Mahesh Babu: ಮಹೇಶ್​ ಬಾಬುಗೆ ಶಿಲ್ಪಾ ಶೆಟ್ಟಿ ಆಂಟಿ? ಇದು ಹೇಗೆ ಸಾಧ್ಯ ಎಂದು ತಲೆ ಕೆರೆದುಕೊಂಡ ಫ್ಯಾನ್ಸ್​

Shilpa Shetty: ತ್ರಿವಿಕ್ರಮ್​ ಶ್ರೀನಿವಾಸ್​ ಅವರ ಸಿನಿಮಾಗಳಲ್ಲಿ ಫ್ಯಾಮಿಲಿ ಡ್ರಾಮಾ ಇದ್ದೇ ಇರುತ್ತದೆ. ಪ್ರತಿ ಪಾತ್ರಕ್ಕೂ ತೂಕವಿರುತ್ತದೆ. ಹಾಗಾಗಿ ಶಿಲ್ಪಾ ಶೆಟ್ಟಿ ನಿಭಾಯಿಸಲಿರುವ ಪಾತ್ರ ಕೂಡ ಅಷ್ಟೇ ಮಹತ್ವದ್ದಾಗಿರಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

Mahesh Babu: ಮಹೇಶ್​ ಬಾಬುಗೆ ಶಿಲ್ಪಾ ಶೆಟ್ಟಿ ಆಂಟಿ? ಇದು ಹೇಗೆ ಸಾಧ್ಯ ಎಂದು ತಲೆ ಕೆರೆದುಕೊಂಡ ಫ್ಯಾನ್ಸ್​
ಶಿಲ್ಪಾ ಶೆಟ್ಟಿ - ಮಹೇಶ್ ಬಾಬು

ಒಂದು ಕಾಲದಲ್ಲಿ ಬಹುಬೇಡಿಕೆಯ ಸ್ಟಾರ್​ ನಟಿಯಾಗಿ ಮೆರೆದವರು ಶಿಲ್ಪಾ ಶೆಟ್ಟಿ. ಕರಾವಳಿ ಮೂಲದ ಈ ಬೆಡಗಿಗೆ ಬಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಇದೆ. ಆದರೆ ಅವರು ಇತ್ತೀಚಿನ ದಿನಗಳಲ್ಲಿ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಯೋಗ ತರಬೇತುದಾರರಾಗಿ, ಕಿರುತೆರೆ ಕಾರ್ಯಕ್ರಮಗಳ ಜಡ್ಜ್​ ಆಗಿ, ಯಶಸ್ವಿ ಉದ್ಯಮಿಯಾಗಿ ಅವರು ಜೀವನ ಸಾಗಿಸುತ್ತಿದ್ದಾರೆ. ಈ ನಡುವೆ ಅವರು ಮತ್ತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗುತ್ತಾರೆ ಎಂಬ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಅಚ್ಚರಿ ಎಂದರೆ ಅವರು ಮಹೇಶ್​ ಬಾಬು ನಟನೆಯ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುವ ಸಾಧ್ಯತೆ ಇದೆಯಂತೆ.

ಹಲವು ವರ್ಷಗಳ ಬಳಿಕ ಪ್ರಿನ್ಸ್​ ಮಹೇಶ್​ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಜೊತೆಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರವನ್ನು ಎಸ್​ಎಸ್​ಎಂಬಿ28 ಎಂದು ಕರೆಯಲಾಗುತ್ತಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾಗೆ ಎಸ್​. ರಾಧಾಕೃಷ್ಣ ಬಂಡವಾಳ ಹೂಡಲಿದ್ದಾರೆ. ಇದೇ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಕೂಡ ನಟಿಸುತ್ತಾರೆ ಎಂಬ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

ಮಹೇಶ್​ ಬಾಬು ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸುತ್ತಾರೆ ಎಂದರೆ ಅದು ಅಚ್ಚರಿ ಪಡುವಂತಹ ವಿಷಯವೇನಲ್ಲ. ಆದರೆ ಹರಿದಾಡುತ್ತಿರುವ ಗಾಸಿಪ್​ ಏನೆಂದರೆ, ಈ ಸಿನಿಮಾದಲ್ಲಿ ಅವರು ಮಹೇಶ್​ ಬಾಬುಗೆ ಆಂಟಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ! ತ್ರಿವಿಕ್ರಮ್​ ಶ್ರೀನಿವಾಸ್​ ಅವರ ಸಿನಿಮಾಗಳಲ್ಲಿ ಫ್ಯಾಮಿಲಿ ಡ್ರಾಮಾ ಇದ್ದೇ ಇರುತ್ತದೆ. ಪ್ರತಿ ಪಾತ್ರಕ್ಕೂ ತೂಕವಿರುತ್ತದೆ. ಹಾಗಾಗಿ ಶಿಲ್ಪಾ ಶೆಟ್ಟಿ ನಿಭಾಯಿಸಲಿರುವ ಪಾತ್ರ ಕೂಡ ಅಷ್ಟೇ ಮಹತ್ವದ್ದಾಗಿರಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಆದರೆ ಸ್ಟಾರ್​ ನಟಿ ಶಿಲ್ಪಾ ಶೆಟ್ಟಿ ಅವರು ಮಹೇಶ್​ ಬಾಬುಗೆ ಆಂಟಿಯಾಗಿ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಆಂಟಿ ಪಾತ್ರ ಮಾಡುವ ಬಗ್ಗೆ ದೊಡ್ಡ ಮಟ್ಟದಲ್ಲಿ ಗಾಸಿಪ್​ ಕೇಳಿಬಂದಿದ್ದರೂ ಕೂಡ ಈ ಕುರಿತು ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಶಿಲ್ಪಾ ಶೆಟ್ಟಿ ಕೂಡ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2022ರ ಬೇಸಿಗೆಯಲ್ಲಿ ಈ ಸಿನಿಮಾವನ್ನು ತೆರೆಕಾಣಿಸಬೇಕು ಎಂದು ಗುರಿ ಇಟ್ಟುಕೊಳ್ಳಲಾಗಿದೆ. ಮಹೇಶ್​ ಬಾಬು ಜೊತೆ ಬೇರೆ ಯಾರೆಲ್ಲ ನಟಿಸುತ್ತಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ:

‘ದಿ ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜೊತೆ ಮಹೇಶ್​ ಬಾಬು ಅಥವಾ ದೇವರಕೊಂಡ ಸಿನಿಮಾ; ಹೊರಬಿತ್ತು ಹೊಸ ಸುದ್ದಿ

Shilpa Shetty: ಡಾನ್ಸ್​ ಮಾಡುವಾಗಲೇ ಎಡವಿದ ಶಿಲ್ಪಾ ಶೆಟ್ಟಿ; ಜರಾ ದೇಖ್​ ಕೆ ಚಲೋ ಎಂದ ವಿಡಿಯೋ ವೈರಲ್​