‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್​

ಎ.ಪಿ. ಅರ್ಜುನ್​ ಜೊತೆ ಧ್ರುವ ಸರ್ಜಾ ಮಾಡುತ್ತಿರುವ ಹೊಸ ಸಿನಿಮಾ ಮುಹೂರ್ತ ನೆರವೇರಿದೆ. ಈ ಸಂದರ್ಭದಲ್ಲಿ ನಂದಕಿಶೋರ್​ ಕೂಡ ಹಾಜರಿದ್ದರು. ನಂದಕಿಶೋರ್​ ಮತ್ತು ಧ್ರುವ ಸರ್ಜಾ ಜೊತೆಯಾಗಿ ನಿಂತು ಕೆಲವು ಊಹಾಪೋಹಗಳಿಗೆ ಫುಲ್​ಸ್ಟಾಪ್​ ಹಾಕಿದ್ದಾರೆ.

‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್​
| Updated By: ಮದನ್​ ಕುಮಾರ್​

Updated on: Aug 15, 2021 | 4:02 PM

ನಟ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ನಂದಕಿಶೋರ್​ (Nanda Kishore) ಕಾಂಬಿನೇಷನ್​ನಲ್ಲಿ ‘ಪೊಗರು’ ಚಿತ್ರ ಮೂಡಿಬಂದಿತ್ತು. ಆ ಸಿನಿಮಾ ಬಳಿಕ ಇಬ್ಬರೂ ಮತ್ತೆ ಜೊತೆಯಾಗಿ ‘ದುಬಾರಿ’ (Dubari) ಚಿತ್ರ ಮಾಡುವುದಾಗಿ ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ. ಅಷ್ಟೇ ಅಲ್ಲ, ‘ದುಬಾರಿ’ ಸಿನಿಮಾವನ್ನೇ ಕೈ ಬಿಡಲಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈಗ ಅದಕ್ಕೆಲ್ಲ ನಂದಕಿಶೋರ್​ ಮತ್ತು ಧ್ರುವ ಸರ್ಜಾ ಪೂರ್ಣವಿರಾಮ ಇಟ್ಟಿದ್ದಾರೆ. ‘ನಮ್ಮ ದುಬಾರಿ ಸಿನಿಮಾ ನಿಂತುಹೋಗಿಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

‘ದುಬಾರಿ ನಿಂತಹೋಯ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ನಮ್ಮ ಸಿನಿಮಾ ನಿಂತು ಹೋಗಿದೆ ಅಂತ ನಾವು ಯಾರೂ ಹೇಳಿಲ್ಲ. ಧ್ರುವ ಸರ್ಜಾ ನಮ್ಮ ಮನೆ ಮಗು. ನಮ್ಮ ಮಕ್ಕಳನ್ನು ನಾವು ಯಾವತ್ತೂ ಬಿಟ್ಟು ಕೊಡುವುದಿಲ್ಲ’ ಎಂದು ನಂದಕಿಶೋರ್​ ಹೇಳಿದ್ದಾರೆ. ‘ಒಂದೆರಡು ಸಿನಿಮಾ ಆದ್ಮೇಲೆ ಖಂಡಿತವಾಗಿಯೂ ನಂದಕಿಶೋರ್​ ಮತ್ತು ನಾನು ಜೊತೆಯಾಗಿ ಸಿನಿಮಾ ಮಾಡುತ್ತೇವೆ. ಲಾಕ್​ಡೌನ್​ ಕಾರಣದಿಂದ ನಮ್ಮ ಸಿನಿಮಾ ಸ್ವಲ್ಪ ಮುಂದಕ್ಕೆ ಹೋಗಿದೆ ಅಷ್ಟೇ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಇದನ್ನೂ ಓದಿ:

Martin: ಸ್ವಾತಂತ್ರ್ಯ ದಿನಾಚರಣೆಗೆ ಧ್ರುವ ಸರ್ಜಾ ಕೊಟ್ರು ಭರ್ಜರಿ ಗಿಫ್ಟ್; ಹೊಸ ಚಿತ್ರದ ಟೈಟಲ್, ಫಸ್ಟ್ ಲುಕ್ ರಿಲೀಸ್

ಇದು ಧ್ರುವ ಹವಾ; ಹಿಂದಿಗೆ ಡಬ್​ ಆದ ಪೊಗರು ಚಿತ್ರ, ನಾಲ್ಕೇ ದಿನಕ್ಕೆ ಇಷ್ಟೊಂದು ವೀವ್ಸ್​

Follow us
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ