AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಲ್​ ಶಾಟ್​ನಲ್ಲಿ ರೆಡಿ ಆದ 2 ಗಂಟೆ ಸಿನಿಮಾ; ‘ಬಿಂದಾಸ್​’ ನಟಿಯ ಪ್ರಯತ್ನಕ್ಕೆ ಚೀನಾ, ಕೊರಿಯಾದಲ್ಲೂ ಬೇಡಿಕೆ

ಕನ್ನಡದ ‘ಬಿಂದಾಸ್’​ ಸಿನಿಮಾದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಟಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ‘105’ ಹೆಸರಿನ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ಸಿಂಗಲ್​ ಶಾಟ್​ನಲ್ಲಿ ರೆಡಿ ಆದ 2 ಗಂಟೆ ಸಿನಿಮಾ; ‘ಬಿಂದಾಸ್​’ ನಟಿಯ ಪ್ರಯತ್ನಕ್ಕೆ ಚೀನಾ, ಕೊರಿಯಾದಲ್ಲೂ ಬೇಡಿಕೆ
ಸಿಂಗಲ್​ ಶಾಟ್​ನಲ್ಲಿ ರೆಡಿ ಆದ 2 ಗಂಟೆ ಸಿನಿಮಾ; ‘ಬಿಂದಾಸ್​’ ನಟಿಯ ಪ್ರಯತ್ನಕ್ಕೆ ಚೀನಾ, ಕೊರಿಯಾದಲ್ಲೂ ಬೇಡಿಕೆ
TV9 Web
| Edited By: |

Updated on: Aug 21, 2021 | 4:02 PM

Share

ತಂತ್ರಜ್ಞಾನ ಮುಂದುವರಿದಂತೆ ಸಿನಿಮಾ ಮೇಕಿಂಗ್​ನಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ನಿರ್ದೇಶಕರು ಹಾಗೂ ನಿರ್ಮಾಪಕರು ಹೊಸಹೊಸ ಪ್ರಯೋಗಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಈಗ ತೆಲುಗಿನಲ್ಲಿ ಹೊಸ ಸಿನಿಮಾ ಒಂದು ಸಿದ್ಧಗೊಳ್ಳುತ್ತಿದೆ. ಈ ಚಿತ್ರದ ಅವಧಿ 105 ನಿಮಿಷ ಅಂದರೆ ಸುಮಾರು ಎರಡು ಗಂಟೆ ಇರಲಿದ್ದು, ಒಂದೇ ಟೇಕ್​ನಲ್ಲಿ ಚಿತ್ರೀಕರಿಸಲಾಗಿದೆ ಅನ್ನೋದು ವಿಶೇಷ.

ಕನ್ನಡದ ‘ಬಿಂದಾಸ್’​ ಸಿನಿಮಾದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಟಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ. ‘105’ ಹೆಸರಿನ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇಡೀ ಚಿತ್ರದಲ್ಲಿ ಬರುವುದು ಒಂದೇ ಪಾತ್ರ. ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರ ಇದಾಗಿದ್ದು, ಇಡೀ ಸಿನಿಮಾ ಒಂದೇ ಶಾಟ್​ನಲ್ಲಿ ತೆಗೆಯಲಾಗಿದೆ. ಹೈದರಾಬಾದ್​ನ ಒಂದು ಮನೆಯಲ್ಲಿ ಈ ಸಿನಿಮಾ ಶೂಟ್​ ಮಾಡಲಾಗಿದೆ. ರಾಜಾ ದುಸ್ಸಾ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಚಿತ್ರ.

ಆಗಸ್ಟ್ 9ರಂದು ಹನ್ಸಿಕಾ ಅವರ ಜನ್ಮದಿನವಾಗಿತ್ತು. ಈ ವಿಶೇಷ ದಿನದಂದು ‘105’ರ ಮೊದಲ ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು. ಈ ಚಿತ್ರದ ಶೂಟಿಂಗ್​ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಆರಂಭಗೊಂಡಿವೆ. ಈ ಸಿನಿಮಾಗಾಗಿ 20 ದಿನಗಳ ಕಾಲ ಹನ್ಸಿಕಾ ಪ್ರಾಕ್ಟಿಸ್​ ಮಾಡಿಕೊಂಡಿದ್ದರು ಅನ್ನೋದು ವಿಶೇಷ.  ಈಗ ಚಿತ್ರತಂಡದಿಂದ ಹೊಸ ಅಪ್​ಡೇಟ್​ ಒಂದು ಕೇಳಿ ಬರುತ್ತಿದೆ.

ತಮಿಳು, ತೆಲುಗು, ಹಿಂದಿ ಮಾತ್ರವಲ್ಲದೆ ಚೀನಾ​, ಕೊರಿಯಾ ಹಾಗೂ ಇನ್ನೂ ಅನೇಕ ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್​ ಆಗುತ್ತಿದೆ. ಅಲ್ಲಿಯೂ ಈ ಚಿತ್ರಕ್ಕೆ ಬೇಡಿಕೆ ಸೃಷ್ಟಿ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಮೂಲಕ ಹೊಸ ದಾಖಲೆಗೆ ಸಿನಿಮಾ ರೆಡಿ ಆಗಿದೆ. ಈಗಾಗಲೇ ಇದಕ್ಕೆ ಸಿನಿಮಾ ತಂಡ ರೆಡಿ ಆಗಿದ್ದು, ಡಬ್​ ಮಾಡಿ ಈ ಸಿನಿಮಾವನ್ನು ಬೇರೆ ದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

2008ರಲ್ಲಿ ಬಿಂದಾಸ್​ ಸಿನಿಮಾ ತೆರೆಗೆ ಬಂದಿತ್ತು. ಪುನೀತ್​ ಆ ಚಿತ್ರದ ಹೀರೋ. ಆ ಸಿನಿಮಾಗೆ ಹನ್ಸಿಕಾ ನಾಯಕಿಯಾಗಿದ್ದರು. ಟದು ಅವರ ಮೊದಲ ಕನ್ನಡ ಸಿನಿಮಾ. ಅದಾದ ನಂತರದಲ್ಲಿ ಅವರು ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಿಲ್ಲ.

ಇದನ್ನೂ ಓದಿ: Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್​ ತೋರಿಸಿದ ಧನಂಜಯ್​

‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್​’ ಚಿತ್ರದ ಪುನೀತ್ ಪವರ್​ಫುಲ್​​ ಲುಕ್​ ಅನಾವರಣ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್