75th Indian Independence Day: ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಹಾಯ ಮಾಡಿದ ವೀರ ಮಹಿಳೆಯರನ್ನು ನಾವು ನೆನೆಯಲೇ ಬೇಕು

ಈ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಕೂಡ ತಮ್ಮ ಶೌರ್ಯವನ್ನು ಪ್ರದರ್ಶಿಸಿದ್ದಾರೆ. ಅಂತಹ ಕೆಲವು ವೀರ ವನಿತೆಯರನ್ನು ನೆನೆಯುವ ಸಲುವಾಗಿ ಅವರ ಕಿರು ಪರಿಚಯವನ್ನು ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ.

75th Indian Independence Day: ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಹಾಯ ಮಾಡಿದ ವೀರ ಮಹಿಳೆಯರನ್ನು ನಾವು ನೆನೆಯಲೇ ಬೇಕು
ರಾಣಿ ಲಕ್ಷ್ಮೀಬಾಯಿ
Follow us
| Updated By: ಆಯೇಷಾ ಬಾನು

Updated on: Aug 15, 2021 | 10:34 AM

ಇವತ್ತು ಇಡೀ ದೇಶ ಹೆಮ್ಮೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರನ್ನು ನೆನೆದು ಸ್ವಾತಂತ್ರ್ಯದ ಹಬ್ಬ ಆಚರಿಸುತ್ತಿದೆ. ಈ ದಿನಕ್ಕಾಗಿ ಅದೆಷ್ಟೋ ಲಕ್ಷಾಂತರ ಜನ ಅಮರರಾಗಿದ್ದಾರೆ. ಬ್ರಿಟಿಷರನ್ನು ಓಡಿಸಲು ರಕ್ತ ಸುರಿಸಿದ್ದಾರೆ. ಭೇದ ಭಾವ ಮರೆತು, ಜೀವದ ಹಂಗನ್ನು ತೊರೆದು ಹೋರಾಡಿದ್ದಾರೆ. ಇದರ ಫಲವೇ ನಾವಿಂದು ಹೆಮ್ಮೆಯಿಂದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಕೂಡ ತಮ್ಮ ಶೌರ್ಯವನ್ನು ಪ್ರದರ್ಶಿಸಿದ್ದಾರೆ. ಅಂತಹ ಕೆಲವು ವೀರ ವನಿತೆಯರನ್ನು ನೆನೆಯುವ ಸಲುವಾಗಿ ಅವರ ಕಿರು ಪರಿಚಯವನ್ನು ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ.

ಮಹಾತ್ಮಾ ಗಾಂಧಿಯವರು ಬ್ರಿಟಿಷರ ಆಡಳಿತವನ್ನು ಶಾಂತಿಯುತವಾಗಿ ವಿರೋಧಿಸಲು ಭಾರತೀಯರನ್ನು ಪ್ರೋತ್ಸಾಹಿಸುತ್ತಿದ್ದಾಗ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಹಲವಾರು ಭಾರತೀಯ ಮಹಿಳೆಯರು ಸದ್ದಿಲ್ಲದೆ ಹೋರಾಟದಲ್ಲಿ ಕೇಂದ್ರ ಸ್ಥಾನವನ್ನು ತೆಗೆದುಕೊಂಡು ಒಳಗಿನಿಂದ ಸ್ವಾತಂತ್ರ್ಯ ಚಳುವಳಿಯನ್ನು ಆರಂಭಿಸಿದರು. ಜಾತೀಯತೆಯನ್ನು ತೊಡೆದುಹಾಕಲು ಕರೆ ನೀಡುವುದರಿಂದ ಹಿಡಿದು ಮದ್ಯದ ನಿಷೇಧದವರೆಗೆ ಹೋರಾಟ ಶುರು ಮಾಡಿದರು. ಹೆಚ್ಚಾಗಿ ಅವರು ತಮ್ಮ ಮೇಲೆ ಆಗುವ ದಬ್ಬಾಳಿಕೆಯ ಆಡಳಿತವನ್ನು ಕೊನೆಗೊಳಿಸಲು ಸಾಮ್ರಾಜ್ಯಶಾಹಿಗಳ ವಿರುದ್ಧ ಹೋರಾಡುವ ಸವಾಲನ್ನು ತೆಗೆದುಕೊಂಡರು. ಕೆಲವರು ತಮ್ಮ ಕಾವ್ಯದೊಂದಿಗೆ ‘ಸ್ವದೇಶಿ’ ಚಳುವಳಿಗೆ ಕರೆ ನೀಡಿದರು, ಇತರರು ಸಾಮಾಜಿಕ ಸುಧಾರಣೆಗಳನ್ನು ಹೆಚ್ಚಿಸಲು ಮುರಿದ ರಾಷ್ಟ್ರದಲ್ಲಿ ಸಮುದಾಯಗಳನ್ನು ನಿರ್ಮಿಸಿದರು. ನಾವು ಇಂದು 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ಈ ದಿನ ಈ ಮಹಿಳೆಯರಲ್ಲಿ ಕೆಲವರನ್ನು ನಾವು ನೆನೆಯಲೇ ಬೇಕು

1. ಸಾವಿತ್ರಿಬಾಯಿ ಫುಲೆ ಸಾವಿತ್ರಿಬಾಯಿ ಫುಲೆ ಅವರು ಭಾರತದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ನಿಸ್ವಾರ್ಥವಾಗಿ ಕೆಲಸ ಮಾಡಿದವರು. ಹಿಂದುಳಿದ ಜಾತಿ, ಸೇರಿದಂತೆ ಮಹಿಳೆಯರಿಗೆ ಶಿಕ್ಷಣ ಹಂಚುವ ಕಾಯಕ ಮಾಡಿದ ಸರಸ್ವತಿ. ಶಿಕ್ಷಣವು ಮಹಿಳೆಯರನ್ನು ಸಾಮಾಜಿಕ ತಾರತಮ್ಯದಿಂದ ಮುಕ್ತಗೊಳಿಸುವ ಆಯುಧವಾಗಿದೆ ಎಂದು ಹೇಳುತ್ತಿದ್ದ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಬ್ರಿಟಿಷರಿಂದಲೇ ಬಿರುದು ಪಡೆದಿದ್ದಾರೆ. ಆಕೆಯ ಪತಿ ಜ್ಯೋತಿರಾವ್ ಫುಲೆ (ಜ್ಯೋತಿಬಾ) ಜೊತೆ, ಅವರು ಪುಣೆಯಲ್ಲಿ ಮಹಿಳೆಯರಿಗೆ, ಬಾಲಕಿಯರಿಗೆ ಶಿಕ್ಷಣದ ಜ್ಞಾನ ನೀಡಲು ಪ್ರಾರಂಭಿಸಿದರು ಮತ್ತು ಆ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ವಿರೋಧಿಸುವವರ ವಿರುದ್ಧ ಹೋರಾಡಿದರು.

2.ಮಹಾದೇವಿ ವರ್ಮಾ 1907 ರಲ್ಲಿ ಅಲಹಾಬಾದ್‌ನಲ್ಲಿ ಪ್ರಗತಿಪರ ಹಿಂದೂ ಕುಟುಂಬದಲ್ಲಿ ಜನಿಸಿದ ಮಹಾದೇವಿವರ್ಮ ಹಿಂದಿ ಕವಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಣ ತಜ್ಞರಾಗಿ ವಿಕಸನಗೊಂಡರು. ಅವರು ಗಾಂಧಿ ಆದರ್ಶಗಳನ್ನು ಅಳವಡಿಸಿಕೊಂಡರು ಮತ್ತು ಅವರು ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಬಿಟ್ಟು ಪ್ರಾಥಮಿಕವಾಗಿ ಖಾದಿ ಕೆಲಸ ಮಾಡಿದರು. ಅವರು ಪ್ರಾಂಶುಪಾಲರಾಗಿ ಮತ್ತು ನಂತರ ಉಪಕುಲಪತಿಯಾಗಿ ಅಲಹಾಬಾದ್‌ನಲ್ಲಿ ಮಹಿಳೆಯರಿಗಾಗಿ ವಸತಿ ಕಾಲೇಜಿನ ಮಹಿಳಾ ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸಿದರು. ಆದರೆ ಮಹಾದೇವಿ ವರ್ಮಾ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಇವರನ್ನು 16 ನೇ ಶತಮಾನದ ಭಕ್ತಿ ಸಂತ ಮೀರಾಬಾಯಿಗೆ ಹೋಲಿಸಲಾಗುತ್ತದೆ.

3. ಲಕ್ಷ್ಮಿ ಸೆಹಗಲ್ 1914 ರಲ್ಲಿ ಜನಿಸಿದ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮುಗಿಸಿದ್ದಾರೆ. ಮತ್ತು 1938 ರಲ್ಲಿ ಎಂಬಿಬಿಎಸ್ ಮಾಡಿದರು. ನಂತರ ಅವರು ಮತ್ತು ಅವರ ಕುಟುಂಬವು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡರು. ನೇತಾಜಿಯ ಭಾರತೀಯ ರಾಷ್ಟ್ರೀಯ ಸೇನೆಯ ಮೊದಲ ಮಹಿಳಾ ರೆಜಿಮೆಂಟ್ ಅನ್ನು ನಿರ್ಮಿಸಲು ಅವರು ಸಹಾಯ ಮಾಡಿದರು. ಯುದ್ಧ ಕೈದಿಗಳು ಮತ್ತು ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡಲು ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಹಗಲಿರುಳು ದುಡಿದಿದ್ದಾರೆ.

4.ರಾಣಿ ಲಕ್ಷ್ಮೀಬಾಯಿ ಉತ್ತರ ಭಾರತದ ಮರಾಠಾ ರಾಜಮನೆತನದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದವರು. ಅವರು 1828 ರಲ್ಲಿ ಕಾಶಿಯಲ್ಲಿ “ಮಣಿಕರ್ಣಿಕಾ” ಆಗಿ ಜನಿಸಿದಳು. ಬಳಿಕ ಕೇವಲ 12 ವರ್ಷದವರಿದ್ದಾಗ ಝಾನ್ಸಿಯ ರಾಜ ಗಂಗಾಧರ ರಾವ್ ಅವರನ್ನು ಮದುವೆಯಾದರು, ಆಕೆಯ ಗಂಡನ ಮರಣದ ನಂತರ, ರಾಜ್ಯದ ಆಡಳಿತದ ಜವಾಬ್ದಾರಿ ರಾಣಿ ಲಕ್ಷ್ಮೀಬಾಯಿಯ ಮೇಲೆ ಬಿದ್ದಿತು. ಮಕ್ಕಳಿಲ್ಲದ ಕಾರಣ ದತ್ತು ಪುತ್ರನ ಆಳ್ವಿಕೆ ನಡೆಯುವುದಿಲ್ಲ ಬ್ರಿಟಿಷರಿಗೆ ತನ್ನ ಆಳ್ವಿಕೆಗೆಯನ್ನು, ರಾಜ್ಯವನ್ನು ನೀಡುವಂತ ಪರಿಸ್ಥಿತಿ ಬಂದಾಗ ತಾನು ಶರಣಾಗುವುದಿಲ್ಲ ಎಂದು ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮುಂದಾದರು. ತಮ್ಮ ಸಣ್ಣ ಸೈನ್ಯದೊಂದಿಗೆ ತನ್ನ ಪ್ರಾಂತ್ಯವನ್ನು ರಕ್ಷಿಸಲು ಧೈರ್ಯದಿಂದ ಹೋರಾಡಿದ ವೀರ ವನಿತೆ. ಬ್ರಿಟಿಷರೊಂದಿಗೆ ಉಗ್ರವಾಗಿ ಹೋರಾಡಿ ಕೊನೆಗೆ 1858 ರಲ್ಲಿ ಗ್ವಾಲಿಯರ್ ಬಳಿ ನಡೆದ ಯುದ್ಧದಲ್ಲಿ ಮೃತಪಟ್ಟರು.

5. ಬಸಂತಿ ದೇವಿ 1880 ರಲ್ಲಿ ಜನಿಸಿದ ಬಸಂತಿ ದೇವಿ, ‘ದೇಶಬಂಧು’ ಎಂದು ಕರೆಯಲ್ಪಡುತ್ತಿದ್ದ ತನ್ನ ಪತಿ ಚಿತ್ತರಂಜನ್ ದಾಸ್ ಬ್ರಿಟಿಷರ ವಿರುದ್ಧದ ಚಟುವಟಿಕೆಗಳಿಗಾಗಿ ಬಂಧನಕ್ಕೊಳಗಾದ ನಂತರ 1921 ರಲ್ಲಿ ಬಸಂತಿ ದೇವಿ ಸ್ವಾತಂತ್ರ್ಯ ಚಳುವಳಿಗೆ ಸೇರಿದರು. ಅಸಹಕಾರ ಚಳುವಳಿಯ ಸಮಯದಲ್ಲಿ ತನ್ನ ಅತ್ತಿಗೆ ಊರ್ಮಿಳಾ ದೇವಿಯೊಂದಿಗೆ ಬಂಧನಕ್ಕೊಳಗಾದ ಮೊದಲ ಮಹಿಳೆ ಬಸಂತಿ ದೇವಿ. ಅವರು ಖಿಲಾಫತ್ ಚಳುವಳಿ ಮತ್ತು ನಾಗರಿಕ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಾರೆ.

6. ಸರೋಜಿನಿ ನಾಯ್ಡು ಸರೋಜಿನಿ ನಾಯ್ಡು ಒಬ್ಬ ರಾಜಕೀಯ ಕಾರ್ಯಕರ್ತೆಯಾಗಿದ್ದು, ಅವರ ಕಾವ್ಯವು ಅವರಿಗೆ ನೈಟಿಂಗೇಲ್ ಆಫ್ ಇಂಡಿಯಾ ಎಂಬ ಹೆಸರನ್ನು ತಂದುಕೊಟ್ಟಿತು. ಮಹಾತ್ಮ ಗಾಂಧಿಯವರ ಅನುಯಾಯಿ, ಸರೋಜಿನಿ ನಾಯ್ಡು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು.

7. ಉದಾ ದೇವಿ 1857 ರ ದಂಗೆಯಲ್ಲಿ ಉದಾ ದೇವಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ. ಆಕೆ ಬ್ರಿಟಿಷರನ್ನು ಮಣಿಸಲು ಅದಕ್ಕೆ ಬೇಕಾದ ತಯಾರಿ ಮಾಡಲು ಸಹಾಯಕ್ಕಾಗಿ ಬೇಗಂ ಹಜರತ್ ಮಹಲ್ ಅನ್ನು ಸಂಪರ್ಕಿಸಿದ್ದರು. ಬ್ರಿಟಿಷರ ವಿರುದ್ಧ ಲಕ್ನೋದಲ್ಲಿ ನಡೆದ ಕದನಗಳ ಪೈಕಿ ಒಂದನ್ನು ಮುನ್ನಡೆಸಿದರು. ಇದರಲ್ಲಿ 30 ಕ್ಕೂ ಹೆಚ್ಚು ಸೈನಿಕರನ್ನು ಕೊಂದು ತಮ್ಮ ಶೌರ್ಯ ಮೆರೆದಿದ್ದಾರೆ. ಉದಾ ದೇವಿ ಮತ್ತು ಇತರ ದಲಿತ ಮಹಿಳೆಯರನ್ನು 1857 ರ ಭಾರತೀಯ ದಂಗೆಯ ಯೋಧರು ಅಥವಾ “ದಲಿತ ವೀರಾಂಗಣರು” ಎಂದು ಸ್ಮರಿಸಲಾಗುತ್ತದೆ.

8. ಉಮಾಬಾಯಿ ಕುಂದಾಪುರ ಸಾಮಾನ್ಯವಾಗಿ ಸ್ವಾತಂತ್ರ್ಯ ಚಳುವಳಿಯ ಅಸ್ಪಷ್ಟ ನಾಯಕಿ ಎಂದು ಪರಿಗಣಿಸಲ್ಪಟ್ಟ ಉಮಾಬಾಯಿ ‘ಭಗಿನಿ ಮಂಡಲ್’ ನ ಸ್ಥಾಪಕರು. 1946 ರಲ್ಲಿ, ಮಹಾತ್ಮ ಗಾಂಧಿ ಆಕೆಯನ್ನು ಕಸ್ತೂರ್ಬಾ ಟ್ರಸ್ಟ್‌ನ ಕರ್ನಾಟಕ ಶಾಖೆಯ ಏಜೆಂಟರನ್ನಾಗಿ ನೇಮಿಸಿದರು.

ಇನ್ನು ಭಾರತದ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ ಇನ್ನೂ ಅನೇಕ ಮಹಿಳೆಯರು ಇದ್ದಾರೆ. ಈ 75 ನೇ ಸ್ವಾತಂತ್ರ್ಯ ದಿನದಂದು ಅವರನ್ನು ಗೌರವದಿಂದ ಸ್ಮರಿಸಬೇಕು.

ಇದನ್ನೂ ಓದಿ: 75th Independence Day ನಾಲ್ಕು ಹೊಸ ಜಿಲ್ಲೆ, 29 ತಾಲ್ಲೂಕು ಘೋಷಿಸಿದ ಛತ್ತೀಸ್​ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ