AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nayanthara: ಗುಟ್ಟಾಗಿ ಎಂಗೇಜ್​ಮೆಂಟ್ ಆದ ನಯನತಾರಾ ಮದುವೆಗೆ ಎಲ್ಲರನ್ನೂ ಕರೀತಾರಂತೆ

Vighnesh Shivan: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಕಾಲಿವುಡ್ ನಟಿ ನಯನತಾರಾ ಕೊನೆಗೂ ಎಂಗೇಜ್​ಮೆಂಟ್ ಕುರಿತು ಮೌನ ಮುರಿದಿದ್ದಾರೆ. ಗೆಳೆಯ ವಿಘ್ನೇಶ್ ಶಿವನ್ ಜೊತೆ ನಿಶ್ಚಿತಾರ್ಥವಾದದ್ದನ್ನು ಅವರು ಸ್ಪಷ್ಟಪಡಿಸಿದ್ದಾರೆ.

Nayanthara: ಗುಟ್ಟಾಗಿ ಎಂಗೇಜ್​ಮೆಂಟ್ ಆದ ನಯನತಾರಾ ಮದುವೆಗೆ ಎಲ್ಲರನ್ನೂ ಕರೀತಾರಂತೆ
ನಯನತಾರಾ ಮತ್ತು ವಿಘ್ನೇಶ್ ಶಿವನ್
TV9 Web
| Updated By: shivaprasad.hs|

Updated on: Aug 15, 2021 | 4:34 PM

Share

ತಮಿಳಿನ ಲೇಡಿ ಸೂಪರ್​ ಸ್ಟಾರ್ ಎಂದು ಕರೆಯಲ್ಪಡುವ ನಟಿ ನಯನತಾರಾ ಮತ್ತು ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಶಿವನ್ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಕುರಿತು ನಯನತಾರಾ ಕೊನೆಗೂ ಮೌನ ಮುರಿದಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಒಂದು ಸಮಾಧಾನವನ್ನೂ ಹೇಳಿದ್ದಾರೆ. ಖಾಸಗಿ ಚಾನೆಲ್ ಒಂದರ ಕಾರ್ಯಕ್ರಮದಲ್ಲಿ ನಯನತಾರಾ ಈ ಕುರಿತು ಮಾತನಾಡಿದ್ದಾರೆ. ಅವರು ಮತ್ತು ವಿಘ್ನೇಶ್ ಶಿವನ್ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರಂತೆ. ನಯನತಾರಾ ಪ್ರಕಾರ ನಿಶ್ಚಿತಾರ್ಥ ತೀರಾ ಖಾಸಗಿ ಕಾರ್ಯಕ್ರಮವಾದ್ದರಿಂದ ಯಾರಿಗೂ ತಿಳಿಸಿರಲಿಲ್ಲವಂತೆ. ಆದರೆ ಮದುವೆಯನ್ನು ಹೀಗೆ ಗುಟ್ಟಾಗಿ ಆಗುವುದಿಲ್ಲ ಎಂದು ಆಶ್ವಾಸನೆ ನೀಡಿರುವ ನಯನತಾರಾ, ಅಭಿಮಾನಿಗಳಿಗೆ ತಿಳಿಸಿಯೇ ಕಲ್ಯಾಣವಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.

‘ನೇಟ್ರಿಕನ್’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಖಾಸಗಿ ಚಾನೆಲ್ ಒಂದರಲ್ಲಿ ನಯನತಾರಾ ಎಂಗೇಜ್​ಮೆಂಟ್ ಆದ ಸಂದರ್ಭದ ಬಗ್ಗೆ ಮಾತನಾಡಿದ್ದಾರೆ. ‘‘ನಿಶ್ಚಿತಾರ್ಥವಾಗುವಾಗ ಕೇವಲ ಎರಡೂ ಕುಟುಂಬದ ಆಪ್ತವರ್ಗದವರು ಮಾತ್ರ ಭಾಗವಹಿಸಿದ್ದರು. ಮದುವೆಯಾಗುವಾಗ ಅಭಿಮಾನಿಗಳಿಗೆ ತಿಳಿಸಿಯೇ ಮದುವೆಯಾಗುತ್ತೇವೆ. ಆದರೆ ಇನ್ನೂ ನಾವು ಮದುವೆಯ ದಿನಾಂಕವನ್ನು ನಿಗದಿಗೊಳಿಸಿಲ್ಲ’’ ಎಂದು ತಿಳಿಸಿದ್ದಾರೆ. ‘ನೇಟ್ರಿಕನ್’ ಚಿತ್ರದ ಮೂಲಕ ವಿಘ್ನೇಶ್ ಶಿವನ್ ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ ದೃಷ್ಟಿದೋಷ ಹೊಂದಿರುವ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಯನತಾರಾ ಅವರ ಸಂದರ್ಶನದ ಒಂದು ಭಾಗ ಇಲ್ಲಿದೆ:

ವಿಘ್ನೇಶ್ ಶಿವನ್ ಈ ಮೊದಲು ಹಂಚಿಕೊಂಡಿದ್ದ ಚಿತ್ರವೊಂದರ ಪ್ರಕಾರ ಈರ್ವರೂ ಮಾರ್ಚ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಇದನ್ನು ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ. ಈಗ ನಯನತಾರಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ಮೊದಲು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದ ಚಿತ್ರ:

ವಿಘ್ನೇಶ್ ಶಿವನ್ ಹಾಗೂ ನಯನತಾರಾ ‘ಕಾತುವಾಕುಲ ರೆಂಡು ಕಾದಲ್’ ಚಿತ್ರಕ್ಕಾಗಿ ಜೊತೆಯಾಗಿದ್ದರು. ಈ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ ಹಾಗೂ ವಿಜಯ್ ಸೇತುಪತಿ ನಟಿಸಲಿದ್ದಾರೆ. ಕೊರೊನಾ ಕಾರಣದಿಂದ ಈ ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿದೆ. ವಿಘ್ನೇಶ್ ಶಿವನ್ ತಮಿಳಿನ ಖ್ಯಾತ ಸಾಹಿತಿ, ನಿರ್ದೇಶಕ ಹಾಗೂ ನಟರಾಗಿದ್ದಾರೆ.

ಇದನ್ನೂ ಓದಿ:

Nayanthara: ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ಕುರಿತು ಮಾತನಾಡಿ, ಈಗ ಹೊಸ ಸಂಗಾತಿಯೊಂದಿಗೆ ಕಾಣಿಸಿಕೊಂಡ ನಯನತಾರಾ

‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್​

(Nayanthara assures that she will definitely tells fans about her wedding with Vighnesh Shivan)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!