AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ‘ಮಗಳು ಜಾನಕಿ’ಯಲ್ಲಿ ಜಡ್ಜ್​, ಇಂದು ಹೊಸ ಸೀರಿಯಲ್​ನಲ್ಲಿ ಡಾಕ್ಟರ್​; ಅರ್ಚನಾ ಉಡುಪ ಹೊಸ ಜರ್ನಿ

Kannada Serials: ಕಪ್ಪು ಮೈಬಣ್ಣವನ್ನು ಬಹುತೇಕರು ಜರಿಯುತ್ತಾರೆ. ಬಿಳಿ ತ್ವಚೆಯ ಮೇಲೆ ಎಲ್ಲರಿಗೂ ವ್ಯಾಮೋಹ. ಅಂಥ ಕಾನ್ಸೆಪ್ಟ್​​ಗೆ ಸವಾಲೊಡ್ಡುವಂತಹ ಕಥೆಯನ್ನು ‘ಲಕ್ಷಣ’ ಧಾರಾವಾಹಿ ಹೊಂದಿದೆ.

ಅಂದು ‘ಮಗಳು ಜಾನಕಿ’ಯಲ್ಲಿ ಜಡ್ಜ್​, ಇಂದು ಹೊಸ ಸೀರಿಯಲ್​ನಲ್ಲಿ ಡಾಕ್ಟರ್​; ಅರ್ಚನಾ ಉಡುಪ ಹೊಸ ಜರ್ನಿ
ಅಂದು ‘ಮಗಳು ಜಾನಕಿ’ಯಲ್ಲಿ ಜಡ್ಜ್​, ಇಂದು ಹೊಸ ಸೀರಿಯಲ್​ನಲ್ಲಿ ಡಾಕ್ಟರ್​; ಅರ್ಚನಾ ಉಡುಪ ಹೊಸ ಜರ್ನಿ
TV9 Web
| Edited By: |

Updated on: Aug 12, 2021 | 9:27 AM

Share

ಮೊದಲು ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ, ನಂತರ ಬೇರೊಂದು ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡ ಹಲವರು ಯಶಸ್ಸು ಕಂಡಿದ್ದಾರೆ. ಸಿಂಗರ್​ ಆಗಿದ್ದವರು ನಟನೆಗೆ ಬಂದು ಸಾಧನೆ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ಈಗ ಗಾಯಕಿ ಅರ್ಚನಾ ಉಡುಪ (Archana Udupa) ಅವರು ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಗಾಯಕಿಯಾಗಿ ಮಿಂಚಿರುವ ಅವರು ಹಲವು ಸುಮಧುರ ಗೀತೆಗಳನ್ನು ನೀಡಿದ್ದಾರೆ. ಆದರೆ ಅವರಿಗೆ ನಟನೆ ಹೊಸದು. ಈ ಹಿಂದೆ ‘ಮಗಳು ಜಾನಕಿ’ ಸೀರಿಯಲ್​ನಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ಅರ್ಚನಾ ಈಗ ‘ಲಕ್ಷಣ’ ಸೀರಿಯಲ್​ನಲ್ಲೂ (Lakshana Kannada Serial) ಒಂದು ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಸ್ವತಃ ಅವರೇ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಲಕ್ಷಣ ಧಾರಾವಾಹಿ ಆರಂಭ ಆಗಿದೆ. ಒಂದು ಡಿಫರೆಂಟ್ಸ್​ ಕಾನ್ಸೆಪ್ಟ್​ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಜಗನ್​ ಮತ್ತು ವಿಜಯಲಕ್ಷ್ಮೀ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸೀರಿಯಲ್​​ನಲ್ಲಿ ಅರ್ಚನಾ ಉಡುಪ ಅವರಿಗೆ ಡಾಕ್ಟರ್​ ಪಾತ್ರವನ್ನು ನೀಡಲಾಗಿದೆ.

‘ಇಷ್ಟು ವರ್ಷಗಳಲ್ಲಿ ನಟಿಸಲು ಬಹಳಷ್ಟು ಅವಕಾಶಗಳು ನನ್ನನ್ನು ಅರಸಿ ಬಂದಿದ್ದರೂ ಯಾಕೋ ಮನಸ್ಸು ಒಪ್ಪುತ್ತಿರಲಿಲ್ಲ. ಮಗಳು ಜಾನಕಿ ಧಾರಾವಾಹಿಯಲ್ಲಿ ಜಡ್ಜ್ ಆಗಿ ಒಂದು ಪುಟ್ಟ ಪಾತ್ರ ಮಾಡಿ ಸೀತಾರಾಮ್​ ಸರ್ ಹತ್ತಿರ ಸೈ ಅನ್ನಿಸಿಕೊಂಡಿದ್ದೆ ಕೂಡ. ಕೊನೆಗೂ ಮನಸ್ಸಿಗೆ ಹಿಡಿಸುವಂಥ ಚಂದದ ಒಂದು ಪಾತ್ರ ದೊರೆತು, ನಟನೆಗೆ ಇಳಿದದ್ದೂ ಆಯಿತು. ನನ್ನ ಹೊಸ ಅವತಾರವನ್ನು, ಪಾತ್ರವನ್ನು ನೋಡಿ, ಹೇಗಿತ್ತು ಎಂದು ತಿಳಿಸಿ. ಲಕ್ಷಣ ಎಂಬ ಹೊಚ್ಚಹೊಸ ಧಾರಾವಾಹಿಯಲ್ಲಿ ನಾನು ಡಾ. ತುಳಸಿಯಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಅರ್ಚನಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕಲರ್ಸ್​ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9.30ಕ್ಕೆ ಹೊಸ ಧಾರಾವಾಹಿ ‘ಲಕ್ಷಣ’ ಪ್ರಸಾರ ಆಗುತ್ತಿದೆ. ಆ.9ರಿಂದ ಈ ಸೀರಿಯಲ್​ ಶುರುವಾಗಿದೆ. ಕಪ್ಪು ಮೈಬಣ್ಣವನ್ನು ಬಹುತೇಕರು ಜರಿಯುತ್ತಾರೆ. ಬಿಳಿ ತ್ವಚೆಯ ಮೇಲೆ ಎಲ್ಲರಿಗೂ ವ್ಯಾಮೋಹ. ಅಂಥ ಕಾನ್ಸೆಪ್ಟ್​​ಗೆ ಸವಾಲೊಡ್ಡುವಂತಹ ಕಥೆಯನ್ನು ‘ಲಕ್ಷಣ’ ಧಾರಾವಾಹಿ ಹೊಂದಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?

ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್​ಗೆ ಖುಷಿಯಾಗೋ ವಿಚಾರ

(Singer Archana Udupa plays a major role in new serial Lakshana on Colors Kannada)

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ