ದಳಪತಿ ವಿಜಯ್​ ಮತ್ತು ಮಹೇಶ್​ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್​

ನಮ್ರತಾ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 2000ರಲ್ಲಿ ತೆರೆಗೆ ಬಂದ ‘ವಂಶಿ’ ಸಿನಿಮಾದಲ್ಲಿ ಮಹೇಶ್​ ಬಾಬು ಹಾಗೂ ನಮ್ರತಾ ಜತೆಯಾಗಿ ಕಾಣಿಸಿಕೊಂಡಿದ್ದರು.

ದಳಪತಿ ವಿಜಯ್​ ಮತ್ತು ಮಹೇಶ್​ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್​
TV9kannada Web Team

| Edited By: Rajesh Duggumane

Aug 20, 2021 | 2:11 PM

ಮಹೇಶ್​ ಬಾಬು ಹಾಗೂ ದಳಪತಿ ವಿಜಯ್​ ಇಬ್ಬರೂ ಅನುಕ್ರಮವಾಗಿ ತೆಲುಗು ಮತ್ತು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್​ ಹೀರೋಗಳು. ಇಬ್ಬರಿಗೂ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಇವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬರಲಿ ಅಭಿಮಾನಿಗಳು ಹಬ್ಬ ಮಾಡುತ್ತಾರೆ. ಅಚ್ಚರಿಯ ವಿಚಾರ ಎಂದರೆ ವಿಜಯ್​ ನಟನೆಯ ಸಿನಿಮಾದಲ್ಲಿ ಮಹೇಶ್​ ಬಾಬು ಪತ್ನಿ ನಮ್ರತಾ ಕಾಣಿಸಿಕೊಂಡಿದ್ದರು! ಈ ವಿಚಾರ ಅನೇಕರಿಗೆ ಗೊತ್ತಿಲ್ಲ.

ನಮ್ರತಾ ಚಿತ್ರರಂಗದ ಹಿನ್ನೆಲೆಯಿಂದ ಬಂದವರು. ಅವರು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 2000ರಲ್ಲಿ ತೆರೆಗೆ ಬಂದ ‘ವಂಶಿ’ ಸಿನಿಮಾದಲ್ಲಿ ಮಹೇಶ್​ ಬಾಬು ಹಾಗೂ ನಮ್ರತಾ ಜತೆಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. 2005ರಲ್ಲಿ ಇಬ್ಬರೂ ಮದುವೆಯೂ ಆದರು. ಮದುವೆ ಆಗಿ ಹಲವು ವರ್ಷ ಕಳೆದಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಗಳು ಹಳೆಯ ವಿಚಾರವನ್ನು ಮತ್ತೆ ನೆನಪಿಸಿದ್ದಾರೆ.

ದಳಪತಿ ವಿಜಯ್​ ನಟನೆಯ ‘ತಿರುಮಲೈ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾ ತೆರೆಗೆ ಬಂದಿದ್ದು 2003ರಲ್ಲಿ. ಈ ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆ ಆಗಿದ್ದು ನಮ್ರತಾ. ಕೆಲವು ದಿನಗಳ ಶೂಟಿಂಗ್​ನಲ್ಲೂ ಅವರು ಪಾಲ್ಗೊಂಡಿದ್ದರು. ಆದರೆ, ಕೆಲ ದಿನಗಳ ನಂತರ ನಿರ್ದೇಶಕರಿಗೂ ಹಾಗೂ ನಮ್ರತಾ ನಡುವೆ ಕೆಲವು ಭಿನ್ನಾಭಿಪ್ರಾಯ ಹುಟ್ಟಿಕೊಂಡವು. ಸಿನಿಮಾ ಕಥೆಗೆ ಸಂಬಂಧಿಸಿದಂತೆ ನಿರ್ದೇಶಕರು ಕೆಲ ವಿಚಾರಗಳಲ್ಲಿ ರಾಜಿ ಆಗಲು ನಿರಾಕರಿಸಿದ್ದರು ಎನ್ನಲಾಗಿದೆ. ಹೀಗಾಗಿ, ನಮ್ರತಾ ಅವರು ಸಿನಿಮಾದಿಂದ ಹಿಂದೆ ಸರಿದರು. ನಂತರ ಈ ಪಾತ್ರವನ್ನು ಜ್ಯೋತಿಕಾ ನಿರ್ವಹಿಸಿದರು.

ಮಹೇಶ್​ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪರಶುರಾಮ್​ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಕೀರ್ತಿ ಸುರೇಶ್​ ಚಿತ್ರದ ನಾಯಕಿ. ವಿಜಯ್​ ಅವರು ‘ಬೀಸ್ಟ್​’ ಸಿನಿಮಾ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್​ ಮತ್ತು ಮಹೇಶ್​ ಬಾಬುಗೆ ಕಾಡುತ್ತಿದೆ ಒಂದೇ ಸಮಸ್ಯೆ; ಪೊಲೀಸ್​ ಠಾಣೆಯಲ್ಲಿ ದಾಖಲಾಯ್ತು ದೂರು 

3D ರಾಮಾಯಣ: ರಾಮನ ಪಾತ್ರಕ್ಕೆ ಮಹೇಶ್​ ಬಾಬು ಬದಲಿಗೆ ರಣಬೀರ್ ಕಪೂರ್​?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada