ಮಹೇಶ್​ ಬಾಬು ಸಿನಿಮಾಗೆ ಕೆಜಿಎಫ್​ ವಿಲನ್​; ಟಾಲಿವುಡ್​ ಅಂಗಳದಿಂದ ಹೊಸ ಅಪ್​ಡೇಟ್​

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್’​ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಈಗ ಪಾರ್ಟ್​ 2 ಸಿದ್ಧಗೊಂಡಿದ್ದು, ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಸಿನಿಮಾ ರಿಲೀಸ್​ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ.

ಮಹೇಶ್​ ಬಾಬು ಸಿನಿಮಾಗೆ ಕೆಜಿಎಫ್​ ವಿಲನ್​; ಟಾಲಿವುಡ್​ ಅಂಗಳದಿಂದ ಹೊಸ ಅಪ್​ಡೇಟ್​
ಮಹೇಶ್​ ಬಾಬು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 11, 2021 | 4:22 PM

ಮಹೇಶ್​ ಬಾಬು ಅವರು ಸದ್ಯ, ‘ಸರ್ಕಾರು ವಾರಿ ಪಾಟ’ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ರಿಲೀಸ್​ ಆಗಿದ್ದ ಸಿನಿಮಾ ಟೀಸರ್​ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಈಗ ಅವರು ತಮ್ಮ ಮುಂದಿನ ಸಿನಿಮಾಗಾಗಿ ಸ್ಟಾರ್​ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಜತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಕೆಜಿಎಫ್​ ವಿಲನ್​ ಎಂಟ್ರಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್’​ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಈಗ ಪಾರ್ಟ್​ 2 ಸಿದ್ಧಗೊಂಡಿದ್ದು, ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಸಿನಿಮಾ ರಿಲೀಸ್​ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಚಿತ್ರದಲ್ಲಿ ಅಧೀರನಾಗಿ ಸಂಜಯ್​ ದತ್​ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪ್ರಮುಖ ವಿಲನ್​ ಅಧೀರನೇ. ಈಗ ಮಹೇಶ್​ ಬಾಬು ಮುಂದಿನ ಚಿತ್ರಕ್ಕೆ ಸಂಜಯ್​ ದತ್​ ಅವರನ್ನು ಕರೆತರಲು ಮಾತುಕತೆ ನಡೆದಿದೆ ಎನ್ನಲಾಗಿದೆ.

ಮಹೇಶ್​ ಬಾಬು ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ಗಳು ಇರುತ್ತವೆ. ಸ್ಟಾರ್​ ವಿಲನ್​ ಕರೆ ತಂದರೆ ಹೀರೋ ಪಾತ್ರಕ್ಕೆ ತೂಕ ಬರಲಿದೆ ಅನ್ನೋದು ಚಿತ್ರತಂಡದ ಆಲೋಚನೆ. ಈ ಕಾರಣಕ್ಕೆ ನಿರ್ದೇಶಕ ತ್ರಿವಿಕ್ರಮ್​ ಅವರು ಸಂಜಯ್​ ದತ್​ ಜತೆ ಮಾತುಕತೆ ನಡೆಸಿದ್ದಾರೆ.

ಸಂಜಯ್​ ದತ್​ಗೆ ಈ ಸಿನಿಮಾದ ಕಥೆ ಇಷ್ಟ ಆಗಿದೆ ಎನ್ನುತ್ತಿವೆ ಮೂಲಗಳು. ಹೀಗಾಗಿ, ಅವರು ವಿಲನ್​ ಆಗೋಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ. ಸಂಜಯ್​ ದತ್​ಗೆ ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆರಂಭದಲ್ಲೇ ಇದು ಪತ್ತೆಯಾದ ಕಾರಣ ಸಂಜಯ್​ ದತ್​ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ, ಅವರು ಬೇರೆಬೇರೆ ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ ಇದ್ದಾರೆ.

ಕೆಜಿಎಫ್​ 2 ಸಿನಿಮಾ ಮೇಲೆ ದೊಡ್ಟಮಟ್ಟದ ನೀರಿಕ್ಷೆ ಇದೆ. ಸಂಜಯ್​ ದತ್​ ನಿರ್ವಹಣೆ ಮಾಡುತ್ತಿರುವ ಅಧೀರನ ಪಾತ್ರದ ಕೆಲ ಪೋಸ್ಟರ್​ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದರಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.  ಮಹೇಶ್​ ಬಾಬು ಹಾಗೂ ತ್ರಿವಿಕ್ರಮ್​ ಅವರು ಈ ಮೊದಲು ‘ಅತಡು’ ಮತ್ತು ‘ಖಲೇಜಾ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.  ಈಗ ಮೂರನೇ ಬಾರಿಗೆ ಇಬ್ಬರೂ ಒಂದಾಗುತ್ತಿದ್ದಾರೆ.

ಇದನ್ನೂ ಓದಿ: 

Mahesh Babu: 46ನೇ ವಸಂತಕ್ಕೆ ಕಾಲಿಟ್ಟ ಪ್ರಿನ್ಸ್​ ಮಹೇಶ್​ ಬಾಬುಗೆ ‘ಬ್ಲಾಸ್ಟರ್’​ ಉಡುಗೊರೆ; ಏನಿದು?

Published On - 4:18 pm, Wed, 11 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ