AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಂಕ್ ಲೈನ್ ಮೆಟ್ರೋ ಸಂಚಾರ ಶುರು: ಸಮಯ, ಫ್ರೀಕ್ವೆನ್ಸಿ, ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ

ಪಿಂಕ್ ಲೈನ್ ಮೆಟ್ರೋ ಮಾಹಿತಿ: ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದ ಬೆಂಗಳೂರು ನಮ್ಮ ಮೆಟ್ರೋ ಪಿಂಕ್ ಲೈನ್ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಕಾಳೇನ ಅಗ್ರಹಾರದಿಂದ ಎಸ್‌.ಜಿ. ಪಾಳ್ಯವರೆಗೆ ರೈಲು ಸಮಯ, ಫ್ರೀಕ್ವೆನ್ಸಿ ಹಾಗೂ ₹10ರಿಂದ ₹30ರವರೆಗಿನ ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಂಕ್ ಲೈನ್ ಮೆಟ್ರೋ ಸಂಚಾರ ಶುರು: ಸಮಯ, ಫ್ರೀಕ್ವೆನ್ಸಿ, ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ
ಪಿಂಕ್ ಲೈನ್ ಮೆಟ್ರೋ ಸಾರ್ವಜನಿಕ ಸಂಚಾರದ ಮೊದಲ ದಿನ ಪ್ರಯಾಣಿಕರನ್ನು ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು
ಕಿರಣ್​ ಸೂರ್ಯ
| Edited By: |

Updated on: Nov 14, 2026 | 8:04 AM

Share

ಮುಖ್ಯಾಂಶಗಳು

  • ಪಿಂಕ್ ಲೈನ್ ಸಾರ್ವಜನಿಕ ಸಂಚಾರ ಆರಂಭ
  • ಪೀಕ್ ಅವರ್‌ನಲ್ಲಿ ಪ್ರತಿ ಎಂಟು ನಿಮಿಷಕ್ಕೊಂದು ರೈಲು
  • ₹10ರಿಂದ ₹30ರವರೆಗೆ ಟಿಕೆಟ್ ದರ ನಿಗದಿ

ಬೆಂಗಳೂರು, ನವೆಂಬರ್ 14: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಕಾಳೇನ ಅಗ್ರಹಾರದಿಂದ ಎಸ್‌.ಜಿ. ಪಾಳ್ಯ (ಸುದ್ದುಗುಂಟೆಪಾಳ್ಯ)ವರೆಗಿನ ಹೊಸ ಮೆಟ್ರೋ ಮಾರ್ಗದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಾಣಿಜ್ಯ ಸಂಚಾರ ಆರಂಭವಾಗಿದೆ. ಪಿಂಕ್ ಲೈನ್ ಮೆಟ್ರೋ ಬಳಸಲು ಯೋಜಿಸುತ್ತಿರುವ ಪ್ರಯಾಣಿಕರಿಗಾಗಿ ಮಾರ್ಗ, ರೈಲು ಸಮಯ, ಸಂಚಾರದ ಫ್ರೀಕ್ವೆನ್ಸಿ ಹಾಗೂ ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಂಕ್ ಲೈನ್ ಮೆಟ್ರೋ ಮಾರ್ಗ ನಿಲ್ದಾಣಗಳು

ಹೊಸದಾಗಿ ಆರಂಭವಾಗಿರುವ ಪಿಂಕ್ ಲೈನ್ ಮಾರ್ಗವು ಕಾಳೇನ ಅಗ್ರಹಾರದಿಂದ ಎಸ್‌.ಜಿ. ಪಾಳ್ಯ (ಸುದ್ದುಗುಂಟೆಪಾಳ್ಯ) ವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ (ಬಿಳೇಕಹಳ್ಳಿ), ಎನ್‌.ಎಸ್‌. ಪಾಳ್ಯ-ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ಎಸ್‌.ಜಿ. ಪಾಳ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಿವೆ.

ಪಿಂಕ್ ಲೈನ್ ಮೆಟ್ರೋ ರೈಲು ಸಂಚಾರದ ಸಮಯ ಹೇಗಿದೆ?

  • ಸೋಮವಾರ ಕಾಳೇನ ಅಗ್ರಹಾರದಿಂದ ಮೊದಲ ರೈಲು ಬೆಳಗ್ಗೆ 4.55 ಗಂಟೆಗೆ ಹೊರಡಲಿದೆ.
  • ಎಸ್‌.ಜಿ. ಪಾಳ್ಯ ಮೆಟ್ರೋ ನಿಲ್ದಾಣದಿಂದ ಮೊದಲ ರೈಲು ಬೆಳಗ್ಗೆ 5.00 ಗಂಟೆಗೆ ಹೊರಡಲಿದೆ.

ಮಂಗಳವಾರದಿಂದ ಶನಿವಾರದವರೆಗೆ ಪಿಂಕ್ ಲೈನ್ ಮೆಟ್ರೋ ಟೈಮಿಂಗ್ಸ್

  • ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಮೊದಲ ರೈಲು ಬೆಳಗ್ಗೆ 6.00 ಗಂಟೆಗೆ ಹೊರಡಲಿದೆ.

ಭಾನುವಾರದ ಪಿಂಕ್ ಲೈನ್ ಮೆಟ್ರೋ ಟೈಮಿಂಗ್ಸ್

  • ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಮೊದಲ ರೈಲು ಬೆಳಗ್ಗೆ 7.00 ಗಂಟೆಗೆ ಹೊರಡಲಿದೆ.
  • ಕೊನೆಯ ರೈಲು ಕಾಳೇನ ಅಗ್ರಹಾರದಿಂದ: ರಾತ್ರಿ 10.50 ಗಂಟೆಗೆ ಹೊರಡಲಿದೆ.
  • ಎಸ್‌.ಜಿ. ಪಾಳ್ಯ (ಸುದ್ದುಗುಂಟೆಪಾಳ್ಯ)ದಿಂದ ರಾತ್ರಿ 10.54 ಗಂಟೆಗೆ ಹೊರಡಲಿದೆ.

ಎಷ್ಟು ನಿಮಿಷಕ್ಕೊಮ್ಮೆ ಪಿಂಕ್ ಲೈನ್ ಮೆಟ್ರೋ?

ಪಿಂಕ್ ಲೈನ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಪೀಕ್ ಅವರ್‌ಗಳಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದೆ. ಇತರೆ ಸಮಯದಲ್ಲಿ ಕಾಳೇನ ಅಗ್ರಹಾರ ಮತ್ತು ಎಸ್‌.ಜಿ. ಪಾಳ್ಯ ನಡುವಿನ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸೇವೆ ಲಭ್ಯವಿರಲಿದೆ.

ಶನಿವಾರ ಮತ್ತು ಭಾನುವಾರ ರೈಲುಗಳು ಪ್ರತಿ 10 ನಿಮಿಷಕ್ಕೊಮ್ಮೆ ಸಂಚರಿಸಲಿವೆ.

ಎಲ್ಲಿಂದ ಎಲ್ಲಿಗೆ ಎಷ್ಟು ಟಿಕೆಟ್ ದರ?

  • ಎಸ್‌.ಜಿ. ಪಾಳ್ಯ – ಕಾಳೇನ ಅಗ್ರಹಾರ: ₹30
  • ಎಸ್‌.ಜಿ. ಪಾಳ್ಯ – ಹುಳಿಮಾವು: ₹20
  • ಎಸ್‌.ಜಿ. ಪಾಳ್ಯ – ಐಐಎಂಬಿ (ಬಿಳೇಕಹಳ್ಳಿ): ₹20
  • ಎಸ್‌.ಜಿ. ಪಾಳ್ಯ – ಎನ್‌.ಎಸ್‌. ಪಾಳ್ಯ-ಜೆ.ಪಿ. ನಗರ 4ನೇ ಹಂತ: ₹10

ಇದನ್ನೂ ಓದಿ: ಪಿಂಕ್​ಲೈನ್ ಮೆಟ್ರೋ ಸಾರ್ವಜನಿಕ ಸಂಚಾರ ಶುರು: ರೈಲಿನಲ್ಲಿ ಸಂಚಾರ ಮಾಡಿದ ಸಚಿವ ಕೃಷ್ಣಭೈರೇಗೌಡ

ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಭಾಗದ ಜನರ ಬಹುದಿನದ ನಿರೀಕ್ಷೆಯಾಗಿದ್ದ ಪಿಂಕ್ ಲೈನ್ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುವುದರಿಂದ, ಈ ಭಾಗದ ನಗರ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗುವ ನಿರೀಕ್ಷೆಯಿದೆ. ಇಂದಿನಿಂದ ಬೆಳಗ್ಗೆಯಿಂದಲೇ ಪ್ರಯಾಣಿಕರು ಹೊಸ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ಬಳಸಲು ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಮಣಿಪಾಲ: ಪಬ್‌ಗಳಲ್ಲಿ ಅಸಭ್ಯ ವರ್ತನೆಯ ವಿಡಿಯೋ ವೈರಲ್
ಮಣಿಪಾಲ: ಪಬ್‌ಗಳಲ್ಲಿ ಅಸಭ್ಯ ವರ್ತನೆಯ ವಿಡಿಯೋ ವೈರಲ್
ಇಂದು ಈ ರಾಶಿಯವರು ಮರೆತ ಹಣ ವಾಪಸ್ ಸಿಗುವ ಸಾಧ್ಯತೆ
ಇಂದು ಈ ರಾಶಿಯವರು ಮರೆತ ಹಣ ವಾಪಸ್ ಸಿಗುವ ಸಾಧ್ಯತೆ
ವೇದಿಕೆಯಲ್ಲೇ ಅಸ್ವಸ್ಥಗೊಂಡ ಮಹಿಳಾ ಕಾರ್ಯಕರ್ತೆ: ನೆರವಿಗೆ ಧಾವಿಸಿದ ಮೋದಿ
ವೇದಿಕೆಯಲ್ಲೇ ಅಸ್ವಸ್ಥಗೊಂಡ ಮಹಿಳಾ ಕಾರ್ಯಕರ್ತೆ: ನೆರವಿಗೆ ಧಾವಿಸಿದ ಮೋದಿ
ರಾಜ್ಯಪಾಲೆ ಡಾ. ಸುಧಾ ಯಾದವ್ ತ್ಯಾಗವನ್ನು ಕೊಂಡಾಡಿದ ಪ್ರಧಾನಿ ಮೋದಿ
ರಾಜ್ಯಪಾಲೆ ಡಾ. ಸುಧಾ ಯಾದವ್ ತ್ಯಾಗವನ್ನು ಕೊಂಡಾಡಿದ ಪ್ರಧಾನಿ ಮೋದಿ
ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ
ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ