AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್​ ತೋರಿಸಿದ ಧನಂಜಯ್​

Ratnan Prapancha Trailer: ‘ಇದು ಸ್ಯಾಂಪಲ್​ ಅಷ್ಟೇ, ಇನ್ನೂ ಏನೇನೋ ಇದೆ. ಈ ಬೊಂಬಾಟಾಗಿರೋ ಪ್ರಪಂಚನ ನೀವು ನೋಡಬೇಕು’ ಎಂದು ಹೇಳುವ ಮೂಲಕ ಧನಂಜಯ್​ ಸಿನಿಮಾದಲ್ಲಿ ಮನರಂಜನೆ ಸ್ವಲ್ಪ ಹೆಚ್ಚೇ ಇರಲಿದೆ ಎನ್ನುವ ಸೂಚನೆ ನೀಡಿದ್ದಾರೆ. ರತ್ನಾಕರ (ಧನಂಜಯ್​) ಪಕ್ಕಾ ಮಧ್ಯಮ ವರ್ಗದ ವ್ಯಕ್ತಿ. ಆತನ ತಾಯಿ ಸರೋಜಾ (ಉಮಾಶ್ರೀ) ಸ್ವಲ್ಪ ರಫ್​ ಆ್ಯಂಡ್​ ಟಫ್​. ಅವರು ಬಳಕೆ ಮಾಡುವ ಶಬ್ದ ಕೇಳಿದರೆ ಸಾಮಾನ್ಯರು ಕಿವಿ ಮುಚ್ಚಿಕೊಳ್ಳೋದೆ.

Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್​ ತೋರಿಸಿದ ಧನಂಜಯ್​
TV9 Web
| Edited By: |

Updated on:Apr 02, 2026 | 10:30 AM

Share

‘ಟಗರು’ ಸಿನಿಮಾ ನೋಡಿದ ನಂತರದಲ್ಲಿ ಧನಂಜಯ್​ ಎಂದಾಗ ನೆನಪಿಗೆ ಬರೋದು ಡಾಲಿಯ ಕ್ರೂರ ಮುಖ. ಈ ಸಿನಿಮಾ ತೆರೆಗೆ ಬಂದು ಹಲವು ವರ್ಷ ಕಳೆದರೂ ಡಾಲಿ ಕ್ಯಾರೆಕ್ಟರ್​ ಇನ್ನೂ ಜೀವಂತವಾಗಿದೆ. ಆ ಪಾತ್ರವನ್ನೂ ಇನ್ನೂ ಅನೇಕರು ಇಷ್ಟಪಡುವವರಿದ್ದಾರೆ. ಧನಂಜಯ್​ ಅವರನ್ನು ಮತ್ತೆ ಹಾಗೆಯೇ ನೋಡಬೇಕು ಎಂದು ಅನೇಕರ ಬಯಕೆ. ಆದರೆ, ಧನಂಜಯ್ ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾಗಿಲ್ಲ. ಅವರು​ ಓರ್ವ ಕಲಾವಿದನಾಗಿ ಜೀವಿಸುತ್ತಿದ್ದಾರೆ. ಈ ಕಾರಣಕ್ಕೆ ಭಿನ್ನ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರು ರತ್ನಾಕರನಾಗಿ ವೀಕ್ಷಕರ ಮುಂದೆ ಬರೋಕೆ ರೆಡಿ ಆಗಿದ್ದಾರೆ. ಇದು ಹೊಸ ಪ್ರಪಂಚ. ಇಂದು ರಿಲೀಸ್​ ಆದ ಟ್ರೇಲರ್​ ‘ರತ್ನನ್​ ಪ್ರಪಂಚದ’ ಒಂದು ಸ್ಯಾಂಪಲ್​.

ರತ್ನಾಕರ (ಧನಂಜಯ್​) ಪಕ್ಕಾ ಮಧ್ಯಮ ವರ್ಗದ ವ್ಯಕ್ತಿ. ಆತನ ತಾಯಿ ಸರೋಜಾ (ಉಮಾಶ್ರೀ) ಸ್ವಲ್ಪ ರಫ್​ ಆ್ಯಂಡ್​ ಟಫ್​. ಅವರು ಬಳಕೆ ಮಾಡುವ ಶಬ್ದ ಕೇಳಿದರೆ ಸಾಮಾನ್ಯರು ಕಿವಿ ಮುಚ್ಚಿಕೊಳ್ಳೋದೆ. ರತ್ನಾಕರನಿಗೆ ಮದುವೆ ಮಾಡಬೇಕು ಎನ್ನುವ ಪ್ರಯತ್ನ ಕೂಡ ನಡೆಯುತ್ತಿರುತ್ತದೆ. ಈ ವೇಳೆ ಆತನ ಬಾಳಲ್ಲಿ ಒಂದು ಹುಡುಗಿ (ರೆಬಾ ಜಾನ್​) ಬರುತ್ತಾಳೆ. ನಂತರ ಸಿನಿಮಾ ಹೊಸ ತಿರುವು ಪಡೆದುಕೊಳ್ಳುತ್ತದೆ ಎಂದು ಟ್ರೇಲರ್​ನಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತದೆ.

ಟ್ರೇಲರ್​ನಲ್ಲಿ ನಗುವಿಗೆ ಬರವಿಲ್ಲ. ಹೀಗಾಗಿ, ಸಿನಿಮಾದಲ್ಲೂ ಇದೇ ಮುಂದುವರಿಯಬಹುದು ಎನ್ನುವ ನಿರೀಕ್ಷೆ ವೀಕ್ಷಕರದ್ದು. ‘ಇದು ಸ್ಯಾಂಪಲ್​ ಅಷ್ಟೇ, ಇನ್ನೂ ಏನೇನೋ ಇದೆ. ಈ ಬೊಂಬಾಟಾಗಿರೋ ಪ್ರಪಂಚನ ನೀವು ನೋಡಬೇಕು’ ಎಂದು ಹೇಳುವ ಮೂಲಕ ಧನಂಜಯ್​ ಸಿನಿಮಾದಲ್ಲಿ ಮನರಂಜನೆ ಸ್ವಲ್ಪ ಹೆಚ್ಚೇ ಇರಲಿದೆ ಎನ್ನುವ ಸೂಚನೆ ನೀಡಿದ್ದಾರೆ.

ಈ ಸಿನಿಮಾದಲ್ಲಿ ತಾರಾಗಣ ಸ್ವಲ್ಪ ದೊಡ್ಡದಾಗಿಯೇ ಇದೆ. ರೆಬಾ ಜಾನ್, ಅನು ಪ್ರಭಾಕರ್​, ಹಿರಿಯ ನಟಿ ಶ್ರುತಿ, ರವಿ ಶಂಕರ್ ಗೌಡ​, ಅಚ್ಯುತ್​ ಕುಮಾರ್​ ಮೊದಲಾದವರು ನಟಿಸಿದ್ದಾರೆ. ರೋಹಿತ್​ ಪದಕಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಇದೆ. ಕೆಆರ್​ಜಿ ಸ್ಟುಡಿಯೋಸ್​ ಅಡಿಯಲ್ಲಿ ಕಾರ್ತಿಕ್​ ಮತ್ತು ಯೋಗಿ ರಾಜ್​ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಖ್ಯಾತ ನಿರ್ಮಾಪಕ ವಿಜಯ್​ ಕಿರಗಂದೂರು ಸಿನಿಮಾವನ್ನು ಅರ್ಪಿಸುತ್ತಿದ್ದಾರೆ.

ದಳಪತಿ ವಿಜಯ್​ ಮತ್ತು ಮಹೇಶ್​ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್​

Published On - 2:56 pm, Fri, 20 August 21

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ