Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಬದಲಾವಣೆ: ಸಿದ್ದರಾಮಯ್ಯ-ಡಿಕೆಶಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀ!

ಕರ್ನಾಟಕ ಕಾಂಗ್ರೆಸ್​​​ನ ಶಿವನಾಟ, ಇಡೀ ಕಾಂಗ್ರೆಸ್​​ ಪಾಳಯವನ್ನೇ ನಿದ್ದೆಗೆಡಿಸಿ ಜಾಗರಣೆ ಮಾಡಿಸಿದೆ. ಈ ಜಾಗರಣೆ ಅಧಿಕಾರದ ಜಾಗಾರ ಕಣಿವೆಯಲ್ಲಿ ಪಂಚತಂತ್ರದ ಕದನಕ್ಕೆ ಪಂಚಾಕ್ಷರಿ ಬರೆದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್​ ಅವರ ಒಂದೊಂದು ನಡೆ- ನುಡಿಯೂ ರಾಜ್ಯ ರಾಜಕೀಯದಲ್ಲಿ ಸಂಚಲ ಸೃಷ್ಟಿಸಿದೆ. ಇದರ ನಡುವೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಅದು ಇದೇ ಅವಧಿಯಲ್ಲಿ ಸಿಎಂ ಆಗುತ್ತಾರೆ ಎಂದು ಭೈರವಿ ಅಮ್ಮ ಭವಿಷ್ಯ ನುಡಿದಿದ್ದಾರೆ. ಇನ್ನೊಂದೆಡೆ ಕೋಡಿಹಳ್ಳಿ ಶ್ರೀಗಳು ಮಹತ್ವದ ಭವಿಷ್ಯ ನುಡಿದಿದ್ದಾರೆ.

ಸಿಎಂ ಬದಲಾವಣೆ: ಸಿದ್ದರಾಮಯ್ಯ-ಡಿಕೆಶಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀ!
Kodi Mutt Swamiji Prediction
Follow us
ರಮೇಶ್ ಬಿ. ಜವಳಗೇರಾ
|

Updated on: Mar 02, 2025 | 1:02 PM

ಯಾದಗಿರಿ, (ಮಾರ್ಚ್ 02): ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗ ಹಲವು ದಿನಗಳಿಂದ ಜೋರಾಗುತ್ತಿದೆ. ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಲೇಬೆಕೆಂದು ಡಿಕೆ ಶಿವಕುಮಾರ್, ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದಕ್ಕೆ ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಡಿಕೆ ಶಿವಕುಮಾರ್ ಅವರ ನಡೆ, ನುಡಿಗಳು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್​ನಲ್ಲಿ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೋಡಿಹಳ್ಳಿ ಶ್ರೀ ಮಹತ್ವದ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಯುಗಾದಿ ನಂತರ ದೇಶ-ವಿದೇಶಗಳಲ್ಲಿ ಏನೇನಾಗಲಿದೆ ಎನ್ನುವ ಆಘಾತಕಾರಿ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಹಾಲಮತ ಸಮಾಜದವರಿಂದ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ

ಯಾದಗಿರಿಯಲ್ಲಿಂದು ಮಾತನಾಡಿರುವ ಕೋಡಿಹಳ್ಳಿ ಶ್ರೀಗಳು, ಎಲ್ಲಾ ಸಮುದಾಯದ ಎಲ್ಲಾ ಜಾತಿ ಎಲ್ಲಾ ವರ್ಗದವರು ಈ ಭೂಮಿ ಮೇಲೆ ವಾಸವಿದ್ದಾರೆ. ಪ್ರಾಚೀನ ಕಾಲದಿಂದಲೂ ಹಾಲಮತ ಸಮಾಜ ಅಂತ ಆಂದ್ರೆ ಅಡವಿಯಲ್ಲಿದ್ದು ಕುರಿಗಳನ್ನ ಸಾಕೋದು ಮಾಡ್ತಾರೆ. ಕುರಿಯ ಇಕ್ಕಿಯಲ್ಲಿ ಲಿಂಗವನ್ನ ಕಂಡವರು. ಪ್ರಕೃತಿ ಮೇಲೆ ಗಾಳಿಯ ಮೇಲೆ ಭೂಮಿಯ ಮೇಲೆ ಅವರು ಅಡವಿಯಲ್ಲಿ ಇದ್ದು ಕಂಡದ್ದು ನೋಡಿದ್ದ ಅನುಭವಸಿದ್ದನ್ನ ಹೇಳುತ್ತಾ ಬಂದಿದ್ದಾರೆ ಅದು ಕುರುವಿನ ರಟ್ಟು. ಹಾಲು ಕೆಟ್ಟರು ಹಾಲಮತ ಸಮಾಜ ಕೆಡುವುದಿಲ್ಲ ಅಂತ ಹೇಳುತ್ತಾರೆ. ಇವತ್ತು ಹಾಲಮತ ಸಮಾಜದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ. ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಅವರಾಗೇ ಬಿಡಬೇಕು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗುತ್ತೆ ಎಂದು ಯುಗಾದಿ ಮೇಲೆ ಹೇಳುತ್ತೇನೆ ಎಂದಿದ್ದಾರೆ.

ಈ ಮೂಲಕ ಕೋಡಿಹಳ್ಳಿ ಶ್ರೀ ಪರೋಕ್ಷವಾಗಿ ಸದ್ಯ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ಕರ್ನಾಟಕಕ್ಕೆ ತೊಂದರೆ ತಾಪತ್ರೆಗಳಿಲ್ಲ

ನಮ್ಮಲ್ಲಿ ಎರಡು ಭಾಗ ಮಾಡುತ್ತಾರೆ. ಒಂದು ಸಂಕ್ರಾಂತಿ ಭವಿಷ್ಯ ಇನ್ನೊಂದು ಯುಗಾದಿ ಭವಿಷ್ಯ ಅಂತ. ಸಂಕ್ರಾಂತಿ ಭವಿಷ್ಯ ರಾಜರುಗಳಿಗೆ ಮಹಾರಾಜರುಗಳಿಗೆ ದೊಡ್ಡ ವ್ಯಾಪಾರಸ್ಥರಿಗೆ ಸಂಕ್ರಾಂತಿ ಭವಿಷ್ಯ ಇರುತ್ತೆ. ಯುಗಾದಿ ಮೇಲೆ ಬರೋದು ಚಂದ್ರಮಾನ ಯುಗಾದಿ. ಚಂದ್ರನನ್ನ ಆಧಾರವಾಗಿಟ್ಟುಕೊಂಡು ಮಳೆ,ಬೆಳೆ ,ಆಳ್ವಿಕೆಗಳು,ರಾಜರುಗಳು,ಅವಘಡಗಳು,ದುಖ ದುಮ್ಮಾನಗಳು,ಸಂತೋಷಗಳು ಇದರ ಮೇಲೆ ಹೇಳೆದೋ ಯುಗಾದಿ ಸಮಸ್ರಫಲ. ಯುಗಾದಿ ಇನ್ನೊಂದು ತಿಂಗಳು ದೂರವಿದೆ. ಅದರ ಮೇಲೆ ಹೇಳೋದು ಸ್ವಲ್ಪ ಕಷ್ಟ. ನಮ್ಮ ಪ್ರಕಾರ ಬರುವಂತ ದಿನಗಳಲ್ಲಿ ಕರ್ನಾಟಕಕ್ಕೆ ತೊಂದರೆ ತಾಪತ್ರೆಗಳಿಲ್ಲ. ಮಳೆ ಬೆಳೆ ಚೆನ್ನಾಗಿಯಿದೆ ಸುಭಿಕ್ಷಿತೆ ಇರುತ್ತೆ ಯಾವುದೇ ತೊಂದರೆಗಳು ಕಾಣುತ್ತಿಲ್ಲ.

ಈ ವರ್ಷ ಭೀಕರಕತೆ ಕಾಡುವ ಲಕ್ಷಣಗಳಿವೆ

ಯುಗಾದಿಯ ಬಳಿಕ ಮತ್ತೆ ಜಾಗತಿಕ ಬಗ್ಗೆ ಬಹಳ ಅಜಾಗುರಕತೆಯಿದೆ. ಹೋದ ವರ್ಷಕ್ಕಿಂತ ಈ ವರ್ಷ ಇನ್ನು ಭೀಕರಕತೆ ಕಾಡುವ ಲಕ್ಷಣಗಳಿವೆ. ಭೂಮಿ ಅಗಲಾಗೊಂದು(ಭೂಕಂಪ) ಸಾವು ನೋವು ಸಂಭವಿಸೋದು, ಕಟ್ಟಡಗಳು ನೆಲಕುರುಳೋದು ಮುಂದುವರೆಯುತ್ತೆ. ಭೂ ಸುನಾಮಿ,ಜಲ ಸುನಾಮಿ,ಭಾಹ್ಯ ಸುನಾಮಿ ಅಂತ ಹೇಳುತ್ತಿವೆ. ಇಲ್ಲಿವರೆಗೆ ಬರಿ ಜಲ ಸುನಾಮಿ ಆಗುತ್ತಿತ್ತು. ಈ ಬಾರಿ ಭುಸುನಾಮಿ ಕೂಡ ಆಗುತ್ತೆ ಎಂದು ಕೋಡಿಹಳ್ಳಿ ಶ್ರೀ ಸ್ಫೋಟಕ ಭವಿಷ್ಯ ನುಡಿದಿದ್ದು, ಜೊತೆಗೆ ಭಾಹ್ಯಕಾಶದಲ್ಲೂ ಸುನಾಮಿ ಆಗುತ್ತೆ. ಅದನ್ನ ಯುಗಾದಿ ನಂತರ ಹೇಳುತ್ತೇನೆ ಎಂದರು.

ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ