ಅಕ್ಷರಾ- ಜೀಶಾನ್ ನಡುವೆ ಕಿತ್ತಾಟ; ಪಕ್ಕದಲ್ಲೇ ಇದ್ದರೂ ತಲೆಕೆಡಿಸಿಕೊಳ್ಳದೇ ರೊಟ್ಟಿ ತಟ್ಟಿದ ಶಮಿತಾ ಶೆಟ್ಟಿ

Big Boss OTT: ಬಿಗ್​ಬಾಸ್ ಒಟಿಟಿಯಲ್ಲಿ ಸ್ಪರ್ಧೆ ಕಾವೇರುತ್ತಿದೆ. ಅಕ್ಷರಾ ಸಿಂಗ್ ಹಾಗೂ ಜೀಶಾನ್ ಖಾನ್ ಪರಸ್ಪರ ಕಿತ್ತಾಡಿಕೊಂಡಿದ್ದು, ಈ ವೇಳೆ ಶಮಿತಾ ಶೆಟ್ಟಿಯವರ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಅಕ್ಷರಾ- ಜೀಶಾನ್ ನಡುವೆ ಕಿತ್ತಾಟ; ಪಕ್ಕದಲ್ಲೇ ಇದ್ದರೂ ತಲೆಕೆಡಿಸಿಕೊಳ್ಳದೇ ರೊಟ್ಟಿ ತಟ್ಟಿದ ಶಮಿತಾ ಶೆಟ್ಟಿ
ಶಮಿತಾ ಶೆಟ್ಟಿ
Follow us
TV9 Web
| Updated By: shivaprasad.hs

Updated on: Aug 21, 2021 | 5:27 PM

ಬಿಗ್​ಬಾಸ್ ಮನೆಯಲ್ಲಿ ಗಲಾಟೆಗಳು ಹೊಸದಲ್ಲ. ಅಂತಹ ಗಲಾಟೆಗಳು ನಡೆಯುವಾಗ ಇತರ ಸ್ಪರ್ಧಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೂ ಕೂಡಾ ವೀಕ್ಷಕರಿಗೆ ಕುತೂಹಲದ ವಿಷಯ. ಬಿಗ್​ಬಾಸ್ ಒಟಿಟಿಯಲ್ಲೂ ಇಂಥದ್ದೇ ಒಂದು ಗಲಾಟೆ ನಡೆದಾಗ ವೀಕ್ಷಕರಿಗೆ ಅಚ್ಚರಿಯ ಸಂಗತಿಯೊಂದು ಎದುರಾಗಿದೆ. ಸ್ಪರ್ಧಿಗಳಾದ ಅಕ್ಷರಾ ಸಿಂಗ್ ಮತ್ತು ಜೀಶಾನ್ ಖಾನ್ ನಡುವೆ ಯಾವುದೋ ವಿಷಯಕ್ಕೆ ಘನಘೋರ ವಾಗ್ಯುದ್ಧ ಏರ್ಪಟ್ಟಿದೆ. ಇವರೀರ್ವರ ಕೂಗಾಟಕ್ಕೆ ಮನೆಯ ಇತರ ಎಲ್ಲಾ ಸ್ಪರ್ಧಿಗಳು ಧಾವಿಸಿ, ಬಿಡಿಸಲು ಪ್ರಯತ್ನಿಸಿದ್ದಾರೆ. ಅದಾಗ್ಯೂ ಇಬ್ಬರೂ ಕೂಡಾ ಪರಸ್ಪರ ಕೂಗಾಡುವುದನ್ನು ನಿಲ್ಲಿಸಿಲ್ಲ. ಆದರೆ ಈ ಸಂದರ್ಭದಲ್ಲಿ ಶಮಿತಾ ಶೆಟ್ಟಿಯ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ವೂಟ್ ಬಿಡುಗಡೆ ಮಾಡಿರುವ ನೂತನ ಪ್ರೋಮೋದಲ್ಲಿ ತೋರಿಸಿರುವಂತೆ, ಅಕ್ಷರಾ ಹಾಗೂ ಜೀಶಾನ್ ಗಲಾಟೆ ಮಾಡುವಾಗ ದಿವ್ಯಾ ಅಗರವಾಲ್ ಮಧ್ಯ ಪ್ರವೇಶಿಸಿ ಜೀಶಾನ್​ರನ್ನು ಬೇರೆ ಕಡೆಗೆ ಕರೆದೊಯ್ದಿದ್ದಾರೆ. ಅಕ್ಷರಾ ಜೀಶಾನ್​ಗೆ ವಾಚಾಮಗೋಚರವಾಗಿ ಬೈಯುತ್ತಾ, ‘ಹುಡುಗಿಯರೊಂದಿಗೆ ಹೇಗೆ ಮಾತನಾಡಬೇಕು ಎಂಬ ಅರಿವಿಲ್ಲ ನಿಮಗೆ’ ಎಂದು ಜೀಶಾನ್​ ವಿರುದ್ಧ ಕೂಗಾಡುತ್ತಿದ್ದಾರೆ. ಈ ಎಲ್ಲಾ ಘಟನೆಗಳು ನಡೆಯುವಾಗ ಶಮಿತಾ ಅಲ್ಲೇ ಪಕ್ಕದ ಅಡುಗೆ ಮನೆಯಲ್ಲಿ ನೋಡುತ್ತಾ ಇದ್ದರು. ಆದರೆ ಅವರು ಗಲಾಟೆಯನ್ನು ಬಿಡಿಸುವ ಗೊಡವೆಗೆ ಹೋಗಿಲ್ಲ. ತಮ್ಮ ಪಾಡಿಗೆ ತಾವು ರೊಟ್ಟಿ ತಟ್ಟುತ್ತಾ, ಸುಮ್ಮನುಳಿದಿದ್ದಾರೆ. ಇದು ಅಭಿಮಾನಿಗಳ ಅಚ್ಚರಿಗೆ ಕಾರಣವಾದರೂ ಕೂಡಾ, ಶಮಿತಾ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವೂಟ್ ಹಂಚಿಕೊಂಡಿರುವ ಪ್ರೊಮೊ:

View this post on Instagram

A post shared by Voot (@voot)

ಶಮಿತಾ ಸುಮ್ಮನುಳಿದಿದ್ದು ಏಕೆ?

ಅಕ್ಷರಾ- ಜೀಶಾನ್ ನಡುವೆ ಭೀಕರ ವಾಗ್ಯುದ್ಧ ನಡೆಯುವಾಗ ಶಮಿತಾ ಸುಮ್ಮನಿದ್ದುದಾರೂ ಏಕೆ ಎಂಬುದು ಕುತೂಹಲಕರ ಪ್ರಶ್ನೆ. ಆದರೆ ವಾಸ್ತವವಾಗಿ ಈ ಮೊದಲೇ ಶಮಿತಾ ಹಾಗೂ ಅಕ್ಷರಾ ನಡುವೆ ಹಲವು ವಿಷಯಗಳಿಗೆ ಗಲಾಟೆಗಳು ನಡೆದಿವೆ. ತಾವು ಬಳಸುವ ಪದಗಳಿಂದ ಅಕ್ಷರಾ ಈಗಾಗಲೇ ಮನೆಯ ಒಳಗೆ ಹಾಗೂ ಹೊರಗೆ ವಿರೋಧ ಕಟ್ಟಿಕೊಂಡಿದ್ದಾರೆ. ಈ ಹಿಂದೆ ಶಮಿತಾ ಶೆಟ್ಟಿಯ ವಯಸ್ಸಿನ ವಿಷಯವನ್ನು ಎಳೆದು ತಂದು ಅಕ್ಷರಾ ಮೂದಲಿಸಿದ್ದರು. ಹಾಗೆಯೇ ಶಮಿತಾರನ್ನು ಅಮ್ಮನಷ್ಟು ವಯಸ್ಸಾದವಳು ಎಂದು ಹೇಳಿ ವಿವಾದಕ್ಕೀಡಾಗಿದ್ದರು. ಶಮಿತಾ ಕೆಲವೊಮ್ಮೆ ಇಂಗ್ಲೀಷ್ ಮಾತನಾಡುತ್ತಾರೆಂಬುದೂ ಕೂಡಾ ಅಕ್ಷರಾಗೆ ಕೋಪ ತರಿಸಿತ್ತು. ಈ ವಿಚಾರಗಳಿಗೆ ಅವರು ಶಮಿತಾರೊಂದಿಗೆ ಗಲಾಟೆ ಮಾಡಿದ್ದರು.

ಈ ಎಲ್ಲಾ ಘಟನೆಗಳ ನಂತರ ಶಮಿತಾ ಶೆಟ್ಟಿಗೆ ಬಿಗ್​ಬಾಸ್​ನ ಹಲವಾರು ಮಾಜಿ ಸ್ಪರ್ಧಿಗಳು ಬೆಂಬಲ ಸೂಚಿಸಿದ್ದಾರೆ. ತಾವೆಲ್ಲಾದರೂ ಆಕೆಯ ಸ್ಥಾನದಲ್ಲಿರುತ್ತಿದ್ದರೆ ಕತೆ ಬೇರೆಯೇ ಇರುತ್ತಿತ್ತು ಎಂದು ಕಶ್ಮೇರ ಷಾ ಇತ್ತೀಚೆಗೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

‘ಟಿಣಿಂಗಾ ಮಿಣಿಂಗಾ ಟಿಶ್ಯಾ..’ ಹಾಡು ನೋಡಿ ಮನಸಾರೆ ಎಂಜಾಯ್​ ಮಾಡಿದ ಫೈಟ್​ ಮಾಸ್ಟರ್​ ರಾಮ್​-ಲಕ್ಷ್ಮಣ್​

ಸಿಂಗಲ್​ ಶಾಟ್​ನಲ್ಲಿ ರೆಡಿ ಆದ 2 ಗಂಟೆ ಸಿನಿಮಾ; ‘ಬಿಂದಾಸ್​’ ನಟಿಯ ಪ್ರಯತ್ನಕ್ಕೆ ಚೀನಾ, ಕೊರಿಯಾದಲ್ಲೂ ಬೇಡಿಕೆ

(Shamitha Shetty busy in making rotis while Akshara Singh and Zeeshan Khan fights each other in Big Boss OTT)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ