AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Patriotic Movies: ದೇಶದ ಸ್ವಾತಂತ್ರ್ಯದ ಕುರಿತು ಮೈ ನವಿರೇಳಿಸುವ ಕನ್ನಡದ ದೇಶಭಕ್ತಿ ಸಿನಿಮಾಗಳು

Kannada Movies on Patriotism: ಕನ್ನಡದಲ್ಲಿ ದೇಶ ಭಕ್ತಿಯನ್ನು, ಸ್ವಾತಂತ್ರ್ಯ ಹೋರಾಟವನ್ನು ಹಲವು ಚಿತ್ರಗಳು ಸಮರ್ಥವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿವೆ. ಅಂತಹ ಚಿತ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Kannada Patriotic Movies: ದೇಶದ ಸ್ವಾತಂತ್ರ್ಯದ ಕುರಿತು ಮೈ ನವಿರೇಳಿಸುವ ಕನ್ನಡದ ದೇಶಭಕ್ತಿ ಸಿನಿಮಾಗಳು
ಸಾಂಕೇತಿಕ ಚಿತ್ರ
TV9 Web
| Updated By: shivaprasad.hs|

Updated on:Aug 14, 2021 | 11:00 AM

Share

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದೇಶಭಕ್ತಿಯನ್ನೇ ಕೇಂದ್ರವಾಗಿಟ್ಟುಕೊಂಡು ಹಲವಾರು ಚಿತ್ರಗಳು ಬಂದಿವೆ. ದೇಶಭಕ್ತಿಯನ್ನು ಹಲವು ದೃಷ್ಟಿಕೋನದಲ್ಲಿ‌ ನೋಡುತ್ತಾ, ಚರ್ಚೆಗೊಳಪಡಿಸುತ್ತಾ ವೀಕ್ಷಕರ ಚಿಂತನೆಯನ್ನು ಈ ಚಿತ್ರಗಳು ಉದ್ದೀಪಿಸಿವೆ. ಸ್ವಾತಂತ್ರ್ಯ ಹೋರಾಟದ ಕಾಲಘ್ಟದ್ದಿರಬಹುದು ಅಥವಾ ಸ್ವಾತಂತ್ರ್ಯಾ ನಂತರದ ಕಾಲಘಟ್ಟದ್ದಿರಬಹುದು- ಕೆಲವು ಚಿತ್ರಗಳು ದೇಶ ಪ್ರೇಮವನ್ನು ಸಾರುವ ವ್ಯಕ್ತಿಗಳ ಚಿತ್ರದ ಮಾದರಿಯಲ್ಲಿದ್ದರೆ ಮತ್ತೆ ಕೆಲವು ಒಂದು ಕಾಲಘಟ್ಟದ ತಲ್ಲಣಗಳನ್ನು ಕಟ್ಟಿಕೊಡುವಂತಹ ಚಿತ್ರಗಳಾಗಿ ತೆರೆಯ ಮೇಲೆ ಬಂದಿವೆ. ಸ್ವಾತಂತ್ರ್ಯ, ದೇಶಪ್ರೇಮವನ್ನು ವಾಚ್ಯವಾಗಿಸದೇ, ಧ್ವನಿಯ ಮುಖಾಂತರ ಚಿತ್ರವನ್ನು ಕಟ್ಟಿಕೊಟ್ಟ ನಿರ್ದೇಶಕರ ಪಟ್ಟಿಯೂ ದೊಡ್ಡದಿದೆ.

75ನೇ ಸ್ವಾತಂತ್ರ್ಯೋತ್ಸವದ (ಆಗಸ್ಟ್ 15) ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ವೈಶಿಷ್ಟ್ಯಪೂರ್ಣ ಸೃಜನಾತ್ಮಕ ಚಿತ್ರ ಪ್ರಯೋಗಗಳಲ್ಲಿ‌, ದೇಶದ ಸ್ವಾತಂತ್ರ್ಯ ಹೋರಾಟದ ಕತಾ ವಸ್ತುವನ್ನು ಹೊಂದಿರುವ ಚಿತ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ನೀವಿನ್ನೂ ಈ ಚಿತ್ರಗಳನ್ನು ನೋಡಿಲ್ಲವಾದರೆ, ನೋಡಿ, ಆನಂದಿಸಿ.

ಹಗಲು ವೇಷ: ಬರಗೂರು ರಾಮಚಂದ್ರಪ್ಪ ನಿರ್ದೇಶನದ ಈ ಚಿತ್ರ ಬ್ರಿಟಿಷ್ ಕಾಲಘಟ್ಟದಲ್ಲಿನ ತೆರಿಗೆ ಪದ್ಧತಿ ಹಾಗೂ ದೌರ್ಜನ್ಯದ ವಿರುದ್ಧ ಸಿಡಿದೇಳುವ ವ್ಯಕ್ತಿಯ ಕತೆಯನ್ನು ಒಳಗೊಂಡಿದೆ. ಶಿವರಾಜ್​ಕುಮಾರ್, ರೇಷ್ಮಾ, ತಾರಾ ಮೊದಲಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2000ದಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಸಂಗೀತವನ್ನು ನೀಡಿದವರು ಹಂಸಲೇಖ.

ಕಿತ್ತೂರು ಚೆನ್ನಮ್ಮ: ಬಿ.ಸರೋಜಾ ದೇವಿ ಮತ್ತು ಡಾ.ರಾಜ್​ಕುಮಾರ್ ಅಭಿನಯದ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದವರು ಬಿ.ಆರ್.ಪಂತುಲು. 1961ರಲ್ಲಿ ಬಿಡುಗಡೆಯಾದ ಈ ಚಿತ್ರ ಕನ್ನಡದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮಳ ಜೀವನಕತೆಯನ್ನು ಹೊಂದಿದೆ.

ವೀರ ಸಿಂಧೂರ ಲಕ್ಷ್ಮಣ: ಎನ್​.ಬಸವಾರಜ್, ವಜ್ರಮುನಿ ಹಾಗೂ ಕೆ.ಎಸ್.ಅಶ್ವತ್ಥ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ವೀರ ಸಿಂಧೂರ ಲಕ್ಷ್ಮಣ ಚಿತ್ರವನ್ನು ನಿರ್ದೇಶಿಸಿದವರು ಹುಣಸೂರು ಕೃಷ್ಣಮೂರ್ತಿ. 1977ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ನಿರ್ಮಿಸಿದವರು ಎನ್.ಬಸವರಾಜ್. ಮಂಜುಳಾ, ಅನುರಾದಾ, ಲೀಲಾವತಿ, ಸುಧೀರ್ ಮೊದಲಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣ ಅವರ ಜೀವನ ಕತೆಯನ್ನಾಧರಿಸಿದ ಚಿತ್ರವಾಗಿದೆ.

ತಾಯಿ ಸಾಹೇಬ: ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ಕಾಲಘಟ್ಟದ ಕತೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟ ಕತೆಯ ಎಳೆಯೂ ಇದೆ. ‘ತಾಯಿ ಸಾಹೇಬೌ ಮುಖ್ಯವಾಗಿ ಚರ್ಚಿಸುವುದು ಆಗಿನ ಕಾಲದ ಸಾಮಾಜಿಕ ಪರಿಸ್ಥಿತಿ ಹಾಗೂ ಕಟ್ಟುಪಾಡುಗಳ ಬಗ್ಗೆ. ಈ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದು, ನಟಿ ಜಯಮಾಲಾ ಚಿತ್ರವನ್ನು ನಿರ್ಮಿಸಿ, ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1997ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಎಚ್.ಎಂ.ರಾಮಚಂದ್ರ ಛಾಯಾಗ್ರಹಣ ಮಾಡಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ: ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಸಂಗೊಳ್ಳಿ ರಾಯಣ್ಣನಾಗಿ ನಟ ದರ್ಶನ್ ತೂಗುದೀಪ ಅಭಿನಯಿಸಿದ್ದಾರೆ. ನಟಿ ಜಯಪ್ರದಾ ಅವರು ಕಿತ್ತೂರಿನ ರಾಣಿ ಚೆನ್ನಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2012ರಲ್ಲಿ ಬಿಡುಗಡೆಯಾದ ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಜೀವನವನ್ನು ಆಧರಿಸಿದ ಚಿತ್ರವಾಗಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಈ ಚಿತ್ರಗಳು ಮುಖ್ಯವಾಗಿ ದೇಶದ ಸ್ವಾತಂತ್ರ್ಯ ಹೋರಾಟವನ್ನೇ ಮುಖ್ಯ ವಸ್ತುವನ್ನಾಗಿರಿಸಿಕೊಂಡು ತಯಾರಾದ ಚಿತ್ರಗಳು. ಇವುಗಳಲ್ಲದೇ, ಕನ್ನಡದಲ್ಲಿ ದೇಶಭಕ್ತಿಯನ್ನೇ ಚಿತ್ರದ ಜೀವಾಳವಾಗಿರಿಸಿಕೊಂಡ ಸಿನಿಮಾಗಳು ಬಹಳಷ್ಟಿವೆ. ಸೈನಿಕರು, ಕೃಷಿಕರು, ಪೊಲೀಸರು ಸೇರಿದಂತೆ ದೇಶದ ಆಧಾರ ಸ್ತಂಭಗಳಂತಿರುವವರ ತ್ಯಾಗದ ಕುರಿತು ಹಲವಾರು ಚಿತ್ರಗಳು ಬಂದಿದ್ದು, ಜನ ಇಷ್ಟಪಟ್ಟು ಅವನ್ನು ಪ್ರೋತ್ಸಾಹಿಸಿದ್ದಾರೆ.

ಅಂತಹ ಚಿತ್ರಗಳಲ್ಲಿ ಸ್ಕೂಲ್ ಮಾಸ್ಟರ್, ಸಿಪಾಯಿ ರಾಮು, ವಂದೇ ಮಾತರಂ, ಮುತ್ತಿನ ಹಾರ, ಶಿಕಾರಿ, ಸೈನಿಕ, ವೀರಪ್ಪ ನಾಯ್ಕ, ಮೈಸೂರ ಮಲ್ಲಿಗೆ, ಸಾರ್ವಭೌಮ, ಎಕೆ47, ಯೋಧ ಮೊದಲಾದ ಖ್ಯಾತ ಚಿತ್ರಗಳನ್ನು ಉದಾಹರಿಸಬಹುದು.

ಇದನ್ನೂ ನೋಡಿ:

Kannada Movies: ಯೂಟ್ಯೂಬ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದಾದ ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬೇಕೆ?

(Kannada Movies on Patriotism and Indian Independence)

Published On - 10:57 am, Sat, 14 August 21