನೇಟ್​ ಆದಾಗಿನಿಂದ ಇಲ್ಲಿಯವರೆಗೆ ಅಳು ನಿಲ್ಲಿಸಿಲ್ಲ’ ಎಂದು ಮಾಧ್ಯಮಗಳಿಗೆ ಊರ್ಫಿ ಜಾವೇದ್​ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್ ಬಾಸ್​ನಿಂದ ಹೊರಬಂದು ಅವರು ಎಲ್ಲರ ಮೇಲೂ ಸಿಟ್ಟು ಪ್ರದರ್ಶಿಸುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗ ಅವರು ಕಸದ ಚೀಲವನ್ನೇ ಬಳಸಿಕೊಂಡು ಹೊಸ ಕಾಸ್ಟ್ಯೂಮ್​ ತಯಾರಿಸಿ, ಅದರಿಂದ ಮಾನ ಮುಚ್ಚಿಕೊಂಡಿದ್ದರು. ಆ ಬಟ್ಟೆ ತುಂಬ ಗ್ಲಾಮರಸ್​ ಆಗಿಯೂ ಕಾಣಿಸಿತ್ತು. ಊರ್ಫಿಯ ಪ್ರತಿಭೆ ಕಂಡು ಇನ್ನುಳಿದ ಸದಸ್ಯರೆಲ್ಲ ಮೆಚ್ಚುಗೆ ಸೂಚಿಸಿದ್ದರು. ಬಿಗ್​ ಬಾಸ್​ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಊರ್ಫಿ ಇಷ್ಟೆಲ್ಲ ಕ್ರಿಯೇಟಿವಿಟಿ ತೋರಿಸಿದ್ದರು. ಮುಂದೆ ಅವರು ಏನೆಲ್ಲ ಮಾಡಬಹುದು ಎಂಬ ಕೌತುಕ ವೀಕ್ಷಕರಲ್ಲಿ ಮೂಡಿತ್ತು. ಆದರೆ ಬಹಳ ಬೇಗ ಊರ್ಫಿಗೆ ಅದೃಷ್ಟ ಕೈ ಕೊಟ್ಟಿದ್ದರಿಂದ ಅವರು ಎಲಿಮಿನೇಟ್​ ಆಗಬೇಕಾಯಿತು. ನೇಹಾ ಭಾಸಿನ್​, ರಿಧಿಮಾ ಪಂಡಿತ್​, ನಿಶಾಂತ್​ ಭಟ್​, ದಿವ್ಯಾ ಅಗರ್​ವಾಲ್​, ಶಮಿತಾ ಶೆಟ್ಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ನಡುವೆ ಪೈಪೋಟಿ ಮುಂದುವರಿದಿದೆ.

ಇದನ್ನೂ ಓದಿ:

ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್​ ಕಿಸ್​ ಮಾಡಿದ ಗಾಯಕಿ; ಎತ್ತ ಸಾಗುತ್ತಿದೆ ಬಿಗ್​ ಬಾಸ್​?

ಬಿಗ್​ ಬಾಸ್​ ನಿರೂಪಣೆ ಬಗ್ಗೆ ಸುದೀಪ್​ ಫ್ಯಾನ್ಸ್​ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್​ ಸ್ಟಾಪ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ