ವೀರಪ್ಪ ಮೊಯ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಪ್ರತಿಕ್ರಿಸುವುದು ನನಗಿಷ್ಟವಿಲ್ಲ: ಡಿಕೆ ಶಿವಕುಮಾರ್
ಕರ್ನಾಟಕ ಪ್ರದೇಶ ಕಮಿಟಿಯ ಅಧ್ಯಕ್ಷರಾಗಿರುವ ಶಿವಕುಮಾರ್ ಅವರಿಗೆ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಎಚ್ಚರಿಕೆ ಅನ್ವಯಿಸುವುದಾದರೆ, ಬೇರೆಯವರು ಎಐಸಿಸಿ ಅಧ್ಯಕ್ಷನ ಆದೇಶವನ್ನು ಬದಿಗೊತ್ತಿ ಸುಖಾಸುಮ್ಮನೆ ಹೇಳಿಕೆಗಳನ್ನು ನೀಡುವ ಮೂಲಕ ಯಾಕೆ ಗೊಂದಲ ಸೃಷ್ಟಿಸುತ್ತಿದ್ದಾರೋ? ಎರಡು ದಿನ ಸುಮ್ಮನಿದ್ದಂತೆ ಮಾಡುವ ಕೆಎನ್ ರಾಜಣ್ಣ ಮೂರನೇ ಪುನಃ ಶುರುವಿಟ್ಟುಕೊಳ್ಳುತ್ತಾರೆ!
ಬೆಂಗಳೂರು, ಮಾರ್ಚ್ 03: ವಿಧಾನಸಭೆಯ ಆವರಣದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿರುವುದನ್ನು ತಿಳಿಸಿದಾಗ ಅವರು ನಿರುದ್ವಿಗ್ನರಾಗಿ ಮತ್ತು ಸಮಾಧಾನ ಚಿತ್ತದಿಂದ, ಮೊಯ್ಲಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ, ಅವರು ಹೇಳಿರುವುದಕ್ಕೆ ತಾನು ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲ್ಲ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಯಾರೂ ಮಾತಾಡಬಾರದು ಅಂತ ಹೇಳಿದ್ದಾರೆ, ಅವರು ಹೇಳಿರುವುದನ್ನು ಪಾಲನೆ ಮಾಡುತ್ತಿದ್ದೇನೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಸಿಎಂ ಆಗುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ; ವೀರಪ್ಪ ಮೊಯ್ಲಿ ಸ್ಫೋಟಕ ಹೇಳಿಕೆ
Follow Us
Latest Videos
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
