ಮೊಯ್ಲಿ ಅಥವಾ ಮತ್ಯಾರೋ ಹೇಳಿದರೆ ಯಾರೂ ಸಿಎಂ ಅಗಲ್ಲ, ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ: ಸಿದ್ದರಾಮಯ್ಯ
ವೀರಪ್ಪ ಮೊಯ್ಲಿ ಹೇಳಿರುವ ಬಗ್ಗೆ ಯಾರೇನೇ ಹೇಳಲಿ, ಚರ್ಚೆ ಮಾತ್ರ ಜೋರಾಗಿ ಆಗುತ್ತಿದೆ. ಮೊಯ್ಲಿ ಯಾಕೆ ಹೇಳಿದರು, ಪಕ್ಷದ ಹೈಕಮಾಂಡ್ ಜೊತೆ ಅವರು ಸಂಪರ್ಕದಲ್ಲಿದ್ದಾರೆಯೇ ಅನ್ನೋದು ಅವರಿಗಷ್ಟೇ ಗೊತ್ತಿರುವ ವಿಚಾರ. ಮೊಯ್ಲಿ 85-ವರ್ಷ ವಯಸ್ಸಿನ ಹಿರಿಯ ನಾಯಕ, ಹಲವಾರು ಹುದ್ದೆಗಳನ್ನು ನಿಭಾಯಿಸಿದವರು ಮತ್ತು ದೊಡ್ಡ ಸಾಹಿತಿಯೂ ಹೌದು. ಹಾಗಾಗೇ, ಅವರು ಮಾತಾಡಿದ್ದು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ.
ಬೆಂಗಳೂರು, ಮಾರ್ಚ್ 03: ಈ ಅವಧಿಯಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ (Veerappa Moily) ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊಯ್ಲಿ ಅಥವಾ ಮತ್ಯಾರೋ ಹೇಳೋದ್ರಿಂದ ಯಾರೂ ಮುಖ್ಯಮಂತ್ರಿ ಅಗಲ್ಲ, ಅದು ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವ ವಿಷಯ ಎಂದರು. ಹೈಕಮಾಂಡ್ ನೀಡುವ ಪ್ರತಿ ಸೂಚನೆಯನ್ನು ತಾನು ಪಾಲಿಸುವುದಾಗಿ ಮುಖ್ಯಮಂತ್ರಿ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವ್ಹೀಲ್ ಚೇರ್ನಲ್ಲಿ ಹೋಗಲು ವಿಧಾನಸೌಧದಲ್ಲಿ ರ‍್ಯಾಂಪ್ ಅಳವಡಿಕೆ
Latest Videos