ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕ ಸನ್ನದ್ಧ, ಟ್ರಂಪ್ ಓಕೆ ಅನ್ನೋದೊಂದೇ ಬಾಕಿ
ಅಮೆರಿಕದ ಮಿಲಿಟರಿ ಇರಾನ್ ವಿರುದ್ಧ ಯುದ್ಧಕ್ಕೆ ಸಂಪೂರ್ಣ ಸಿದ್ಧವಾಗಿದೆ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಬೃಹತ್ ಯುದ್ಧ ನೌಕೆಗಳು ಮತ್ತು ವಿಮಾನಗಳು ನಿಯೋಜನೆಗೊಂಡಿವೆ. ಇರಾನ್ ಮೇಲೆ ಶೀಘ್ರ ದಾಳಿ ಸಾಧ್ಯತೆ 90% ರಷ್ಟಿದೆ. ಡೊನಾಲ್ಡ್ ಟ್ರಂಪ್ ಮಾತ್ರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಅವರ ಈ ನಿರ್ಧಾರ ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು.

ವಾಷಿಂಗ್ಟನ್, ಫೆಬ್ರವರಿ 19: ಇರಾನ್(Iran) ಮೇಲಿನ ದಾಳಿಗೆ ಅಮೆರಿಕದ ಮಿಲಿಟರಿ ಸಿದ್ಧತೆಗಳು ಪೂರ್ಣಗೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಧ್ಯಪ್ರಾಚ್ಯದಲ್ಲಿ, ಅಮೆರಿಕದ ಯುದ್ಧನೌಕೆಗಳು, ಯುದ್ಧ ವಿಮಾನಗಳು ಮತ್ತು ಇಂಧನ ತುಂಬುವ ವಿಮಾನಗಳು ಇರಾನ್ ವಿರುದ್ಧದ ಯುದ್ಧಕ್ಕೆ ಸಿದ್ಧವಾಗಿವೆ. ಈ ವಾರದ ಕೊನೆಯಲ್ಲಿ ಅಮೆರಿಕದ ಮಿಲಿಟರಿ ಇರಾನ್ ಮೇಲೆ ದಾಳಿ ನಡೆಸಬಹುದು ಎಂದು ವರದಿಗಳು ಹೇಳುತ್ತಿವೆ.
ಅಮೆರಿಕದ ದಾಳಿಯು ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಆದಾಗ್ಯೂ, ಇರಾನ್ ಮೇಲಿನ ದಾಳಿಯ ಕುರಿತು ಡೊನಾಲ್ಡ್ ಟ್ರಂಪ್ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಅಮೆರಿಕದ ಆಡಳಿತದ ಮೂಲವನ್ನು ಉಲ್ಲೇಖಿಸಿ ದಿ ಟೆಲಿಗ್ರಾಫ್, ಮುಂಬರುವ ವಾರದಲ್ಲಿ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾಗುವ ಸಾಧ್ಯತೆ 90 ಪ್ರತಿಶತ ಎಂದು ಹೇಳಿಕೊಂಡಿದೆ.
ಈ ವಾರದ ಕೊನೆಯಲ್ಲಿ ಅಮೆರಿಕದ ದಾಳಿ ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ. ಇಸ್ರೇಲಿ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥರು ಮುಂದಿನ ಕೆಲವು ದಿನಗಳಲ್ಲಿ ಇರಾನ್ ಮೇಲೆ ಅಮೆರಿಕದ ದಾಳಿ ನಡೆಯಲಿದೆ, ಇದು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳುತ್ತಿದ್ದಾರೆ.
ಮತ್ತಷ್ಟು ಓದಿ: Iran Protests: ‘ಮುಲ್ಲಾಗಳೇ ದೇಶಬಿಟ್ಟು ತೊಲಗಿ’- ಇರಾನ್ನಲ್ಲಿ ಜನಘೋಷ; ತೀವ್ರ ಪ್ರತಿಭಟನೆಯಲ್ಲಿ 7 ಬಲಿ
ಮಿಲಿಟರಿ ಕ್ರಮದ ಸಾಧಕ-ಬಾಧಕಗಳ ಬಗ್ಗೆ ಟ್ರಂಪ್ ಖಾಸಗಿಯಾಗಿ ಚರ್ಚಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಈ ವಿಷಯದ ಬಗ್ಗೆ ಟ್ರಂಪ್ ತಮ್ಮ ಸಲಹೆಗಾರರು ಮತ್ತು ಸಹಾಯಕರೊಂದಿಗೆ ಸಮಾಲೋಚಿಸಿದ್ದಾರೆ. ಈಗ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸುವುದು ಟ್ರಂಪ್ ಅವರ ಮೇಲಿದೆ. ಈ ಪ್ರದೇಶದಲ್ಲಿ ಅಮೆರಿಕದ ಯುದ್ಧನೌಕೆಗಳು ಮತ್ತು ಫೈಟರ್ ಜೆಟ್‌ಗಳ ದೊಡ್ಡ ಪಡೆಯನ್ನು ನಿಯೋಜಿಸುವುದನ್ನು ಅವರು ಭೀಕರ ಯುದ್ಧದ ಸಂಕೇತವೆಂದೇ ಹೇಳಬಹುದು.
ಅಮೆರಿಕವು ಮಧ್ಯಪ್ರಾಚ್ಯದಲ್ಲಿ ತನ್ನ ಸಕ್ರಿಯ ನೌಕಾ ಪಡೆಯ ದೊಡ್ಡ ಭಾಗವನ್ನು ನಿಯೋಜಿಸಿದೆ. ಇದರಲ್ಲಿ ನೂರಾರು ಫೈಟರ್ ಜೆಟ್‌ಗಳು, ಎರಡು ವಿಮಾನವಾಹಕ ನೌಕೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತ 150 ಕ್ಕೂ ಹೆಚ್ಚು ಸರಕು ವಿಮಾನಗಳು ಸೇರಿವೆ. ಈ ವಾರ, ಇರಾನ್‌ನ ಸುತ್ತಮುತ್ತಲ ಪ್ರದೇಶದಲ್ಲಿ 50 ಕ್ಕೂ ಹೆಚ್ಚು F-35, F-22 ಮತ್ತು F-16 ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ. ಸ್ವಿಟ್ಜರ್ಲ್ಯಾಂಡ್ನ ಜಿನೀವಾದಲ್ಲಿ ಅಮೆರಿಕ ಮತ್ತು ನಿರಾನಿನ ನಿಯೋಗಗಳು ಉನ್ನತ ಮಟ್ಟದ ಪರಮಾಣು ಒಪ್ಪಂದದ ಕುರಿತು ಚರ್ಚಿಸಲು ಸಭೆ ಸೇರಿದ ಬಳಿಕ ಈ ಮಾಹಿತಿ ಹೊರಬಿದ್ದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
