ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್​ ಬಾಸ್​ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?

ಬಿಗ್​ ಬಾಸ್​ ಓಟಿಟಿ ಕೇವಲ ಆರು ವಾರಗಳ ಕಾಲ ನಡೆಯಲಿದೆ. ಹಾಗಾಗಿ ಇಲ್ಲಿ ಸ್ಪರ್ಧಿಗಳಿಗೆ ಗುರುತಿಸಿಕೊಳ್ಳಲು ಹೆಚ್ಚು ಸಮಯಾವಕಾಶ ಇಲ್ಲ. ಇರುವ ಸಮಯದಲ್ಲೇ ಏನಾದರೂ ಮಾಡಿ ಎಲಿಮಿನೇಷನ್​ನಿಂದ ಸೇವ್​ ಆಗಬೇಕಿದೆ.

ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್​ ಬಾಸ್​ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?
ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್​ ಬಾಸ್​ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?
Follow us
TV9 Web
| Updated By: ಮದನ್​ ಕುಮಾರ್​

Updated on:Aug 15, 2021 | 3:30 PM

ಇಷ್ಟು ದಿನ ವೀಕ್ಷಕರು ನೋಡಿದ ಬಿಗ್​ ಬಾಸ್​ ಒಂದು ರೀತಿ ಇತ್ತು. ಆದರೆ ಈಗ ನೋಡುತ್ತಿರುವ ಬಿಗ್​ ಬಾಸ್​ ಬೇರೆ ರೀತಿ ಇದೆ. ಅಂದರೆ, ವೂಟ್​ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಓಟಿಟಿ’ (Bigg Boss OTT) ಕಾರ್ಯಕ್ರಮ ಸಿಕ್ಕಾಪಟ್ಟೆ ಭಿನ್ನವಾಗಿ ಮೂಡಿಬರುತ್ತಿದೆ. ಓಟಿಟಿ ಎಂದರೆ ಅಲ್ಲಿ ಸದ್ಯಕ್ಕೆ ಸೆನ್ಸಾರ್​ನ ಹಂಗಿಲ್ಲ. ಹಾಗಾಗಿ ಬಿಗ್​ ಬಾಸ್​ ಸ್ಪರ್ಧಿಗಳು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಹಾಟ್​ ಆಗಿ ಈ ಶೋ ಮೂಡಿಬರುತ್ತಿದೆ. ಅನೇಕ ವಿವಾದಾತ್ಮಕ ವ್ಯಕ್ತಿಗಳೇ ದೊಡ್ಮನೆಗೆ ಕಾಲಿಟ್ಟಿರುವುದರಿಂದ ಹಲವು ಟ್ವಿಸ್ಟ್​ಗಳು ಸಿಗುತ್ತಿವೆ. ಇತ್ತೀಚೆಗೆ ನಟಿ ಊರ್ಫಿ ಜಾವೇದ್​ (Urfi Javed) ತಮ್ಮ ವಿಚಿತ್ರ ಕಾಸ್ಟ್ಯೂಮ್​ ಮೂಲಕ ಗಮನ ಸೆಳೆದರು.

ತಮ್ಮ ಬಟ್ಟೆಗಳನ್ನು ನಾವೇ ಡಿಸೈನ್​ ಮಾಡಿಕೊಳ್ಳುವ ಮೂಲಕ ಊರ್ಫಿ ಜಾವೇದ್​ ಅವರು ಫೇಮಸ್​ ಆಗಿದ್ದರು. ಬಿಗ್​ ಬಾಸ್​ ಮನೆಯ ಒಳಗೂ ಅವರು ಅದನ್ನು ಮುಂದುವರಿಸಿದ್ದಾರೆ. ಆದರೆ ದೊಡ್ಮನೆಯೊಳಗೆ ತಮ್ಮ ಇಷ್ಟದ ಪ್ರಕಾರ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಳ್ಳಲು ಅವರಿಗೆ ಎಲ್ಲ ಪರಿಕರಗಳು ಸಿಕ್ಕಿಲ್ಲ. ಹಾಗಾಗಿ ಇರುವ ಕೆಲವು ವಸ್ತುಗಳನ್ನೇ ಬಳಸಿಕೊಂಡು ಅವರು ತಮ್ಮ ಕ್ರಿಯೇಟಿವಿಟಿ ತೋರಿಸುತ್ತಿದ್ದಾರೆ. ಅಚ್ಚರಿ ಎಂದರೆ ಅವರು ಕಸದ ಚೀಲವನ್ನು ಬಳಸಿಕೊಂಡು ತಮ್ಮ ಹೊಸ ಕಾಸ್ಟ್ಯೂಮ್ ವಿನ್ಯಾಸ ಮಾಡಿದ್ದಾರೆ.

ಕಸವನ್ನು ಹಾಕಲು ಕಪ್ಪು ಬಣ್ಣ ಪ್ಲಾಸಿಕ್​ ಕವರ್​ ಬಳಸಲಾಗುತ್ತದೆ. ಅದನ್ನೇ ಇಟ್ಟುಕೊಂಡು ಹೊಸ ಬಗೆಯಲ್ಲಿ ಊರ್ಫಿ ಜಾವೇದ್​ ಅವರು ಕಾಸ್ಟ್ಯೂಮ್​ ವಿನ್ಯಾಸ ಮಾಡಿದ್ದೂ ಅಲ್ಲದೆ, ಅದನ್ನು ಧರಿಸಿಕೊಂಡು ವಿಂಚಿದ್ದಾರೆ. ಆ ಬಟ್ಟೆ ತುಂಬ ಗ್ಲಾಮರಸ್​ ಆಗಿಯೂ ಕಾಣಿಸಿತು ಎಂಬುದು ವಿಶೇಷ. ಊರ್ಫಿಯ ಪ್ರತಿಭೆ ಕಂಡು ಇನ್ನುಳಿದ ಸದಸ್ಯರೆಲ್ಲ ಮೆಚ್ಚುಗೆ ಸೂಚಿಸಿದ್ದಾರೆ. ಬಿಗ್​ ಬಾಸ್​ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಊರ್ಫಿ ಇಷ್ಟೆಲ್ಲ ಕ್ರಿಯೇಟಿವಿಟಿ ತೋರಿಸುತ್ತಿದ್ದಾರೆ. ಮುಂದೆ ಅವರು ಏನೆಲ್ಲ ಮಾಡಬಹುದು ಎಂಬ ಕೌತುಕ ಮೂಡಿದೆ.

View this post on Instagram

A post shared by Voot (@voot)

ಬಿಗ್​ ಬಾಸ್​ ಓಟಿಟಿ ಕೇವಲ ಆರು ವಾರಗಳ ಕಾಲ ನಡೆಯಲಿದೆ. ಹಾಗಾಗಿ ಇಲ್ಲಿ ಸ್ಪರ್ಧಿಗಳಿಗೆ ಗುರುತಿಸಿಕೊಳ್ಳಲು ಹೆಚ್ಚು ಸಮಯಾವಕಾಶ ಇಲ್ಲ. ಇರುವ ಸಮಯದಲ್ಲೇ ಏನಾದರೂ ಮಾಡಿ ಎಲಿಮಿನೇಷನ್​ನಿಂದ ಸೇವ್​ ಆಗಬೇಕಿದೆ. ಇತ್ತೀಚೆಗೆ ಗಾಯಕಿ ನೇಹಾ ಭಾಸಿನ್​ ಅವರು ನಟಿ ರಿಧಿಮಾ ಪಂಡಿತ್​ ತುಟಿಗೆ ಮುತ್ತಿಟ್ಟು ಹೈಪ್ ಸೃಷ್ಟಿಸಿದ್ದರು. ಈಗ ಕಸದ ಬ್ಯಾಗ್​ನಿಂದ ಊರ್ಫಿ ಜಾವೇದ್​ ಕಾಸ್ಟ್ಯೂಮ್​ ಮಾಡಿ ಹಾಕಿಕೊಂಡಿರುವುದು ಚರ್ಚೆ ಆಗುತ್ತಿದೆ.

ಇದನ್ನೂ ಓದಿ:

‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ

ನೈತಿಕತೆ ಬಿಟ್ಟು ಮಹಿಳಾ ಸ್ಪರ್ಧಿಗೆ ಲಿಪ್​ ಕಿಸ್​ ಮಾಡಿದ ಗಾಯಕಿ; ಎತ್ತ ಸಾಗುತ್ತಿದೆ ಬಿಗ್​ ಬಾಸ್​?

Published On - 3:29 pm, Sun, 15 August 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್