ಧ್ರುವ ಸರ್ಜಾ-ಪ್ರೇಮ್​ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ; ಗಾಂಧಿನಗರದಲ್ಲಿ ಭರ್ಜರಿ ಮಾತುಕತೆ

ಧ್ರುವ ಸರ್ಜಾ-ಪ್ರೇಮ್​ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ; ಗಾಂಧಿನಗರದಲ್ಲಿ ಭರ್ಜರಿ ಮಾತುಕತೆ
ಪ್ರೇಮ್​, ಧ್ರುವ ಸರ್ಜಾ

ಒಂದು ಮಾಸ್​ ಕಮರ್ಷಿಯಲ್​ ಸಿನಿಮಾಗೋಸ್ಕರ ಪ್ರೇಮ್ ಮತ್ತು ಧ್ರುವ ಸರ್ಜಾ ಕೈ ಜೋಡಿಸಲಿದ್ದಾರೆ. ಈಗಾಗಲೇ ಅವರು ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಒಂದು ಸುತ್ತಿನ ಮಾತುಕತೆ ಕೂಡ ಮುಗಿಸಿದ್ದಾರೆ ಎನ್ನಲಾಗುತ್ತಿದೆ.

TV9kannada Web Team

| Edited By: Madan Kumar

Aug 03, 2021 | 8:21 AM

ನಟ ಧ್ರುವ ಸರ್ಜಾ (Dhruva Sarja) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗಾಗಲೇ ಅದ್ದೂರಿ, ಭರ್ಜರಿ, ಬಹದ್ದೂರ್​ ಸಿನಿಮಾಗಳ ಮೂಲಕ ಹಿಟ್​ ನೀಡಿರುವ ಅವರಿಗೆ ‘ಪೊಗರು’ ಚಿತ್ರದಿಂದ ನಿರೀಕ್ಷಿತ ಮಟ್ಟದ ಗೆಲುವು ಸಿಗಲಿಲ್ಲ. ‘ಪೊಗರು’ (Pogaru) ಸಿನಿಮಾದ ಬಳಿಕ ನಿರ್ದೇಶಕ ನಂದಕಿಶೋರ್​ ಜೊತೆ ಅವರು ‘ದುಬಾರಿ’ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ನಂತರದಲ್ಲಿ ಪ್ಲ್ಯಾನ್ ತಲೆಕೆಳಗಾಯಿತು. ಹಾಗಾದರೆ ಧ್ರುವ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ನಡುವೆ ಖ್ಯಾತ ನಿರ್ದೇಶಕ ಪ್ರೇಮ್​ (Prem) ಜೊತೆಗೆ ಧ್ರುವ ಸರ್ಜಾ ಕೈ ಜೋಡಿಸುತ್ತಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ಒಂದು ಮಾಸ್​ ಕಮರ್ಷಿಯಲ್​ ಸಿನಿಮಾಗೋಸ್ಕರ ಪ್ರೇಮ್ ಮತ್ತು ಧ್ರುವ ಸರ್ಜಾ ಕೈ ಜೋಡಿಸಲಿದ್ದಾರೆ. ಈಗಾಗಲೇ ಅವರು ಚಿತ್ರಕ್ಕೆ ಸಂಬಂಧಪಟ್ಟಂತೆ ಒಂದು ಸುತ್ತಿನ ಮಾತುಕತೆ ಕೂಡ ಮುಗಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ದೊಡ್ಡ ನಿರ್ಮಾಣ ಸಂಸ್ಥೆಯು ಇವರಿಬ್ಬರ ಕಾಂಬಿನೇಷನ್​ನ ಚಿತ್ರಕ್ಕೆ ಬಂಡವಾಳ ಹೂಡಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಪ್ರೇಮ್​ ಅವರು ಸದ್ಯ ‘ಏಕ್​ ಲವ್​ ಯಾ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಲಾಕ್​ಡೌನ್​ ಕಾರಣದಿಂದ ಆ ಸಿನಿಮಾದ ಕೆಲಸಗಳು ಕೊಂಚ ವಿಳಂಬ ಆಗಿದ್ದವು. ರಕ್ಷಿತಾ ಪ್ರೇಮ್​ ಸಹೋದರ ರಾಣ ನಟಿಸುತ್ತಿರುವ ಈ ಚಿತ್ರಕ್ಕೆ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್​ ನಾಯಕಿಯರು. ‘ಏಕ್​ ಲವ್​ ಯಾ’ ಬಳಿಕವೇ ಧ್ರುವ ಜೊತೆ ಪ್ರೇಮ್​ ಕೈ ಜೋಡಿಸುತ್ತಾರಾ ಅಥವಾ ಇನ್ನೂ ತಡವಾಗಲಿದೆಯಾ ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಇನ್ನು, ಧ್ರುವ ಸರ್ಜಾ ಕೈಯಲ್ಲೂ ಹಲವು ಪ್ರಾಜೆಕ್ಟ್​ಗಳಿವೆ. ತಮ್ಮ ಚೊಚ್ಚಲ ಸಿನಿಮಾ (ಅದ್ದೂರಿ) ನಿರ್ದೇಶಕ ಎ.ಪಿ. ಅರ್ಜುನ್​ ಜೊತೆ ಅವರು ಹೊಸ ಚಿತ್ರಕ್ಕಾಗಿ ಕೈ ಜೋಡಿಸುತ್ತಿದ್ದು, ಆ.15ರಂದು ಅದರ ಮುಹೂರ್ತ ನೆರವೇರಲಿದೆ. ‘ಜಗ್ಗುದಾದ’ ನಿರ್ದೇಶಕ ರಾಘವೇಂದ್ರ ಹೆಗಡೆ ಜೊತೆಗೂ ಧ್ರುವ ಒಂದು ಸಿನಿಮಾ ಮಾಡಬೇಕಿದೆ. ಈ ಎಲ್ಲ ಪ್ರಾಜೆಕ್ಟ್​ಗಳ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇವುಗಳ ಪೈಕಿ ಯಾವುದರ ಚಿತ್ರೀಕರಣವನ್ನು ಧ್ರುವ ಮೊದಲು ಆರಂಭಿಸುತ್ತಾರೆ ಎಂಬ ಕೌತುಕ ಈಗ ಮೂಡಿದೆ.

ಇದನ್ನೂ ಓದಿ:

Dhruva Sarja : ಧ್ರುವ ಸರ್ಜಾ ಬೌನ್ಸರ್​ಗೆ ಹಿಗ್ಗಾಮುಗ್ಗ ತರಾಟೆ, ನೂಕುನುಗ್ಗಲು ಜಟಾಪಟಿ

ಕೊವಿಡ್​ ಲಸಿಕೆ ಹಾಕಿಸಿಕೊಂಡ ಧ್ರುವ ಸರ್ಜಾ; ಬೈಸೆಪ್ಸ್​ ನೋಡಿ ದಂಗಾದ ಫ್ಯಾನ್ಸ್​

Follow us on

Related Stories

Most Read Stories

Click on your DTH Provider to Add TV9 Kannada