ಬಳ್ಳಾರಿಯಲ್ಲಿ ಹಕ್ಕಿ ಜ್ವರ ಆತಂಕ: ಕೋಳಿ ಫಾರ್ಮ್ ಸುತ್ತ ಔಷಧಿ ಸಿಂಪಡಣೆ, 10 ಕಿಮೀ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ
ಬಳ್ಳಾರಿ ತಾಲೂಕಿನ ಕಪಗಲ್‌ನಲ್ಲಿರುವ ಖಾಸಗಿ ಕೋಳಿ ಫಾಮ್೯ನಲ್ಲಿ 15,000 ಕೋಳಿಗಳು ಸಾವನ್ನಪ್ಪಿವೆ. 8000 ಕೋಳಿಗಳು ಸ್ವಯಂ ಸಾವನ್ನಪ್ಪಿದರೆ, 7000 ಕೋಳಿಗಳನ್ನು ಜಿಲ್ಲಾಡಳಿತ ವಧೆ ಮಾಡಿದೆ. ಹಕ್ಕಿ ಜ್ವರದ ಶಂಕೆಯಿಂದಾಗಿ ಕಪಗಲ್ ಸುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಪಶುಸಂಗೋಪನಾ ಇಲಾಖೆ ತನಿಖೆ ನಡೆಸುತ್ತಿದೆ.
ಬಳ್ಳಾರಿ, ಮಾರ್ಚ್ 03: ಚಿಕನ್ ಪ್ರಿಯರಿಗೆ ಹಕ್ಕಿ ಜ್ವರ (bird flu) ಆತಂಕ ತದ್ದೊಡಿದೆ. ಖಾಸಗಿ ಕೋಳಿ ಫಾರ್ಮ್ನಲ್ಲಿ ಎಂಟು ಸಾವಿರ ಕೋಳಿಗಳು ಸಾವನ್ನಪ್ಪಿದ್ದರೆ, ಏಳು ಸಾವಿರ ಕೋಳಿಗಳ ಜೀವಂತ ವಧೆ ಮಾಡಲಾಗಿರುವಂತಹ ಘಟನೆ ಬಳ್ಳಾರಿ ತಾಲೂಕಿನ ಕಪಗಲ್ ಗ್ರಾಮದ ಬರದನಳ್ಳಿ ಎಂಬುವರಿಗೆ ಸೇರಿದ ಕೋಳಿ ಫಾರ್ಮ್ನಲ್ಲಿ ನಡೆದಿದೆ. ಸದ್ಯ ಇದರಿಂದ ಬಳ್ಳಾರಿ ಜನರು ಆತಂಕಗೊಂಡಿದ್ದಾರೆ. ಕಪಗಲ್ ಗ್ರಾಮದ ಸುತ್ತ ಜಿಲ್ಲಾಡಳಿತ ಹೈ ಅಲಟ್೯ ಘೋಷಣೆ ಮಾಡಿದೆ. ಹತ್ತು ಕಿಮೀ ಅಂತರದಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos