AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshay Kumar: ಅಕ್ಷಯ್ ಕುಮಾರ್ ಆಡಿದ ಒಂದೇ ಮಾತಿಗೆ ಬಾಯ್ಮುಚ್ಚಿದ ಕಪಿಲ್ ಶರ್ಮಾ

Kapil Sharma Show: ಕಪಿಲ್ ಶರ್ಮಾ ಶೋನಲ್ಲಿ ಬಾಲಿವುಡ್​ ನಟ ಅಕ್ಷಯ್ ಕುಮಾರ್ ಒಂದೇ ವಾಕ್ಯದಲ್ಲಿ ಕಪಿಲ್ ಶರ್ಮಾ ಅವರನ್ನು ಸುಮ್ಮನಾಗಿಸಿದ್ದಾರೆ. ಇದೇ ವೇಳೆ ನೋರಾ ಫತೇಹಿ ಜೊತೆ ಫ್ಲರ್ಟ್ ಮಾಡುತ್ತಿದ್ದ ಕಪಿಲ್​ರನ್ನು ಅಜಯ್ ದೇವಗನ್ ತಳ್ಳಿ ಮುಂದಕ್ಕೆ ಕಳಿಸಿದ್ದಾರೆ. ಈ ಪ್ರೋಮೊ ಮೂಲಕ ವೀಕ್ಷಕರಿಗೆ ಶೋ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Akshay Kumar: ಅಕ್ಷಯ್ ಕುಮಾರ್ ಆಡಿದ ಒಂದೇ ಮಾತಿಗೆ ಬಾಯ್ಮುಚ್ಚಿದ ಕಪಿಲ್ ಶರ್ಮಾ
ಕಪಿಲ್ ಶರ್ಮಾ, ಅಕ್ಷಯ್ ಕುಮಾರ್
TV9 Web
| Updated By: shivaprasad.hs|

Updated on: Aug 15, 2021 | 5:55 PM

Share

ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ‘ಕಪಿಲ್ ಶರ್ಮಾ ಶೋ’ನ ಹೊಸ ಸೀಸನ್ ಪ್ರಾರಂಭವಾಗುವುದಕ್ಕೆ ವೇದಿಕೆ ಸಜ್ಜಾಗಿದೆ. ಇದೀಗ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವಗನ್ ಸೇರಿದಂತೆ ಖ್ಯಾತ ನಾಮರು ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಪ್ರೋಮೋದಲ್ಲಿ ವೇದಿಕೆಗೆ ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಪ್ರವೇಶ ಮಾಡುತ್ತಿರುವುದನ್ನು ತೋರಿಸಲಾಗಿದ್ದು, ಅಕ್ಷಯ್ ಹಾಗೂ ಕಪಿಲ್ ಸಂಭಾಷಣೆಯ ತುಣುಕೂ ಇದೆ. ಎಲ್ಲರ ಗಮನ ಸೆಳೆದಿರುವ ಈ ಸಂಭಾಷಣೆಯಲ್ಲಿ ಎಲ್ಲರ ಕಾಲೆಳೆಯುವ ಕಪಿಲ್ ಶರ್ಮಾರನ್ನು ಅಕ್ಷಯ್ ಕಾಲೆಳೆದಿದ್ದಾರೆ. 

‘ಬೆಲ್​ಬಾಟಂ’ ಚಿತ್ರದ ಪ್ರಮೋಷನ್​ಗಾಗಿ ಅಕ್ಷಯ್ ಕಪಿಲ್ ಶರ್ಮಾ ಶೋಗೆ ಬಂದಿದ್ದಾರೆ. ಆಗ ಕಪಿಲ್ ಶರ್ಮಾ, ‘‘ನೀವು ರಾಕೆಟ್ ಓಡಿಸಿದ್ದಾಯ್ತು, ರೋಡ್ ರೋಲರ್ ಓಡಿಸಿದ್ದಾಯ್ತು. ಮುಂದೇನನ್ನು ಓಡಿಸ್ತೀರಿ?’’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರಿಸಿರುವ ಅಕ್ಷಯ್, ‘‘ಅದೆಲ್ಲಾ ಬಿಡಿ, ನಾನೀಗ ನಿಮ್ಮ ಶೋವನ್ನು ಓಡಿಸುತ್ತಿದ್ದೇನಲ್ಲಾ’’ ಎಂದು ಹೇಳಿ ಕಪಿಲ್ ಶರ್ಮಾ ಬಾಯ್ಮುಚ್ಚಿಸಿದ್ದಾರೆ. ಈ ಮೂಲಕ ಎಂದಿನಂತೆ ಈ ಬಾರಿಯೂ ಶೋದಲ್ಲಿ ಭರ್ಜರಿ ಸಂಭಾಷಣೆಗಳು, ಹಾಸ್ಯ ಇರುವುದನ್ನು ಪ್ರೋಮೊ ಖಚಿತಪಡಿಸಿದೆ.

View this post on Instagram

A post shared by Kapil Sharma (@kapilsharma)

ಅಜಯ್ ದೇವಗನ್ ತಮ್ಮ ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’ ಚಿತ್ರದ ಪ್ರಚಾರಕ್ಕಾಗಿ ಶೋಗೆ ಆಗಮಿಸಿದ್ದಾರೆ. ಭುಜ್ ಚಿತ್ರದಲ್ಲಿ ನಟಿಸಿರುವ ನೋರಾ ಫತೇಹಿ ಜೊತೆ ಕಪಿಲ್ ಶರ್ಮಾ ಫ್ಲರ್ಟ್ ಮಾಡಲು ಯತ್ನಿಸುತ್ತಿದ್ದಾಗ ಅಜಯ್ ದೇವಗನ್ ಹೋಗಿ ಕಪಿಲ್ ಶರ್ಮಾರನ್ನು ಮುಂದೆ ತಳ್ಳಿದ್ದಾರೆ. ಹೀಗೆ ಭರ್ಜರಿ ಹಾಸ್ಯವಿರುವುದನ್ನು ಪ್ರೋಮೊ ದೃಡಪಡಿಸಿದ್ದು, ಅಭಿಮಾನಿಗಳು ಶೋಗಾಗಿ ಮತ್ತಷ್ಟು ಕುತೂಹಲದಿಂದ ಕಾಯುವಂತಾಗಿದೆ.

ಕಪಿಲ್ ಶರ್ಮಾ ಶೋನ ಮೊದಲ ಎಪಿಸೋಡ್ ಆಗಸ್ಟ್ 21ರಂದು ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಈ ಶೋ ಪ್ರಸಾರವಾಗಲಿದೆ ಎಂದು ಚಾನೆಲ್ ತಿಳಿಸಿದೆ.

ಇದನ್ನೂ ಓದಿ:

Nayanthara: ಗುಟ್ಟಾಗಿ ಎಂಗೇಜ್​ಮೆಂಟ್ ಆದ ನಯನತಾರಾ ಮದುವೆಗೆ ಎಲ್ಲರನ್ನೂ ಕರೀತಾರಂತೆ

ಅರೆಸ್ಟ್​ ಆದ ಬಿಗ್​ ಬಾಸ್​ ಸ್ಪರ್ಧಿಗೆ ಶಾಕ್​; ನಟಿಯ ಜತೆಗೆ ಬಾಯ್​ಫ್ರೆಂಡ್ಅನ್ನೂ ಜೀಪು ಹತ್ತಿಸಿದ ಪೊಲೀಸರು ​

(Akshay Kumar shuts Kapil Sharma mouth with a single sentence in Kapil Sharma Show latest promo)