AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್​ ಮತ್ತು ಮಹೇಶ್​ ಬಾಬುಗೆ ಕಾಡುತ್ತಿದೆ ಒಂದೇ ಸಮಸ್ಯೆ; ಪೊಲೀಸ್​ ಠಾಣೆಯಲ್ಲಿ ದಾಖಲಾಯ್ತು ದೂರು

ಮಹೇಶ್​ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಹಾಗೂ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳನ್ನು ಮೈತ್ರಿ ಮೂವಿ ಮೇಕರ್ಸ್​ ನಿರ್ಮಾಣ ಮಾಡುತ್ತಿದೆ.

ಅಲ್ಲು ಅರ್ಜುನ್​ ಮತ್ತು ಮಹೇಶ್​ ಬಾಬುಗೆ ಕಾಡುತ್ತಿದೆ ಒಂದೇ ಸಮಸ್ಯೆ; ಪೊಲೀಸ್​ ಠಾಣೆಯಲ್ಲಿ ದಾಖಲಾಯ್ತು ದೂರು
ಅಲ್ಲು ಅರ್ಜುನ್​ ಮತ್ತು ಮಹೇಶ್​ ಬಾಬುಗೆ ಕಾಡುತ್ತಿದೆ ಒಂದೇ ಸಮಸ್ಯೆ; ಪೊಲೀಸ್​ ಠಾಣೆಯಲ್ಲಿ ದಾಖಲಾಯ್ತು ದೂರು
TV9 Web
| Edited By: |

Updated on:Aug 15, 2021 | 7:47 PM

Share

ಅಲ್ಲು ಅರ್ಜುನ್​ ಹಾಗೂ ಮಹೇಶ್​ ಬಾಬು ಅವರಿಗೆ ಟಾಲಿವುಡ್​ನಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಇವರ ಸಿನಿಮಾ ಟಾಲಿವುಡ್​ನಲ್ಲಿ ದೊಡ್ಡ ಮೊತ್ತದ ಕಲೆಕ್ಷನ್​ ಮಾಡುತ್ತದೆ. ಈಗ ಇಬ್ಬರು ಹೀರೋಗಳಿಗೆ ಒಂದೇ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.  ಅಷ್ಟಕ್ಕೂ ಏನು ಆ ಸಮಸ್ಯೆ? ಎಂಬುದಕ್ಕೆ ಇಲ್ಲಿದೆ ಉತ್ತರ.

ಮಹೇಶ್​ ಬಾಬು ಅವರು ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಹಾಗೂ ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳನ್ನು ಮೈತ್ರಿ ಮೂವಿ ಮೇಕರ್ಸ್​ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ಕಂಟೆಂಟ್​ಗಳು ರಿಲೀಸ್​ ಆಗುವುದಕ್ಕೂ ಮೊದಲೇ ಲೀಕ್​ ಆಗಿದೆ. ಇದು ನಿರ್ಮಾಣ ಸಂಸ್ಥೆಗೆ ತುಂಬಾನೇ ತಲೆನೋವು ತಂದಿದೆ.

ಪುಷ್ಪ ಸಿನಿಮಾದ ‘ದಕ್ಕೋ ದಕ್ಕೋ ದಕ್ಕೋ..’ ಹಾಡು ರಿಲೀಸ್​​ಗೂ ಮೊದಲೇ ಸೋಶಿಯಲ್​ ಮೀಡಿಯಾದಲ್ಲಿ ಲೀಕ್​ ಆಗಿತ್ತು. ಇದು ನಿರ್ಮಾಣ ಸಂಸ್ಥೆಯನ್ನು ಚಿಂತೆಗೆಈಡು ಮಾಡಿದೆ. ಶೂಟಿಂಗ್​ ಸಂದರ್ಭದಲ್ಲಿ ಸ್ಟಿಲ್​ಗಳು ವಿಡಿಯೋಗಳು ಲೀಕ್​ ಆಗೋದು ಸಾಮಾನ್ಯ. ಆದರೆ, ಸಾಂಗ್​ ಸೋರಿಕೆ​ ಆಗಿದ್ದು ಚಿತ್ರತಂಡವನ್ನು ಚಿಂತೆಗೆಈಡು ಮಾಡಿದೆ. ಮುಂಬರುವ ದಿನಗಳಲ್ಲಿ ಟೀಸರ್​ ಹಾಗೂ ಟ್ರೇಲರ್​ಗೆ ಇದೇ ಸಮಸ್ಯೆ ಉಂಟಾದರೆ ಏನು ಗತಿ ಎಂಬುದು ಮೈತ್ರಿ ಮೂವಿ ಮೇಕರ್ಸ್​ ಚಿಂತೆ.

‘ಆನ್‌ಲೈನ್‌ನಲ್ಲಿ ನಮ್ಮ ಚಲನಚಿತ್ರದ ಕಂಟೆಂಟ್​ಗಳು ಸೋರಿಕೆ ಆಗಿದ್ದು, ಇದರಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ. ನಾವು ಇದನ್ನು ಖಂಡಿಸುತ್ತೇವೆ ಮತ್ತು ಸೈಬರ್ ಠಾಣೆಗೆ ದೂರು ನೀಡಿದ್ದೇವೆ. ತಪ್ಪಿತಸ್ಥರನ್ನು ಶೀಘ್ರವೇ ಕಾನೂನಿನ ಮೂಲಕ ಬಂಧಿಸಲಾಗುವುದು. ದಯವಿಟ್ಟು ಪೈರಸಿ ಪ್ರೋತ್ಸಾಹಿಸಬೇಡಿ’ ಎಂದಿದ್ದಾರೆ ಮೈತ್ರಿ ಮೂವಿ ಮೇಕರ್ಸ್​.

‘ಅಲಾ ವೈಕುಂಠಪುರಮುಲೋ’ ಸಿನಿಮಾ ನಂತರ ಅಲ್ಲು ಅರ್ಜುನ್ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ ರಂಗಸ್ಥಲಂ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. ರಂಗಸ್ಥಲಂ ಸಿನಿಮಾ ಕತೆ ಹಳ್ಳಿ ಹಿನ್ನೆಲೆಯಲ್ಲಿ ಸಾಗಿತ್ತು. ಪುಷ್ಪ ಸಿನಿಮಾ ಕಾಡಿನ ಹಿನ್ನೆಲೆ ಹೊಂದಿದೆ. ಈ ಚಿತ್ರ ಎರಡು ಪಾರ್ಟ್​ಗಳಲ್ಲಿ ರೆಡಿ ಆಗುತ್ತಿದೆ.

‘ಸರ್ಕಾರು ವಾರಿ ಪಾಟ’ ಸಿನಿಮಾ ಸಂಕ್ರಾಂತಿ ಪ್ರಯುಕ್ತ ಜನವರಿ 13ರಂದು ತೆರೆಗೆ ಬರುತ್ತಿದೆ. ಜನವರಿ 14ರಂದು ರಾಧೆ ಶ್ಯಾಮ್​ ಸಿನಿಮಾ ರಿಲೀಸ್​ ಆಗುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಕಾಂಪಿಟೇಷನ್​ ಏರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಮಹೇಶ್​ ಬಾಬು ಸಿನಿಮಾಗೆ ಕೆಜಿಎಫ್​ ವಿಲನ್​; ಟಾಲಿವುಡ್​ ಅಂಗಳದಿಂದ ಹೊಸ ಅಪ್​ಡೇಟ್​

Published On - 7:13 pm, Sun, 15 August 21