75ನೇ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಹಾಡು; ದೇಶಭಕ್ತಿಯ ಗಾನಸುಧೆಯನ್ನು ಸವಿಯಿರಿ

75ನೇ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಹಾಡು; ದೇಶಭಕ್ತಿಯ ಗಾನಸುಧೆಯನ್ನು ಸವಿಯಿರಿ

TV9 Web
| Updated By: Skanda

Updated on: Aug 15, 2021 | 11:05 AM

ಮಾತರಂ ಹಾಡಿನಲ್ಲಿ ಅನುರಾಧಾ ಪೌಡ್ವಾಲ್, ಶಂಕರ್ ಮಹಾದೇವನ್, ಶಾನ್, ಶ್ರೀನಿವಾಸ್, ಪ್ರಸೂನ್ ಜೋಶಿಯಂತಹ ಪ್ರಸಿದ್ಧ ವ್ಯಕ್ತಿಗಳು ಮತ್ತು ಪ್ರತಿಭಾ ಬಘೇಲ್, ಮೈಥಿಲಿ ಠಾಕೂರ್ ಅವರಂತಹ ಅತ್ಯಂತ ಜನಪ್ರಿಯ ಯುವ ಗಾಯಕರು ಇದ್ದಾರೆ.

ಈ ಬಾರಿ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಇಡೀ ದೇಶದ ಪಾಲಿಗೆ ವಿಶೇಷವಾಗಿದೆ. ಇದಕ್ಕೆ ಮತ್ತಷ್ಟು ಮೆರಗು ನೀಡುವ ಸಲುವಾಗಿ ಭಾರತೀಯ ಸಂಗೀತ ನಿರ್ದೇಶಕರ ಸಂಘದಿಂದ ಹೊಸ ಹಾಡು ಬಿಡುಗಡೆ ಮಾಡಲಾಗಿದೆ. ಮೂವರು ಮಹಿಳಾ ಸಂಗೀತಗಾರರು ಒಟ್ಟಾಗಿ ಈ ವಿಭಿನ್ನ ದೇಶಭಕ್ತಿ ಗೀತೆಯನ್ನು ರಚಿಸಿದ್ದು, ಸುಪ್ರಸಿದ್ಧ ಗಾಯಕರು ಇದಕ್ಕೆ ಧ್ವನಿಯಾಗಿದ್ದಾರೆ. ಮಾತರಂ ಗೀತೆಗೆ ಸಂಗೀತವನ್ನು ಸಂಗೀತ ಪಂತ್, ವಿಜಯ ಶಂಕರ್ ಮತ್ತು ರಾಜಲಕ್ಷ್ಮಿ ಸಂಜಯ್ ಸಂಯೋಜಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲೇ ಆಗಸ್ಟ್ 13ರಂದು ಬಿಡುಗಡೆಯಾಗಿರುವ ಈ ಹಾಡು ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದು, ಸಂಗೀತ ಪ್ರಿಯರು ಇದನ್ನು ಗುನುಗುವಂತಿದೆ.

ಮಾತರಂ ಹಾಡಿನಲ್ಲಿ ಅನುರಾಧಾ ಪೌಡ್ವಾಲ್, ಶಂಕರ್ ಮಹಾದೇವನ್, ಶಾನ್, ಶ್ರೀನಿವಾಸ್, ಪ್ರಸೂನ್ ಜೋಶಿಯಂತಹ ಪ್ರಸಿದ್ಧ ವ್ಯಕ್ತಿಗಳು ಮತ್ತು ಪ್ರತಿಭಾ ಬಘೇಲ್, ಮೈಥಿಲಿ ಠಾಕೂರ್ ಅವರಂತಹ ಅತ್ಯಂತ ಜನಪ್ರಿಯ ಯುವ ಗಾಯಕರು ಇದ್ದಾರೆ. ಸಂಗೀತಾ ಪಂತ್ ಈ ಹಾಡನ್ನು ಬರೆದಿದ್ದು, ಸಂಜಯ್ ಚಂದ್ರಶೇಖರ್ ನಿರ್ಮಿಸಿದ್ದಾರೆ. ಈ ಹಾಡು ಇಡೀ ಜಗತ್ತಿನಲ್ಲಿ ಭಾರತ ಮಾತೆ ಏಕೆ ವಿಶೇಷ ಎನ್ನುವುದನ್ನು ಪ್ರತಿಬಿಂಬಿಸುವಂತಿದ್ದು, ಭಾವನಾತ್ಮಕವಾಗಿ ಮೂಡಿಬಂದಿದೆ. ಈ ನೂತನ ಹಾಡನ್ನು ಸವಿಯಲು ಮೇಲಿನ ವಿಡಿಯೋ ವೀಕ್ಷಿಸಿ.

(Mataram song sung by renowned singers on the occasion of 7Sth Independence day 2021 written by Sangeeta Pant)

ಇದನ್ನೂ ಓದಿ:
Azadi Ka Amrut Mahotsav: ಸ್ವಾತಂತ್ರ್ಯೋತ್ಸವ ವಿಶೇಷ; ಸತತ ಹದಿನೈದು ದಿನ ದೇಶಭಕ್ತಿ ಗೀತೆಗಳ ಸುಧೆ ಹರಿಸಿದ ಸಹೋದರಿಯರು!