AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ನಲ್ಲಿರುವ ಶಮಿತಾ ಶೆಟ್ಟಿಗೆ ಸ್ಪೆಷಲ್​ ಮೆಸೇಜ್ ಕಳಿಸಿದ ಶಿಲ್ಪಾ ಶೆಟ್ಟಿ​; ಈ ವಾರ ಇಬ್ಬರು ಔಟ್​

ವಾರಾಂತ್ಯದ ಈ ಎಪಿಸೋಡ್​ನಲ್ಲಿ ಕರಣ್​ ಜೋಹರ್​ ಸಿಕ್ಕಾಪಟ್ಟೆ ಖಡಕ್​ ಆಗಿಯೇ ಮಾತನಾಡಿದ್ದಾರೆ. ಕೆಲವು ಸ್ಪರ್ಧಿಗಳಿಗೆ ಅವರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಬಿಗ್​ ಬಾಸ್​ನಲ್ಲಿರುವ ಶಮಿತಾ ಶೆಟ್ಟಿಗೆ ಸ್ಪೆಷಲ್​ ಮೆಸೇಜ್ ಕಳಿಸಿದ ಶಿಲ್ಪಾ ಶೆಟ್ಟಿ​; ಈ ವಾರ ಇಬ್ಬರು ಔಟ್​
ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ
TV9 Web
| Edited By: |

Updated on: Aug 22, 2021 | 11:48 PM

Share

ನಟಿ ಶಮಿತಾ ಶೆಟ್ಟಿ ಅವರು ‘ಬಿಗ್​ ಬಾಸ್​ ಓಟಿಟಿ’ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. ಪ್ರತಿ ದಿನದ ಎಪಿಸೋಡ್​ನಲ್ಲಿಯೂ ಅವರು ಹೈಲೈಟ್​ ಆಗುತ್ತಿದ್ದಾರೆ. ಒಂದಿಲ್ಲೊಂದು ವಿಚಾರಕ್ಕೆ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ನಡುವೆ ಅವರಿಗೆ ಶಿಲ್ಪಾ ಶೆಟ್ಟಿ ಕಡೆಯಿಂದ ಒಂದು ವಿಶೇಷವಾದ ಸಂದೇಶ ರವಾನೆ ಆಗಿದೆ. ಬಿಗ್​ ಬಾಸ್​ ಓಟಿಟಿಯ 2ನೇ ವಾರದ ವೀಕೆಂಡ್​ ಎಪಿಸೋಡ್​ಗಳು ಮುಗಿದಿವೆ. ಈ ವಾರ ನಿರೂಪಕ ಕರಣ್​ ಜೋಹರ್​ ಅವರು ಇಬ್ಬರನ್ನು ಎಲಿಮಿನೇಟ್​ ಮಾಡಿದ್ದಾರೆ. ಕರಣ್​ ನಾಥ್​ ಮತ್ತು ರಿಧಿಮಾ ಪಂಡಿತ್​ ಔಟ್​ ಆಗಿದ್ದಾರೆ.

ಈ ವಾರ ಬಿಗ್​ ಬಾಸ್​ ಮನೆಯ ಎಲ್ಲ ಸದಸ್ಯರೂ ನಾಮಿನೇಟ್​ ಆಗಿದ್ದರು. ಆದರೆ ಅವರ ಪೈಕಿ ಅತಿ ಕಡಿಮೆ ವೋಟ್​ ಪಡೆದ ರಿಧಿಮಾ ಪಂಡಿತ್​ ಮತ್ತು ಕರಣ್​ ನಾಥ್​ ಅವರ ಬಿಗ್​ ಬಾಸ್​ ಜರ್ನಿ ಅಂತ್ಯವಾಗಿದೆ. ವಾರಾಂತ್ಯದ ಈ ಎಪಿಸೋಡ್​ನಲ್ಲಿ ಕರಣ್​ ಜೋಹರ್​ ಸಿಕ್ಕಾಪಟ್ಟೆ ಖಡಕ್​ ಆಗಿಯೇ ಮಾತನಾಡಿದ್ದಾರೆ. ಕೆಲವು ಸ್ಪರ್ಧಿಗಳಿಗೆ ಅವರು ಕ್ಲಾಸ್​ ತೆಗೆದುಕೊಂಡಿದ್ದಾರೆ. ಇದು ಕೇವಲ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಶೋ ಆದ್ದರಿಂದ ಅವರು ಕೊಂಚ ಖಾರದ ಮಾತುಗಳನ್ನೇ ಆಡಿದ್ದಾರೆ.

ಇನ್ನು, ಭಾನುವಾರ (ಆ.22) ದೇಶದೆಲ್ಲೆಡೆ ರಕ್ಷಾಬಂಧನ ಹಬ್ಬ ಆಚರಿಸಲಾಯಿತು. ಹಾಗಾಗಿ ಬಿಗ್​ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳಿಗೂ ಅವರವರ ಕುಟುಂಬದವರಿಂದ ರಾಖಿ ಹಬ್ಬದ ಶುಭಾಶಯ ತಿಳಿಸುವಂತಹ ಮೆಸೇಜ್​ಗಳನ್ನು ಕಳಿಸಲಾಗಿದೆ. ಶಮಿತಾ ಶೆಟ್ಟಿಗೆ ಅವರ ಅಕ್ಕ ಶಿಲ್ಪಾ ಶೆಟ್ಟಿ ಕಡೆಯಿಂದ ಸ್ಪೆಷಲ್​ ಮೆಸೇಜ್​ ಬಂದಿದೆ. ‘ನಮ್ಮಿಬ್ಬರಿಗೆ ಸಹೋದರರು ಇಲ್ಲದಿದ್ದರೂ ನಾವು ಪರಸ್ಪರ ಬೆಂಬಲವಾಗಿ ನಿಂತುಕೊಂಡಿದ್ದೇವೆ. ಬಿಗ್​ ಬಾಸ್​ ಮನೆಯಲ್ಲಿ ನೀನು ಗಟ್ಟಿಯಾಗಿ ಇರಬೇಕು’ ಎಂದು ತಂಗಿಗೆ ಶಿಲ್ಪಾ ಶೆಟ್ಟಿ ಧೈರ್ಯ ತುಂಬಿದ್ದಾರೆ.

ನೋವು ತೋಡಿಕೊಂಡಿದ್ದ ಶಮಿತಾ:

ತಾವು ಇಂದಿಗೂ ಶಿಲ್ಪಾ ಶೆಟ್ಟಿಯ ನೆರಳಿನಲ್ಲಿ ಬದುಕುತ್ತಿರುವುದಕ್ಕೆ ಶಮಿತಾ ಶೆಟ್ಟಿಗೆ ಸಖತ್​ ನೋವಿದೆ. ಮೊದಲ ವೀಕೆಂಡ್​ ಎಪಿಸೋಡ್​ನಲ್ಲಿ ಅವರು ಆ ನೋವನ್ನು ತೋಡಿಕೊಂಡಿದ್ದರು. ಶಿಲ್ಪಾ ಶೆಟ್ಟಿಯ ತಂಗಿ ಎಂದೇ ಜನರು ಅವರನ್ನು ಗುರುತಿಸುತ್ತಾರೆ. ಅದರಿಂದ ಹೊರಬರಬೇಕು ಎಂದು ಶಮಿತಾ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಈಗ ತಮ್ಮತನವನ್ನು ತೋರಿಸಲು ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದಾಗಿ ಅವರು ಹೇಳಿದ್ದಾರೆ. ಶಿಲ್ಪಾ ಶೆಟ್ಟಿ ನೆರಳಿನಲ್ಲಿ ತಾವು ಇರುವುದು ಕಷ್ಟಕರವೇ ಹೌದಾದರೂ ಅದು ತಮ್ಮನ್ನು ರಕ್ಷಿಸುತ್ತಿದೆ ಎಂಬ ಸತ್ಯವನ್ನೂ ಶಮಿತಾ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ತಾವು ಲಕ್ಕಿ ಎಂದೂ ಅವರು ಹೇಳಿದ್ದಾರೆ. ಶಮಿತಾ ಚೆನ್ನಾಗಿ ಆಟ ಆಡುತ್ತಿರುವುದಕ್ಕೆ ಕರಣ್​ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:

ಅಕ್ಷರಾ- ಜೀಶಾನ್ ನಡುವೆ ಕಿತ್ತಾಟ; ಪಕ್ಕದಲ್ಲೇ ಇದ್ದರೂ ತಲೆಕೆಡಿಸಿಕೊಳ್ಳದೇ ರೊಟ್ಟಿ ತಟ್ಟಿದ ಶಮಿತಾ ಶೆಟ್ಟಿ

‘ಗಂಡ ಸತ್ತ ನಂತರದಲ್ಲಿ ಮಹಿಳೆ ಹೋರಾಡಲೇಬೇಕು’; ಆವೇಶದ ಮಾತುಗಳನ್ನಾಡಿದ ಶಿಲ್ಪಾ ಶೆಟ್ಟಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್