AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nayanthara: ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ಕುರಿತು ಮಾತನಾಡಿ, ಈಗ ಹೊಸ ಸಂಗಾತಿಯೊಂದಿಗೆ ಕಾಣಿಸಿಕೊಂಡ ನಯನತಾರಾ

Vignesh Shivan: ಇತ್ತೀಚೆಗಷ್ಟೇ ನಯನತಾರಾ ತಮ್ಮ ಮತ್ತು ವಿಘ್ನೇಶ್ ಶಿವನ್ ಸಂಬಂಧದ ಬಗ್ಗೆ ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡಿದ್ದು ಸುದ್ದಿಯಾಗಿತ್ತು. ಈಗ ಹೊಸ ಚಿತ್ರದಲ್ಲಿ ನಯನತಾರಾ ನೂತನ ಸಂಗಾತಿಯೊಂದಿಗಿರುವ ವಿಡಿಯೊ ಸುದ್ದಿಯಾಗುತ್ತಿದೆ.

Nayanthara: ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ಕುರಿತು ಮಾತನಾಡಿ, ಈಗ ಹೊಸ ಸಂಗಾತಿಯೊಂದಿಗೆ ಕಾಣಿಸಿಕೊಂಡ ನಯನತಾರಾ
ನಯನತಾರಾ
Follow us
TV9 Web
| Updated By: shivaprasad.hs

Updated on:Aug 12, 2021 | 11:22 AM

ಕೆಲ ದಿನಗಳಿಂದ ನಟಿ ನಯನತಾರಾ ಮತ್ತು ಅವರ ಗೆಳೆಯ ವಿಘ್ನೇಶ್ ಶಿವನ್ ಜೊತೆಗಿನ ನಿಶ್ಚಿತಾರ್ಥದ ಬಗ್ಗೆ ವದಂತಿಗಳು ಕೇಳಿಬರುತ್ತಿವೆ. ವಿಜಯ್ ಟಿವಿಯ ಸಂದರ್ಶನದ ಪ್ರೋಮೋ ಈ ಅನುಮಾನ ಹುಟ್ಟುಹಾಕಿದೆ. ಈ ನಡುವೆ ನಯನತಾರಾ ಮತ್ತೊಬ್ಬ ಸಂಗಾತಿಯೊಂದಿಗಿರುವ ವಿಡಿಯೊ ಬಿಡುಗಡೆಯಾಗಿದೆ. ಇದು ರಿಯಲ್​ನಲ್ಲಲ್ಲ; ರೀಲ್​ನಲ್ಲಿ.  ಹೌದು. ಆಕೆಯ ಮುಂದಿನ ಚಿತ್ರದ ತೆರೆಯ ಹಿಂದಿನ ವಿಡಿಯೋವನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಅದರಲ್ಲಿ ನಯನತಾರಾ ತಮ್ಮ ತೆರೆಯ ಮೇಲಿನ ಸಂಗಾತಿ ಸ್ಕೂಬಿಯೊಂದಿಗೆ ಇರುವುದನ್ನು ನೀವು ನೋಡಬಹುದು. ಸ್ಕೂಬಿ ಎಂದರೆ, ನೇಟ್ರಿಕನ್  ಚಿತ್ರದಲ್ಲಿ ನಯನತಾರಾ ಅವರೊಂದಿಗೆ ಕಾಣಿಸಿಕೊಳ್ಳಲಿರುವ ಶ್ವಾನ. ಅದು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದು, ನಯನತಾರಾ ದೃಷ್ಟಿಹೀನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆಯ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಆಕೆಯ ಮಾರ್ಗದರ್ಶಕನಾಗಿ ಸ್ಕೂಬಿ ಕಾಣಿಸಿಕೊಳ್ಳಲಿದೆ.

ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ನಿರ್ಮಿಸಿರುವ ನೇಟ್ರಿಕನ್ ಚಿತ್ರದ ಬಿಡುಗಡೆ ಯಾವಾಗ?

ಆಗಸ್ಟ್ 13 ರಂದು ಡಿಸ್ನಿ+ಹಾಟ್‌ಸ್ಟಾರ್ ವಿಐಪಿಯಲ್ಲಿ ನೇಟ್ರಿಕನ್ ಬಿಡುಗಡೆಯಾಗಲಿದೆ. ಇದೀಗ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಕನ್ನಡದ ಸೂಪರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಯನತಾರಾ, ತನ್ನ ತೆರೆಯ ಮೇಲಿನ ಸಾಕು ನಾಯಿ ‘ಸ್ಕೂಬಿ’ಯೊಂದಿಗೆ ಸೆಟ್‌ನಲ್ಲಿ ಕಾಣಬಹುದು. ನಯನತಾರಾ ಮತ್ತು ಸ್ಕೂಬಿಯ ಬಂಧನವನ್ನು ತೋರಿಸುತ್ತಿರುವ ಈ ಪ್ರೊಮೊ ಎಲ್ಲರ ಮನಗೆದ್ದಿದೆ. ಮಿಲಿಂದ್ ರಾವ್ ನಿರ್ದೇಶಿಸಿರುವ ಈ ಚಿತ್ರವು ಪೊಲೀಸ್ ಪ್ರಕರಣದಲ್ಲಿ ಸಾಕ್ಷಿಯಾಗಿರುವ ದೃಷ್ಟಿಹೀನ ವ್ಯಕ್ತಿಯ ಸುತ್ತ ಸುತ್ತುತ್ತದೆ. ಇದರಲ್ಲಿ ನಯನತಾರಾ ದೃಷ್ಟಿಹೀನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಯನತಾರಾ ಮತ್ತು ಸ್ಕೂಬಿಯ ತೆರೆಯ ಹಿಂದಿನ ವಿಡಿಯೊ ಇಲ್ಲಿದೆ:

ನೆಟ್ರಿಕನ್ ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಕೊರೊನಾ ಕಾರಣದಿಂದ ಒಟಿಟಿಯಲ್ಲಿ ಚಿತ್ರ ತೆರೆಕಾಣಲಿದ್ದು, ಡಿಸ್ನಿ+ಹಾಟ್ ಸ್ಟಾರ್ ವಿಐಪಿಯಲ್ಲಿ ನಾಳೆ ಬಿಡುಗಡೆಯಾಗಲಿದೆ. ನಯನತಾರಾರಲ್ಲದೆ, ನೇಟ್ರಿಕನ್​ನಲ್ಲಿ ಅಜ್ಮಲ್ ಅಮೀರ್, ಮಣಿಕಂದನ್ ಪಟ್ಟಂಬಿ ಮತ್ತು ಸರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಯನತಾರಾ ಅವರ ಗೆಳೆಯ ವಿಘ್ನೇಶ್ ಶಿವನ್ ‘ರೌಡಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಚೊಚ್ಚಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಜೊತೆಗೆ ಚಿತ್ರದ ಶೀರ್ಷಿಕೆ ಗೀತೆಗಾಗಿ ವಿಘ್ನೇಶ್ ಶಿವನ್ ಸಾಹಿತ್ಯವನ್ನೂ ಬರೆದಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಕಾಥು ವಾಕುಲ ರೆಂಡು ಕಾದಲ್​’ ಚಿತ್ರವನ್ನು ವಿಘ್ನೇಶ್​ ನಿರ್ದೇಶಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ನಯನತಾರಾ, ವಿಜಯ್​ ಸೇತುಪತಿ, ಸಮಂತಾ ಅಕ್ಕಿನೇನಿ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ:

‘ಸೂಪರ್’ ಚಿತ್ರದ ನಟಿ ನಯನತಾರಾ ಎಂಗೇಜ್​​ಮೆಂಟ್​; ಇಲ್ಲಿದೆ ರಿಂಗ್​ ಜೊತೆ ವಿಡಿಯೋ ಸಾಕ್ಷಿ

ನಿಮ್ಮದು ಸುದೀಪ್​ ಜಾತಿಯೇ ಆಗಿದ್ರಿಂದ ಬಿಗ್​ಬಾಸ್​ ಟ್ರೋಫಿ ಸಿಕ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಮಂಜು ಪಾವಗಡ

(Vignesh Shivan producing Nayanthara starring new movie Netrikan will release on tomorrow August 13th)

Published On - 11:19 am, Thu, 12 August 21

ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ