ಕೆಟ್ಟ ಭಾಷೆಯಲ್ಲಿ ಬಿಗ್ ಬಾಸ್ಗೆ ಬೈಯ್ಯುವ ಅರವಿಂದ್-ದಿವ್ಯಾ ಫ್ಯಾನ್ಸ್ಗೆ ಪರಮೇಶ್ವರ ಗುಂಡ್ಕಲ್ ನೇರ ಪ್ರಶ್ನೆ
ಬಿಗ್ ಬಾಸ್ ಕಾರ್ಯಕ್ರಮ ಮುಗಿದರೂ ಅದರ ಕುರಿತಾದ ಮಾತುಕತೆ ನಿಂತಿಲ್ಲ. ಮಂಜು ಪಾವಗಡ ವಿನ್ನರ್ ಆಗಿದ್ದರ ಬಗ್ಗೆ ಪರ-ವಿರೋಧದ ಚರ್ಚೆ ಇನ್ನೂ ನಡೆಯುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಸೋತಿರುವುದು ಅವರ ಫ್ಯಾನ್ಸ್ಗೆ ಅಸಮಾಧಾನ ತಂದಿದೆ. ಹಾಗಾಗಿ ಅವರು ಬಿಗ್ ಬಾಸ್ ಆಯೋಜಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ನೇರವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.
‘ಟ್ರೋಲ್ ಮಾಡುವವರ ಪ್ರಶ್ನೆಗೆ ಉತ್ತರ ಕೊಟ್ಟು ಮುಗಿಸೋಕೆ ಆಗಲ್ಲ. ಯಾರೇ ಗೆದ್ದರೂ ಅವರು ಪ್ರಶ್ನೆ ಮಾಡುತ್ತಾರೆ. ಅರವಿಂದ್ ಅವರು ಬಿಗ್ ಬಾಸ್ಗೆ ಬಂದಿದ್ದರಿಂದಲೇ ಅವರ ಜನಪ್ರಿಯತೆ ಹೆಚ್ಚಿತು. ಅವರು ಮಾಡಿದ ಸಾಧನೆಗಳ ಬಗ್ಗೆ ಜನರಿಗೆ ತಿಳಿಯಿತು. ಅರವಿಂದ್ ಮತ್ತು ದಿವ್ಯಾ ಉರುಡುಗ ಫ್ಯಾನ್ಸ್ಗೆ ನನ್ನದೊಂದು ಪ್ರಶ್ನೆ ಇದೆ. ಅವರಿಬ್ಬರು ಭೇಟಿ ಆಗಿದ್ದು ನನ್ನ ಶೋನಲ್ಲಿ. ಇಬ್ಬರನ್ನೂ ಬಿಗ್ ಬಾಸ್ಗೆ ಕರೆದುಕೊಂಡು ಬಂದಿದ್ದು ನಾವು. ಆದರೆ ಇಂದು ನಮ್ಮ ಬಗ್ಗೆ ಕೆಟ್ಟ ಕಮೆಂಟ್ ಹಾಕುವವರಿಂದ ಅರವಿಂದ್ಗೆ ಏನೂ ಪ್ರಯೋಜನ ಆಗಿರಲಿಲ್ಲ. ವೇದಿಕೆ ಒದಗಿಸಿಕೊಟ್ಟವರಿಗೆ, ಒಳ್ಳೆಯ ಗೌರವಧನ ಕೊಟ್ಟವರಿಗೆ ಅವರ ಫ್ಯಾನ್ಸ್ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಅದು ಅವರ ಮನಸ್ಸಿಗೆ ಬಿಟ್ಟಿದ್ದು’ ಎಂದು ಪರಮೇಶ್ವರ ಗುಂಡ್ಕಲ್ ಹೇಳಿದ್ದಾರೆ.
ಇದನ್ನೂ ಓದಿ:
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್
‘ಅರವಿಂದ್ ಜತೆ ಮದುವೆ ಆಗ್ತೀರಾ? ಕನ್ನಡದಲ್ಲೇ ಉತ್ತರ ಕೊಡಿ’; ದಿವ್ಯಾಗೆ ಪಟ್ಟು ಹಿಡಿದು ಪ್ರಶ್ನೆ ಕೇಳಿದ ಮಂಜು
Published on: Aug 15, 2021 09:57 AM
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್

