AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Azadi Ka Amrut Mahotsav: ಸ್ವಾತಂತ್ರ್ಯೋತ್ಸವ ವಿಶೇಷ; ಸತತ ಹದಿನೈದು ದಿನ ದೇಶಭಕ್ತಿ ಗೀತೆಗಳ ಸುಧೆ ಹರಿಸಿದ ಸಹೋದರಿಯರು!

Independence Day 2021: ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ವೃಥಾ ಕಾಲಹರಣದಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಅದೇ ಮಾಧ್ಯಮವನ್ನು ಇಟ್ಟುಕೊಂಡು ತಮ್ಮ ಹಾಡುಗಳಿಂದ ಜನಮನಗೆದ್ದಿದ್ದಾರೆ ಪ್ರಭು ಸಹೋದರಿಯರು.

Azadi Ka Amrut Mahotsav: ಸ್ವಾತಂತ್ರ್ಯೋತ್ಸವ ವಿಶೇಷ; ಸತತ ಹದಿನೈದು ದಿನ ದೇಶಭಕ್ತಿ ಗೀತೆಗಳ ಸುಧೆ ಹರಿಸಿದ ಸಹೋದರಿಯರು!
ಧನ್ಯಾ ಪ್ರಭು ಮತ್ತು ದೀಪ್ತಿ ಪ್ರಭು ಸಹೋದರಿಯರು
Guruganesh Bhat
| Updated By: ಆಯೇಷಾ ಬಾನು|

Updated on: Aug 15, 2021 | 8:26 AM

Share

ಕೊವಿಡ್ ಸಂಕಷ್ಟದ ನಡುವೆಯೂ ಭಾರತದೆಲ್ಲೆಡೆ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮ ರಂಗೇರಿದೆ. ಈ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ನಡೆಯುತ್ತಿರುವ ಅನೇಕ ಸಾಂಸ್ಕೃತಿಕ ಹಾಗೂ ಸಂದರ್ಭೋಚಿತ ಕಾರ್ಯಕ್ರಮಗಳು ಹೆಚ್ಚಿನ ಮರಗು ನೀಡುತ್ತಿವೆ. ಅದರಲ್ಲೂ ಆನ್‌ಲೈನ್‌ ವೇದಿಕೆಯನ್ನು ಮುನ್ನೆಲೆಯಾಗಿಟ್ಟುಕೊಂಡು ವಿಭಿನ್ನ ಪ್ರಯತ್ನಗಳು ಮೂಡಿಬರುತ್ತಿದೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಧನ್ಯಾ ಪ್ರಭು ಹಾಗೂ ದೀಪ್ತಿ ಪ್ರಭು ಸಹೋದರಿಯರು ಹದಿನೈದು ದಿನಗಳ ಕಾಲ ದೇಶಭಕ್ತಿಗೀತೆಗಳನ್ನು ಹಾಡುವ ಮೂಲಕ ಈ ವರ್ಷದ ಸ್ವಾತಂತ್ರ್ಯೋತ್ಸವನ್ನು ಸ್ಮರಣೀಯವಾಗಿಸುವಲ್ಲಿ ತೊಡಗಿದ್ದಾರೆ. ಇವರು ಚಂದ್ರಶೇಖರ ಪ್ರಭು ಹಾಗೂ ನಯನಾ ಪ್ರಭು ದಂಪತಿಗಳ ಪುತ್ರಿಯರು.

ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ವೃಥಾ ಕಾಲಹರಣದಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಅದೇ ಮಾಧ್ಯಮವನ್ನು ಇಟ್ಟುಕೊಂಡು ತಮ್ಮ ಹಾಡುಗಳಿಂದ ಜನಮನಗೆದ್ದಿದ್ದಾರೆ ಪ್ರಭು ಸಹೋದರಿಯರು. ಆಗಸ್ಟ್ 1ರಿಂದ ನಿರಂತರವಾಗಿ 12 ದಿನಗಳ ಕಾಲ ವಾಟ್ಸಾಪ್ ಸ್ಟೇಟಸ್ ಮೂಲಕ ವಿವಿಧ ದೇಶಭಕ್ತಿಗೀತೆಗಳ ಮೊದಲ ಚರಣವನ್ನು ಹಾಡಿ ಅದರ ಕಿರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಉಳಿದ ಮೂರು ದಿನಗಳ ಕಾಲ ಹಾಡಿಗೆ ಹೊಂದುವ ವಾತಾವರಣವನ್ನು ಸೃಷ್ಟಿಸಿ, ಪೂರ್ತಿ ಹಾಡನ್ನು ರೆಕಾರ್ಡಿಂಗ್ ಮಾಡಿ ಇನ್ಸ್‌ಟಾಗ್ರಾಂ, ಯೂಟ್ಯೂಬ್ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ಕೆಲವೊಂದು ಜನಪ್ರಿಯ ದೇಶಭಕ್ತಿಗೀತೆಗಳ ಜತೆಗೆ ಜನರಿಗೆ ಅಷ್ಟೇನೂ ಪರಿಚಿತವಿರದ ಹಾಡುಗಳು ಸಹ ಈ ಸಹೋದರಿಯರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿಬಂದಿದೆ.

“ನಮ್ಮ ಹಿರಿಯರ ಪರಿಶ್ರಮ ಹಾಗೂ ತ್ಯಾಗದ ಫಲವೇ ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ. ಹಾಗಾಗಿ ಅವರ ಬಲಿದಾನಗಳನ್ನು ನೆನಪಿಸಿಕೊಳ್ಳುವ ಸಲುವಾಗಿ ಪ್ರತಿದಿನ ಏನಾದರೂ ವಿಶೇಷ ಪ್ರಯತ್ನವನ್ನು ಮಾಡಬೇಕೆಂದು ಹದಿನೈದು ದಿನಗಳ ಕಾಲ ಸತತವಾಗಿ ದೇಶಭಕ್ತಿಗೀತೆಯನ್ನು ಹಾಡಲು ನಿರ್ಧರಿಸಿದೆವು. ಈ ಮೂಲಕ ನಮಗೂ ಒಂದಿಷ್ಟು ಹಾಡುಗಳ ಕುರಿತಾಗಿ ತಿಳಿದುಕೊಂಡ ಹಾಗಾಗುತ್ತದೆ ಹಾಗೂ ಅನೇಕ ಶ್ರೋತೃಗಳಿಗೆ ಅಷ್ಟೇನೂ ತಿಳಿದಿರದ ದೇಶಭಕ್ತಿಗೀತೆಗಳನ್ನು ತಲುಪಿಸಬಹುದು. ಜನರಿಗೆ ಈ ಹಾಡುಗಳು ಖುಷಿ ನೀಡುವುದಲ್ಲದೇ, ದೇಶದ ಋಣ ನಮ್ಮ ಮೇಲಿದೆ ಎಂಬುದನ್ನು ಅರಿವು ಮೂಡಿಸುವ ಉದ್ದೇಶವನ್ನೂ ನಾವು ಹೊಂದಿದ್ದೇವೆ. ನಿರೀಕ್ಷೆಗೂ ಮೀರಿದ ಉತ್ತಮ ಪ್ರತಿಕ್ರಿಯೆಗಳು ಹಾಗೂ ಬೆಂಬಲ ನಮಗೆ ವ್ಯಕ್ತವಾಯಿತು. ಹಲವರು ಹಾಡಿನ ಆಯ್ಕೆಯಲ್ಲೂ ಸಲಹೆಗಳನ್ನು ನೀಡಿದ್ದರು” ಎನ್ನುತ್ತಾರೆ ಪರಿಕಲ್ಪನೆಗೆ ನಾಂದಿ ಹಾಡಿದ ಧನ್ಯಾ ಪ್ರಭು. ಅವರು ಪ್ರಸ್ತುತ ಉಜಿರೆಯ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ ತೃತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ. ಹಲವಾರು ವೇದಿಕೆಗಳಲ್ಲಿ ನಿರೂಪಣೆ ಹಾಗೂ ಗಾಯನದ ಮೂಲಕ ಸೈ ಎನಿಸಿಕೊಂಡಿದ್ದಾರೆ. ಎಸ್‌ಡಿಎಂ ಕಾಲೇಜಿನ ಕಲಾ ತಂಡದಲ್ಲಿ ಹಾಡುಗಾರ್ತಿಯಾಗಿಯೂ ಗುರುತಿಸಿಕೊಂಡಿರುತ್ತಾರೆ.

ಸತತ ಹದಿನೈದು ದಿನಗಳ ಕಾಲ ದೇಶಭಕ್ತಿಯ ಸುಧೆ ಹರಿಸಿದ ಅವರ ಜತೆಗಾತಿ, ಸಹೋದರಿ ದೀಪ್ತಿ ಪ್ರಭು ಪ್ರಸ್ತುತ ಉಪ್ಪಿನಂಗಡಿಯ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ. 2019ರಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ವಾಯ್ಸ್‌ ಆಫ್ ಜಿಎಸ್‌ಬಿ ಸೀಸನ್ 2 ಸ್ಪರ್ಧೆಯ ರನ್ನರ್ ಅಪ್ ಆಗಿಯೂ ಹೊರಹೊಮ್ಮಿದ್ದಾರೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈಗ ಕಿರಣ್‌ಕುಮಾರ್ ಗಾನಸಿರಿ ಅವರ ಗರಡಿಯಲ್ಲಿ ಸುಗಮ ಸಂಗೀತವನ್ನೂ, ವಿದುಷಿ ಶಾರದಾ ಭಟ್ ಅವರ ಬಳಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸುತ್ತಿದ್ದಾರೆ. ಎಳವೆಯಲ್ಲೇ ಸಂಗೀತದ ಕಡೆ ಒಲವು ಬೆಳೆಸಿಕೊಂಡು ನಿರಂತರ ಅಭ್ಯಾಸದಿಂದ ಪ್ರತಿಷ್ಟಿತ ವೇದಿಕೆಗಳನ್ನೇರಿದ ಸಾಧನೆ ಇವರದ್ದು.

ತಮ್ಮದೇ ಸ್ವಂತ ಯೂಟ್ಯೂಬ್ ಹಾಗೂ ಇನ್ಸ್‌ಟಾಗ್ರಾಂ ಚಾನೆಲ್‌ಗಳನ್ನು ಹೊಂದಿರುವ ಇವರು ಇಂತಹ ವಿನೂತನ ಪರಿಕಲ್ಪನೆಗಳನ್ನು ಹೊರತರುತ್ತಲೇ ಇರುತ್ತಾರೆ. ಹಾಗಾಗಿ ತಮ್ಮ ಪ್ರತಿಭೆಯನ್ನು ಸಾದರಪಡಿಸುವುದರ ಜತೆಗೆ ದೇಶಪ್ರೇಮವನ್ನು ತೋರಿದ ಈ ಸಹೋದರಿಯರಿಗೊಂದು ಸಲಾಂ.

ವಿಶೇಷ ಬರಹ: ರಶ್ಮಿ ಯಾದವ್. ಕೆ.                           ಪತ್ರಿಕೋದ್ಯಮ ವಿದ್ಯಾರ್ಥಿನಿ, ಎಸ್.ಡಿ.ಎಂ ಕಾಲೇಜು, ಉಜಿರೆ

ಇದನ್ನೂ ಓದಿ: 

Kannada Patriotic Movies: ದೇಶದ ಸ್ವಾತಂತ್ರ್ಯದ ಕುರಿತು ಮೈ ನವಿರೇಳಿಸುವ ಕನ್ನಡದ ದೇಶಭಕ್ತಿ ಸಿನಿಮಾಗಳು

ಸ್ವಾತಂತ್ರೋತ್ಸವದ ಜತೆಗೆ ಧಾರವಾಡದ 75 ವರ್ಷದ ಈ ರಾಷ್ಟ್ರಧ್ವಜಕ್ಕೂ ಅಮೃತ ಮಹೋತ್ಸವದ ಸಂಭ್ರಮ!

(Azadi Ka Amrut Mahotsav Independence Day 2021 Special these sisters from Uppinangadi sings Patriotic Songs by 15 days)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ