Meghana Raj: ಮೇಘನಾ ರಾಜ್ ಅವರನ್ನು ಚಿರು ಏನೆಂದು ಕರೆಯುತ್ತಿದ್ದರು?

Chiranjeevi Sarja: ಮೇಘನಾ ರಾಜ್ ಅವರು ಚಿರಂಜೀವಿ ಅವರ ಬಗ್ಗೆ ಮಾತನಾಡಿದ ಹಳೆಯ ವಿಡಿಯೊಗಳನ್ನು ಅಭಿಮಾನಿಗಳು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ವೈರಲ್ ಆದ ಮೇಘನಾ ಅವರ ಹಳೆಯ ಸಂದರ್ಶನದ ತುಣುಕೊಂದು ಇಲ್ಲಿದೆ.

Meghana Raj: ಮೇಘನಾ ರಾಜ್ ಅವರನ್ನು ಚಿರು ಏನೆಂದು ಕರೆಯುತ್ತಿದ್ದರು?
ಮೇಘನಾ ರಾಜ್- ಚಿರಂಜೀವಿ ಸರ್ಜಾ
Follow us
TV9 Web
| Updated By: shivaprasad.hs

Updated on: Aug 12, 2021 | 10:27 AM

ಕನ್ನಡ ಚಿತ್ರರಂಗದ ತಾರಾ ಜೋಡಿಗಳಲ್ಲಿ ಅಭಿಮಾನಿಗಳ ಮನಸೆಳೆಯುತ್ತಿದ್ದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಗಳನ್ನು ಅಭಿಮಾನಿಗಳು ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. ಜೂನಿಯರ್ ಚಿರು ಚಿತ್ರವನ್ನು ಮೇಘನಾ ಹಂಚಿಕೊಂಡಾಗ ಚಿರಂಜೀವಿ ಸರ್ಜಾ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಎಲ್ಲರೂ ಬೇಸರ ಪಟ್ಟುಕೊಳ್ಳುತ್ತಾರೆ. ಅದಕ್ಕೆ ಸಮಾಧಾನದ ರೂಪದಲ್ಲಿ ಚಿರು ಹಾಗೂ ಮೇಘನಾ ಜೊತೆಗಿದ್ದ, ಮಾತನಾಡಿದ್ದ ವಿಡಿಯೊಗಳನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆ ಮೂಲಕ ಈ ತಾರಾ ಜೋಡಿಗಳನ್ನು ನೆನೆಸಿಕೊಳ್ಳುತ್ತಾರೆ.

ಇತ್ತೀಚೆಗೆ ಮತ್ತೆ ಹಂಚಿಕೊಳ್ಳಲಾದ ಹಳೆಯ ವಿಡಿಯೊ ತುಣುಕೊಂದರಲ್ಲಿ ಮೇಘನಾ ರಾಜ್ ಚಿರು ಬಗ್ಗೆ ಹಾಗೂ ತಮ್ಮ ಪ್ರೇಮ ಕಥೆ ಪ್ರಾರಂಭವಾದದ್ದನ್ನು ತಿಳಿಸಿದ್ದಾರೆ. ಜೊತೆಗೆ ಚಿರು ತಮ್ಮನ್ನು ಏನೆಂದು ಕರೆಯುತ್ತಿದ್ದರು ಎಂದೂ ಮೇಘನಾ ತಿಳಿಸಿದ್ದಾರೆ. ಈ ವಿಡಿಯೊ ಪುನಃ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮತ್ತೆ ತಮ್ಮ ನೆಚ್ಚಿನ ಜೋಡಿಯನ್ನು ನೋಡಿ, ಸ್ಮರಿಸುತ್ತಿದ್ದಾರೆ.

ಚಿರು ಮತ್ತು ಮೇಘನಾ ಅವರ ಪ್ರೀತಿ ಪ್ರಾರಂಭವಾದದ್ದು ಹೇಗೆ?

ಸಂದರ್ಶನವೊಂದರಲ್ಲಿ ಮೇಘನಾ ರಾಜ್ ಮತ್ತು ಚಿರು ಅವರ ನಡುವೆ ಯಾರು ಮೊದಲು ಪ್ರಪೋಸ್ ಮಾಡಿದ್ದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮೇಘನಾ ಅವರು ಹೇಳಿದಂತೆ, ಚಿರು ಅವರೇ ಮೊದಲು ಪ್ರಪೋಸ್ ಮಾಡಿದ್ದಂತೆ. ಜೊತೆಗೆ ಚಿರು ಪ್ರಪೋಸ್ ಮಾಡಿದ್ದೂ ವಿಭಿನ್ನವಾಗಿ ಎನ್ನುತ್ತಾರೆ ಅವರು. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನೀನೂ ನನ್ನನ್ನು ಪ್ರೀತಿಸಬೇಕು ಎಂದರಂತೆ. ಮೇಘನಾ ಅವರಿಗೂ ಇಷ್ಟವಿದ್ದ ಕಾರಣ ಖುಷಿಯಿಂದ ಒಪ್ಪಿದರಂತೆ.

ಚಿರು ಅವರು ಏನೆಂದು ಕರೆಯುತ್ತಿದ್ದರು ಎಂಬುದನ್ನೂ ಮೇಘನಾ ಆ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಅವರ ತಂದೆ ತಾಯಿ ಬಿಟ್ಟರೆ ಚಿರು ಮಾತ್ರ ಅವರನ್ನು ‘ಕುಟ್ಟಿಮಾ’ ಎಂಬ ಹೆಸರಿನಿಂದ ಕರೆಯುತ್ತಿದ್ದರಂತೆ. ಚಿರು ಮತ್ತು ಮೇಘನಾ ಅವರ ನೆಚ್ಚಿನ ಅಡ್ಡದ ಕುರಿತೂ ಗುಟ್ಟುಬಿಟ್ಟುಕೊಟ್ಟಿದ್ದ ಮೇಘನಾ, ಮನೆಯೇ ತಮ್ಮ ನೆಚ್ಚಿನ ಸ್ಥಳ ಎಂದಿದ್ದರು. ಹೊರಗೆ ಸುತ್ತಾಡುವುದಕ್ಕಿಂತ ಮನೆಯಲ್ಲಿ ಕುಳಿತು ಸಿನಿಮಾ ನೋಡುವುದು ಇಬ್ಬರಿಗೂ ಇಷ್ಟ ಎಂದು ಅವರು ಹೇಳಿಕೊಂಡಿದ್ದರು.

ಇತ್ತೀಚೆಗೆ ಹಂಚಿಕೊಳ್ಳಲಾದ ವಿಡಿಯೊ:

ಈ ಜೋಡಿ ಒಂದು ದಶಕಕ್ಕೂ ಹೆಚ್ಚು ಕಾಲ ಸ್ನೇಹಿತರಾಗಿದ್ದವರು. ನಂತರ ಈರ್ವರೂ ಮದುವೆಯಾಗಲು ತೀರ್ಮಾನಿಸಿ 2018ರ ಏಪ್ರಿಲ್ 29 ಹಾಗೂ, ಮೇ 2ರಂದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ದುರದೃಷ್ಟವಶಾತ್ 2020ರ ಜೂನ್ 7ರಂದು ಹೃದಯಾಘಾತದಿಂದ ಚಿರು ಅಗಲಿದರು.

ಜೂನಿಯರ್ ಚಿರುಗೆ 9 ತಿಂಗಳು ಪೂರ್ಣಗೊಂಡ ಹರುಷವನ್ನು ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಮೇಘನಾ, ಆ ಖುಷಿಯಲ್ಲಿ ತಾವು ಮತ್ತೆ ಕ್ಯಾಮೆರಾ ಎದುರಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ:

ಶಿವರಾಜ್​ಕುಮಾರ್​ ಮನೆ ಮುಂದೆ ನಿಂತು ಮನದ ಮಾತು ಹಂಚಿಕೊಂಡ ಬಿಗ್​ ಬಾಸ್​ ವಿನ್ನರ್​ ಮಂಜು

ಅಂದು ‘ಮಗಳು ಜಾನಕಿ’ಯಲ್ಲಿ ಜಡ್ಜ್​, ಇಂದು ಹೊಸ ಸೀರಿಯಲ್​ನಲ್ಲಿ ಡಾಕ್ಟರ್​; ಅರ್ಚನಾ ಉಡುಪ ಹೊಸ ಜರ್ನಿ

(Meghana Raj talks about love story with Chiru in an interview and it is remembered by Fans)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್