AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahesh Babu: 46ನೇ ವಸಂತಕ್ಕೆ ಕಾಲಿಟ್ಟ ಪ್ರಿನ್ಸ್​ ಮಹೇಶ್​ ಬಾಬುಗೆ ‘ಬ್ಲಾಸ್ಟರ್’​ ಉಡುಗೊರೆ; ಏನಿದು?

Mahesh Babu Birthday: ಮಹೇಶ್​ ಬಾಬು ಜನ್ಮದಿನದ ಪ್ರಯುಕ್ತ ಬಿಡುಗಡೆ ಆಗಿರುವ ಈ ಟೀಸರ್​ ಅನ್ನು ‘ಸರ್ಕಾರು ವಾರಿ ಪಾಟ ಬರ್ತ್​ಡೇ ಬ್ಲಾಸ್ಟರ್​’ ಎಂದು ಚಿತ್ರತಂಡ ಕರೆದುಕೊಂಡಿದೆ. ಅದಕ್ಕೆ ತಕ್ಕಂತೆಯೇ ಯೂಟ್ಯೂಬ್​ನಲ್ಲಿ ಇದು​ ಧೂಳೆಬ್ಬಿಸುತ್ತಿದೆ.

Mahesh Babu: 46ನೇ ವಸಂತಕ್ಕೆ ಕಾಲಿಟ್ಟ ಪ್ರಿನ್ಸ್​ ಮಹೇಶ್​ ಬಾಬುಗೆ ‘ಬ್ಲಾಸ್ಟರ್’​ ಉಡುಗೊರೆ; ಏನಿದು?
ಮಹೇಶ್​ ಬಾಬು
TV9 Web
| Edited By: |

Updated on:Aug 09, 2021 | 10:36 AM

Share

ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು (Mahesh Babu) ಅವರಿಗೆ ಇಂದು (ಆ.9) ಜನ್ಮದಿನದ ಸಂಭ್ರಮ. 46ನೇ ವಸಂತಕ್ಕೆ ಕಾಲಿಟ್ಟಿರುವ ಅವರ ಹುಟ್ಟುಹಬ್ಬಕ್ಕೆ ‘ಸರ್ಕಾರು ವಾರಿ ಪಾಟ’ (Sarkaru Vaari Paata) ಚಿತ್ರದ ಕಡೆಯಿಂದ ಭರ್ಜರಿ ಗಿಫ್ಟ್​ ಸಿಕ್ಕಿದೆ. ಬಹುನಿರೀಕ್ಷಿತ ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಮಹೇಶ್​ ಬಾಬು ಅವರಿಗೆ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ಭರವಸೆ ಇದೆ. ಈ ಟೀಸರ್​ ಅನ್ನು ‘ಸರ್ಕಾರು ವಾರಿ ಪಾಟ ಬರ್ತ್​ಡೇ ಬ್ಲಾಸ್ಟರ್​’ ಎಂದು ಚಿತ್ರತಂಡ ಕರೆದುಕೊಂಡಿದೆ. ಅದಕ್ಕೆ ತಕ್ಕಂತೆಯೇ ಯೂಟ್ಯೂಬ್​ನಲ್ಲಿ ಈ ಟೀಸರ್​ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.

ಮಹೇಶ್​ ಬಾಬು ಅವರ ಹುಟ್ಟುಹಬ್ಬವನ್ನು ಇನ್ನಷ್ಟು ಸ್ಪೆಷಲ್​ ಆಗಿಸಲು ಅನೇಕ ಟಾಲಿವುಡ್​ ಸೆಲೆಬ್ರಿಟಿಗಳು ಒಂದಾಗುತ್ತಿದ್ದಾರೆ. ಇಂದು ಸಂಜೆ 7.30ಕ್ಕೆ ಟ್ವಿಟರ್​ ಸ್ಪೇಸ್​ ಮೂಲಕ ಮಹೇಶ್ ಬಾಬು ಕುರಿತು ಸೆಷನ್​ ನಡೆಸಲಾಗುತ್ತಿದೆ. ಖ್ಯಾತ ನಿರ್ದೇಶಕರಾದ ಶ್ರೀನು ವೈಟ್ಲಾ, ವಂಶಿ ಪೈಡಿಪಲ್ಲಿ, ಅನಿಲ್​ ರವಿಪುಡಿ, ಪರಶುರಾಮ್​ ಪೆಟ್ಲ, ಸಂದೀಪ್​ ರೆಡ್ಡಿ ವಂಗಾ, ಗೋಪಿಚಂದ್​, ಬಾಬಿ, ಅಲ್ಲರಿ ನರೇಶ್​, ಅದಿವಿ ಶೇಷ್​, ಸುಧೀರ್​ ಬಾಬು ಸೇರಿದಂತೆ ಅನೇಕರು ಈ ಮಾತುಕತೆಯಲ್ಲಿ ಭಾಗಿ ಆಗಲಿದ್ದಾರೆ. ‘ಪ್ರಿನ್ಸ್​’ ಕುರಿತು ಅವರೆಲ್ಲ ಆಸಕ್ತಿಕರ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.

ಸರ್ಕಾರು ವಾರಿ ಪಾಟ ಚಿತ್ರಕ್ಕೆ ಪರಶುರಾಮ್​ ಪೆಟ್ಲಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್​ ಬಾಬುಗೆ ನಾಯಕಿಯಾಗಿ ಕೀರ್ತಿ ಸುರೇಶ್​ ಅಭಿನಯಿಸಿದ್ದಾರೆ. ಆ್ಯಕ್ಷನ್​ ಅವತಾರದಲ್ಲೂ, ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿಯೂ ಮಹೇಶ್​ ಬಾಬು ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಹುಡುಗಿ ಲುಕ್​ನಲ್ಲಿ ಕೀರ್ತಿ ಸುರೇಶ್​ ಮಿಂಚಿದ್ದಾರೆ. ಈ ಟೀಸರ್​ನಿಂದಾಗಿ ಚಿತ್ರದ ಮೇಲಿನ ಕ್ರೇಜ್​ ಇನ್ನಷ್ಟು ಹೆಚ್ಚುವಂತಾಗಿದೆ.

ಇತ್ತೀಚೆಗೆ ಈ ಚಿತ್ರದ ಫಸ್ಟ್​ಲುಕ್​ ಬಿಡುಗಡೆ ಮಾಡಲಾಗಿತ್ತು. ಅದು ಟ್ವಿಟರ್​ನಲ್ಲಿ ದಾಖಲೆ ಬರೆದಿತ್ತು. ಕೇವಲ 24 ಗಂಟೆಯಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಟಾಲಿವುಡ್​ನ ಮೊದಲ​ ಪೋಸ್ಟರ್​ ಎಂಬ ಖ್ಯಾತಿಗೆ ಇದು ಒಳಗಾಗಿತ್ತು. ಒಂದು ದಿನ ಕಳೆಯುವುದರೊಳಗೆ ಟ್ವಿಟರ್​ನಲ್ಲಿ 95.6 ಸಾವಿರ ಮಂದಿ ಇದನ್ನು ಲೈಕ್​ ಮಾಡಿದ್ದರು. 49.1 ಸಾವಿರ ಬಾರಿ ರೀಟ್ವೀಟ್​ ಮಾಡಲಾಗಿತ್ತು.

ಇದನ್ನೂ ಓದಿ:

ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಸುದೀಪ್​-ಮಹೇಶ್​ ಬಾಬು; ಯಾವುದು ಈ ಪ್ರಾಜೆಕ್ಟ್?​

ಮಹೇಶ್​ ಬಾಬು-ರಾಜಮೌಳಿ ಹೊಸ ಚಿತ್ರದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಕಥೆ; ಏನಿದು ಹೊಸ ಗಾಸಿಪ್​?

Published On - 9:26 am, Mon, 9 August 21

Follow Us
TV9 Web
TV9 Web

TV9 Kannada

Read More
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಜೆಡಿಎಸ್​​ ಶಾಸಕ ಆಕ್ರೋಶ
ಡಿಸಿಯೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು: ಜೆಡಿಎಸ್​​ ಶಾಸಕ ಆಕ್ರೋಶ
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್
ಹಾಸನಾಂಬೆ ದರ್ಶನೋತ್ಸವ ಸಂಪನ್ನ: ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್