AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಶಾಸಕ ಆಪ್ತನ ಕೊಲೆಗೆ ಬಿಬಿಎಂಪಿ ಎಲೆಕ್ಷನ್ ಕಾರಣವಾಯ್ತಾ? ಹತ್ಯೆ ಹಿಂದಿನ ಸಿಕ್ರೇಟ್

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ಹೈದರ್‌ ಅಲಿಯನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಆದರೀಗ ರೌಡಿಶೀಟರ್ ಹೈದರ್ ಅಲಿ ಮರ್ಡರ್ ಮಿಸ್ಟರಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕೊಲೆ ಹಿಂದೆ ಬಿಬಿಎಂಪಿ ಚುನಾವಣೆ ವಾಸನೆ ಕೇಳಿ ಬಂದಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡನ ತನಿಖೆ ನಡೆಸುವಂತೆ ಒತ್ತಾಯ ಕೇಳಿ ಬಂದಿದೆ. ರೌಡಿಶೀಟರ್ ಹೈದರ್ ಅಲಿ ಕೊಲೆ ಹಿಂದಿನ ಸಿಕ್ರೇಟ್ ಕಹಾನಿ ಇಲ್ಲಿದೆ.

ಕಾಂಗ್ರೆಸ್​ ಶಾಸಕ ಆಪ್ತನ ಕೊಲೆಗೆ ಬಿಬಿಎಂಪಿ ಎಲೆಕ್ಷನ್ ಕಾರಣವಾಯ್ತಾ? ಹತ್ಯೆ ಹಿಂದಿನ ಸಿಕ್ರೇಟ್
Hyder Ali
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Mar 02, 2025 | 11:58 AM

Share

ಬೆಂಗಳೂರು, (ಮಾರ್ಚ್ 02): ಶಾಸಕ ಹ್ಯಾರಿಸ್​ ಆಪ್ತ ಕಾಂಗ್ರೆಸ್ ಮುಖಂಡ ಹೈದರ್‌ ಅಲಿ ಹಿಂದೆ ಒಂದೊಂದೇ ಮಿಸ್ಟರಿಗಳು ಕೇಳಿಬರುತ್ತಿದ್ದು, ರೌಡಿಶೀಟರ್ ಹೈದರ್ ಅಲಿ ಹತ್ಯೆಯ ಹಿಂದೆ ಕಾಣದ ಕೈಗಳು ಕೈಚಳಕ ತೋರಿಸಿವೆ. ಬಿಬಿಎಂಪಿ ಚುನಾವಣೆಗಾಗಿ ಹೈದರ್ ಅಲಿಯ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೌದು…ರೌಡಿಶೀಟರ್ ಹೈದರ್ ಅಲಿ ಹತ್ಯೆ ಹಿಂದೆ ಯೂತ್ ಕಾಂಗ್ರೆಸ್ ನ ಅಬ್ಬಾಸ್ ಅಲಿ ಕೈವಾಡ ಇದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ ಪ್ರಕರಣದ ಪ್ರಮುಖ ಆರೋಪಿ ನಾಜು ಜೊತೆ ಕೈ ಜೋಡಿಸಿ ಕೊಲೆ ಮಾಡಿಸಲಾಗಿದೆ ಎಂದು ಹೈದರ್ ಅಣ್ಣ ಸಲೀಂ ಮತ್ತು ಅತ್ತಿಗೆ ಆರೋಪಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿದ್ದು, ಹೈದರ್ ಮತ್ತು ಅಣ್ಣ ತಯಾರಿಸಿ ನಡೆಸಿದ್ರು. ಏರಿಯಾದಲ್ಲಿ ಕೂಡ ಒಳ್ಳೆಯ ಹೆಸರಿತ್ತು. ತಮಗೆ ಟಿಕೆಟ್ ಸಿಗುತ್ತೆ ಎಂದು ನಾಜು ಆಂಡ್ ಗ್ಯಾಂಗ್ ಮೂಲಕ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ.

ಹೈದರ್ ಕೊಲೆ ಮಾಡಿ ಕುಟುಂಬವನ್ನು ಅನಾಥರನ್ನಾಗಿ ಮಾಡಿದ್ರು ಅಂತಾ ಹೈದರ್ ಅಲಿ ಸಹೋದರ ಸಲೀಂ ಕಣ್ಣೀರು ಹಾಕಿದ್ದಾರೆ. 2017 ರಲ್ಲಿ ಕೂಡ ಹೈದರ್ ಮೇಲೆ ಅಟ್ಯಾಕ್ ಆಗಿತ್ತು. ಈ ವೇಳೆ ಹೈದರ್ ಪ್ರಾಣಾಪಾಯದಿಂದ ಪಾರಾಗಿದ್ದ. ನಂತರ ಕಳೆದ ವರ್ಷ ರಂಜಾನ್ ವೇಳೆ ರಾಜಿ ಸಂಧಾನ ಮಾಡಲಾಗಿತ್ತು. ಸಂಧಾನದ ಬಳಿಕ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ರಂತೆ. ಸ್ನೇಹ ಅಂತಾ ಪ್ರಮಾಣ ಮಾಡಿ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ ಅಂತಾ ಸಲೀಂ ಆರೋಪ. ಅಲ್ಲದೇ ಏರಿಯಾದಲ್ಲಿ ತಮ್ಮದೇ ಹವಾ ನಡೆಯಬೇಕು. ನಾವೇ ಎಲ್ಲಾ ಅಂತಾ ಡಾಮಿನೇಷನ್ ಮಾಡ್ತಾ ಇದ್ದು, ಹೈದರ್ ಅಲಿ ಬೆಳವಣಿಗೆ ಸಹಿಸದೇ ಈ ಹತ್ಯೆ ನಡೆದಿದೆ ಅನ್ನೋದು ಸಲೀಂ ಆರೋಪ.

ಇದನ್ನೂ ಓದಿ: ಕಾಂಗ್ರೆಸ್‌ ಶಾಸಕನ ಆಪ್ತ ಹತ್ಯೆ: ಸುಪಾರಿ ಕೊಲೆ ಶಂಕೆ.. ಮಾಸ್ಟರ್ ಮೈಂಡ್ ಯಾರು..?

ಇನ್ನು ಯುವಕನಿಗೆ ಥಳಿಸುವ ವಿಡಿಯೋ ಒಂದು ವೈರಲ್ ಆಗ ತೊಡಗಿದೆ. ವಿಡಿಯೋದಲ್ಲಿ ಅದರಲ್ಲಿ ಅಬ್ಬಾಸ್ ಕೂಡ ಇದ್ದಾನೆ ಎನ್ನಲಾಗಿದೆ. ಯುವಕ ಬಿಟ್ಟು ಬಿಡುವಂತೆ ಕೈ ಮುಗಿದು ಅಂಗಲಾಚಿ ಬೇಡಿಕೊಂಡ್ರು ಆರೋಪಿಗಳು ಪೈಪ್ ನಿಂದ ಮನಬಂಧಂತೆ ಹಲ್ಲೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಕಮೀಷನರ್ ಬಿ. ದಯಾನಂದ್ ಸೂಚನೆ ನೀಡಿದ್ದಾರೆ.

ತನಿಖೆ ನಡೆಸಿ ವರದಿ ನೀಡುವಂತೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಅವರಿಗೆ ಸೂಚಿಸಲಾಗಿದೆ. ಸದ್ಯ ಹೈದರ್ ಅಲಿ ಕೊಲೆ ಪ್ರಕರಣದಲ್ಲಿ ಪೊಲೀಸರು ಏಳು ಮಂದಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅದ್ರೆ ಈ ನಡುವೆ ಹೊಸ ಕಹಾನಿಗಳು ಬೆಳಕಿಗೆ ಬರ್ತಾ ಇದ್ದು, ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದಷ್ಟೆ ಸತ್ಯ ಹೊರ ಬರಬೇಕಿದೆ.

ಕೊನೆ ನಡೆದಿದ್ದು ಎಲ್ಲಿ?

ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಾರ್‌ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದ ಹೈದರ್‌ ಅಲಿ, ಸ್ನೇಹಿತನ ಜತೆ ಕಾರಿನಲ್ಲಿಆನೆಪಾಳ್ಯದ ತನ್ನ ಮನೆಗೆ ಹೋಗುತ್ತಿದ್ದಾಗ ನಾಲ್ಕೈದು ದುಷ್ಕರ್ಮಿಗಳು ದಾಳಿ ಮಾಡಿದ್ದರು. ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿ ಬಂದು ಫುಟ್ಬಾಲ್‌ ಸ್ಟೇಡಿಯಂ ಬಳಿ ಅಡ್ಡಗಟ್ಟಿದ್ದರು. ಆಗ ಕಾರಿನಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಮುಂದಾದ ಹೈದರ್‌ ಅಲಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಂದಿದ್ದರು. ಈ ವೇಳೆ ಹೈದರ್‌ ಅಲಿಯನ್ನು ರಕ್ಷಿಸಲು ಮುಂದಾದ ಆತನ ಸ್ನೇಹಿತನ ಮೇಲೂ ದುಷ್ಕರ್ಮಿಗಳು ಹಲ್ಲೆನಡೆಸಿದ್ದರು.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್